ನೀವು ಅಂಬುಲೆನ್ಸ್‌ಗಳಿಗೆ ಹಾದಿ ಬಿಟ್ಟು ಕೊಡುತ್ತೀರಾ?

By Nagaraja

ಇದು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯ. ಆದರೆ ನಗರ ಪ್ರದೇಶಗಳ ಟ್ರಾಫಿಕ್‌ಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ಅಂಬುಲೆನ್ಸ್ ಗಳು ಎಷ್ಟೇ ಸೈರನ್ ಮೊಳಗಿಸಿದರೂ ಯಾರೂ ಹಾದಿ ಬಿಟ್ಟುಕೊಡಲಾರರು. ಕೆಲವರಂತೂ ಇದೇ ಸರಿಯಾದ ಸಂದರ್ಭ ಅಂದುಕೊಂಡು ಗ್ರೀನ್ ಲೈಟ್ ಬಿದ್ದ ತಕ್ಷಣ ತಮ್ಮ ವಾಹನದ ವೇಗವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾರೆ.

ಇದೇ ಕಾರಣಕ್ಕಾಗಿ ಜೀವರಕ್ಷಕ ಅಂಬುಲೆನ್ಸ್‌ಗಳು ತುಂಬಾನೇ ಕ್ಲಿಷ್ಟಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇಲ್ಲಿ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಅಂಬುಲೆನ್ಸ್‌ಗಳು ಒಂದು ಕ್ಷಣ ವಿಳಂಬವಾದರೂ ಜೀವಕ್ಕೆ ಅಪಾಯ ಎಂಬುದನ್ನು ನಮ್ಮ ಸಮಾಜ ಮರೆತಂತಿದೆ.

ವಿದೇಶಿ ರಾಷ್ಟ್ರಗಳನ್ನು ಹೋಲಿಸಿದರೆ ಭಾರತದಲ್ಲಿ ಇಂತಹ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂಬ ಬೆರಗುಗೊಳಿಸುವ ವರದಿಯನ್ನು ಅಧ್ಯಯನ ಸಂಸ್ಥೆಯೊಂದು ಹೊರಗೆಡವಿದೆ.

ವಿಪರೀತ ವಾಹನ ದಟ್ಟಣೆಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಬೇಕು ಬೇಕಂತಲೇ ಅಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಹಾದಿ ಬಿಟ್ಟು ಕೊಟ್ಟದೆ ಇರುವುದು ಶಿಕ್ಷಾರ್ಹವೇ ಸರಿ. ನಾವು ಇವೆಲ್ಲಕ್ಕೂ ಸಮೂಹ ಅಥವಾ ಆಡಳಿತ ವರ್ಗವನ್ನು ದೂರಬಹುದು. ಆದರೆ ಇದಕ್ಕಿಂತ ಮೊದಲು ನಮ್ಮಲ್ಲಿ ನಾವೇ ಇಂತಹದೊಂದು ಪ್ರಶ್ನೆ ಕೇಳಿದರೆ ಒಳ್ಳೆಯದು.

ಇಲ್ಲಿ ಕೊಡಲಾಗಿರುವ ವೀಡಿಯೋದಲ್ಲಿ ಭಾರತ ಹಾಗೂ ವಿದೇಶಿ ಟ್ರಾಫಿಕ್‌ ಪರಿಸ್ಥಿತಿಯಲ್ಲಿ ಅಂಬುಲೆನ್ಸ್‌ಗಳಿಗೆ ಹಾದಿ ಬಿಟ್ಟುಕೊಡಲಾಗುತ್ತದೇಯೆ ಎಂಬುದನ್ನು ಕೂಲಂಕುಷವಾಗಿ ವಿಮರ್ಶಿಸಲಾಗಿದೆ. ವೀಡಿಯೋ ವೀಕ್ಷಿಸಿದ ಬಳಿಕ ಭಾರತದಲ್ಲಿ ಎದುರಾಗುತ್ತಿರುವ ಇಂತಹ ಸಮಸ್ಯೆಗಳಿಗೆ ಜವಾಬ್ದಾರರು ಯಾರು? ಎಂಬುದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಲು ಮಾತ್ರ ಮರೆಯದಿರಿ.

<iframe width="600" height="450" src="//www.youtube.com/embed/hZ1hCZtZyes?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Wednesday, July 16, 2014, 11:23 [IST]
English summary
Living in the city, tackling your way through traffic, one can often hear an ambulance siren. Some say prayers for the person inside and some just ignore it. How many times has one thought of helping?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+