ಅಮೆರಿಕದಲ್ಲಿ ಕಡ್ಡಾಯವಾಗಲಿದೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ
ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡುವುದು ಅತಿ ಅಗತ್ಯವಾಗಿರುತ್ತದೆ. ವಾಹನ ಜಗತ್ತಿನಲ್ಲಂತೂ ದಿನನಿತ್ಯ ನೂತನ ತಂತ್ರಾಂಶಗಳ ಅವಿಷ್ಕಾರವಾಗುತ್ತಿದೆ. ಹಾಗೆ ನೋಡುವಾಗ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾದ ಬಳಕೆ ಈಗಾಗಲೇ ಚಾಲ್ತಿಯಲ್ಲಿದ್ದರೂ ಇದುವರೆಗೆ ಕಡ್ಡಾಯವಾಗಿರಲಿಲ್ಲ.
ಆದರೆ ಇನ್ನು ಮುಂದೆ ಅಮೆರಿಕದಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಬಳಕೆ ಕಡ್ಡಾಯವಾಗಲಿದೆ. ಈ ಮೂಲಕ ಸುರಕ್ಷಿತ ಚಾಲನೆಯನ್ನು ಅಮೆರಿಕದ ರಾಷ್ಟ್ರೀಯ ಹೆದ್ದಾರಿ ಸುರಕ್ಷಾ ಸಾರಿಗೆ ಏಜೆನ್ಸಿ (ಎನ್‌ಎಚ್‌ಟಿಎಸ್ಎ) ಗುರಿಯಾಗಿರಿಸಿಕೊಳ್ಳುತ್ತಿದೆ.

ವರದಿಗಳ ಪ್ರಕಾರ 2018 ಮೇ 1ರಿಂದ ಈ ನಿಯಮ ಅಮೆರಿಕದಲ್ಲಿ ಕಡ್ಡಾಯವಾಗಲಿದೆ. ಆದರೆ ಎಲ್ಲ ಕಾರುಗಳಿಗೂ ಈ ನಿಯಮ ಬಾಧಕವಲ್ಲ. ಬದಲಾಗಿ 10,000 ಪೌಂಡ್‌ಗಿಂತಲೂ ಮೇಲ್ಪಟ್ಟ ಕಾರುಗಳಿಗೆ ಮಾತ್ರ ಇದು ಅನ್ವಯಿಸುತ್ತದೆ.
ಪಾರ್ಕಿಂಗ್ ಸೆನ್ಸಾರ್‌ಗೆ ಸಮಾನವಾಗಿರುವ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹಿಂದುಗಡೆ ಚಿತ್ರಣವನ್ನು ವೀಡಿಯೋ ಮೂಲಕ ತೋರಿಸುತ್ತದೆ. ಇಂತಹ ವೈಶಿಷ್ಟ್ಯಗಳನ್ನು ಕೆಲವು ಕಾರು ತಯಾರಕ ಸಂಸ್ಥೆಗಳು 'ಸ್ಟಾಂಡರ್ಡ್' ಆಗಿ ನೀಡುತ್ತಿದೆ.

ಅಂದ ಹಾಗೆ ಈ ನಿಯಮ ಭಾರತದಲ್ಲೂ ಕಡ್ಡಾಯವಾಗಬೇಕೇ? ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...
ಮಿಸ್ ಮಾಡದಿರಿ: ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








