ಚೀನಾ ಮಾರುಕಟ್ಟೆಯತ್ತ ರೆನೊ ಎಲೆಕ್ಟ್ರಿಕ್ ಫ್ಲೂಯನ್ಸ್ ನೋಟ
ಫ್ರಾನ್ಸ್‌ನ ವಾಹನ ತಯಾರಕ ಸಂಸ್ಥೆಯಾಗಿರುವ ರೆನೊ, ಕೆಳೆದ ಕೆಲವು ವರ್ಷಗಳಿಂದಲೇ ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತಲ್ಲೀನವಾಗಿದೆ.
ಇದೀಗ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನವನ್ನು ನೆರೆಯ ಚೀನಾ ರಾಷ್ಟ್ರಕ್ಕೆ ಪರಿಚಯಿಸಲು ನಿರ್ಧರಿಸಿದೆ. ಭಾರತದಲ್ಲೂ ಲಭ್ಯವಿರುವ ಫ್ಲೂಯನ್ಸ್ ಸೆಡಾನ್ ಕಾರು ಕೆಲವು ಆಯ್ದ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಈ ಪೈಕಿ ಚೀನಾ ಸಹ ಪ್ರಮುಖವಾಗಿದೆ. ಆದರೆ ಚೀನಾದಲ್ಲಿ ಬಿಡುಗಡೆಯಾಗಲಿರುವ ಫ್ಲೂಯಲ್ ಎಲೆಕ್ಟ್ರಿಕ್ ಕಾರಾಗಿರಲಿದೆ. ಇನ್ನು ವಿಶೇಷವೆಂದರೆ ಚೀನಾದಲ್ಲೇ ವಿದ್ಯುತ್ ಚಾಲಿತ ಫ್ಲೂಯನ್ಸ್ ಅಭಿವೃದ್ಧಿಪಡಿಸಲಾಗುವುದು.
ಈ ಸಂಬಂಧ ಸ್ಥಳೀಯ ಸಂಸ್ಥೆಯೊಂದಿಗೆ ಹೊಂದಾಣಿಕೆ ಮಾಡಕೊಳ್ಳಲಾಗುವುದು. ಸದ್ಯ ತನ್ನ ಜೊತೆಗಾರ ಡಾನ್‌ಫೆಂಗ್ ಮೋಟಾರ್ಸ್ ಜೊತೆ ಪಾಲುದಾರಿಕೆ ಹೊಂದಿರುವ ರೆನೊ ತನ್ನ ಸಾನಿಧ್ಯವನ್ನು ಹೊಂದಿದೆ.


Click it and Unblock the Notifications








