ಭಾರತಕ್ಕೆ ಬಂದಿತೇ ಸ್ಯಾಂಗ್ಯೊಂಗ್ ಎಕ್ಸ್100 ಕಾಂಪಾಕ್ಟ್ ಎಸ್‌ಯುವಿ ?
ಸ್ಯಾಂಗ್ಯೊಂಗ್‌ನ ಬಹುನಿರೀಕ್ಷಿತ ಎಕ್ಸ್100 ಕಾಂಪಾಕ್ಟ್ ಎಸ್‌ಯುವಿ 2015ನೇ ಸಾಲಿನಲ್ಲಿ ಕೊರಿಯಾ ಮಾರುಕಟ್ಟೆಯನ್ನು ತಲುಪಲಿದೆ. ಇದನ್ನು ಸ್ಯಾಂಗ್ಯೊಂಗ್ ಮುಖ್ಯಸ್ಥ ಲೀ ಯೊ ಖಚಿತಪಡಿಸಿದ್ದಾರೆ.
2015 ಜನವರಿ ತಿಂಗಳಲ್ಲಿ ಕೊರಿಯಾ ಪ್ರವೇಶಿಸಲಿರುವ ಸ್ಯಾಂಗ್ಯೊಂಗ್ ತದಾ ಬಳಿಕ ಯುರೋಪ್ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗಳನ್ನು ಪ್ರವೇಶಿಸಲಿದೆ.

ಎಂಟ್ರಿ ಲೆವೆಲ್ ಕ್ರೀಡಾ ಬಳಕೆಯ ವಾಹನ ಆಗಿರುವ ಎಕ್ಸ್100 ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ. ಕಳೆದ ವಾರವಷ್ಟೇ ಇದರ XIV ಮತ್ತು XIV ಅಡ್ವೆಂಚರ್ ಕಾನ್ಸೆಪ್ಟ್ ಮಾದರಿಗಳು ಪ್ಯಾರಿಸ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದ್ದವು.
1.6 ಲೀಟರ್ ಪೆಟ್ರೋಲ ಮತ್ತು ಡೀಸೆಲ್ ಮಾದರಿಗಳಿಂದ ನಿಯಂತ್ರಿಸಲ್ಪಡುವ ಎಕ್ಸ್100, 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಇದು ಟು ವೀಲ್ ಜೊತೆಗೆ ಫೋರ್ ವೀಲ್ ಡ್ರೈವ್ ಆಯ್ಕೆಯೊಂದಿಗೆ ಆಗಮನವಾಗಲಿದೆ.
ಇನ್ನುಳಿದಂತೆ ಏಳು ಏರ್ ಬ್ಯಾಗ್, ಇಎಸ್‌ಸಿ, ಹಿಲ್ ಅಸಿಸ್ಟ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ರಿವರ್ಸ್ ಕ್ಯಾಮೆರಾ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.
ಇದು ಭಾರತೀಯ ರುಪಾಯಿ ಪ್ರಕಾರ 15 ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮನವಾಗಲಿದೆ. ಅಂದ ಹಾಗೆ ಸ್ಯಾಂಗ್ಯೊಂಗ್ ಜೊತೆಗಾರನಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಈ ಬಹುನಿರೀಕ್ಷಿತ ಕಾಂಪಾಕ್ಟ್ ಎಸ್‌ಯುವಿ ಮಾದರಿಯನ್ನು ಭಾರತಕ್ಕೆ ಪರಿಚಯಿಸಲಿದೆಯೇ ಎಂಬುದು ಇನ್ನು ಅಸ್ಪಷ್ಟವಾಗಿದೆ.


Click it and Unblock the Notifications








