ಮಲೇಷ್ಯಾದಲ್ಲಿ ರೆನೊ ಫ್ಲೂಯನ್ಸ್ ಅನಾವರಣ

By Nagaraja

ಮಲೇಷ್ಯಾದ ಸ್ಥಳೀಯ ಟ್ಯಾನ್ ಚಾಂಗ್ ಮೋಟಾರ್ಸ್ ಜತೆ ಪಾಲುದಾರಿಕೆ ಹಂಚಿಕೊಂಡಿರುವ ಫ್ರಾನ್ಸ್ ವಾಹನ ತಯಾರಕ ಸಂಸ್ಥೆಯಾಗಿರುವ ರೆನೊ, ಅಲ್ಲಿನ ಸ್ಥಳೀಯ ಮಾರುಕಟ್ಟೆಗಾಗಿ ನೂತನ ಫ್ಲೂಯನ್ಸ್ ಸೆಡಾನ್ ಕಾರು ಅನಾವರಣಗೊಳಿಸಿದೆ.

ಈ ಮೂಲಕ ಮಲೇಷ್ಯಾ ಸೇರಿದಂತೆ ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಗಟ್ಟಿಪಡಿಸುವ ಇರಾದೆಯನ್ನು ರೆನೊ ಹೊಂದಿದೆ. ನಿಮ್ಮ ಮಾಹಿತಿಗಾಗಿ, ರೆನೊ ಫ್ಲೂಯನ್ಸ್ ಈಗಾಗಾಲೇ ಭಾರತ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದೆ.

Renault Fluence

ಪ್ರಸ್ತುತ ಮಲೇಷ್ಯಾ ಮಾರುಕಟ್ಟೆ ಪ್ರವೇಶಿಸಿರುವ ರೆನೊ ಫ್ಲೂಯನ್ಸ್, ಅಲ್ಲಿನ ಟ್ಯಾನ್ ಚಾಂಗ್ ಮೋಟಾರ್ಸ್ ಘಟಕದಲ್ಲಿ ಸ್ಥಳೀಯವಾಗಿ ಉತ್ಪಾದನೆಯಾಗಲಿದೆ. ಇದು ಇನ್ನಷ್ಟು ಸ್ಪರ್ಧಾತ್ಮಕ ದರಗಳಲ್ಲಿ ಪರಿಚಯಿಸಲು ನೆರವಾಗಲಿದೆ.

ರೆನೊ ನಿಸ್ಸಾನ್‌ನ ಸಿ ಫ್ಲಾಟ್‌ಫಾರ್ಮ್ ತಲಹದಿಯಲ್ಲಿ ನೂತನ ಕಾರು ನಿರ್ಮಾಣವಾಗಲಿದೆ. ಅಂದ ಹಾಗೆ 2014 ರೆನೊ ಫ್ಲೂಯನ್ಸ್ ಅಲ್ಟ್ರಾ ಸಿಲ್ವರ್, ಬ್ಲ್ಯಾಕ್ ಮೆಟ್ಯಾಲಿಕ್, ಮಾರ್ಸ್ ಗ್ರೇ ಮತ್ತು ವೈಟ್ ಪಿಯರ್ಲ್ ಬಣ್ಣಗಳಲ್ಲಿ ಲಭ್ಯವಿರಲಿದೆ.

ನೂತನ ರೆನೊ ಫ್ಲೂಯನ್ಸ್ 2.0 ಲೀಟರ್ 4 ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 143 ಅಶ್ವಶಕ್ತಿ (195 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಕೇವಲ 10 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ಅಂತೆಗೆ ಗಂಟೆಗೆ ಗರಿಷ್ಠ 195 ಕೀ.ಮೀ. ವೇಗತೆಯಲ್ಲಿ ಸಂಚರಿಸಲಿದೆ.

More from DriveSpark

Article Published On: Saturday, May 24, 2014, 12:57 [IST]
English summary
Renault have unveiled their new facelifted version of the Fluence in Malaysia, which is already on sale in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+