ಮಹೀಂದ್ರಾ ಎಂಸ್ಟಾಲಿನ್ ಎಂಜಿನ್ ಪಡೆದುಕೊಳ್ಳಲಿದೆ ಸ್ಯಾಂಗ್‌ಯಾಂಗ್ ಟಿವೊಲಿ ಫೇಸ್‌ಲಿಫ್ಟ್

ಮಹೀಂದ್ರಾ ಒಡೆತನದಲ್ಲಿರುವ ದಕ್ಷಿಣ ಕೊರಿಯಾ ಮೂಲದ ಆಟೋ ಕಂಪನಿ ಸ್ಯಾಂಗ್‌ಯಾಂಗ್ ತನ್ನ ಜನಪ್ರಿಯ ಟಿವೊಲಿ ಕಾರಿನ ಫೇಸ್‌ಲಿಫ್ಟ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರಿನಲ್ಲಿ ಮಹೀಂದ್ರಾ ನಿರ್ಮಾಣದ ಹೊಸ ಎಂಸ್ಟಾಲಿನ್ ಎಂಜಿನ್ ಜೋಡಣೆ ಮಾಡಲಾಗಿದೆ.

ಮಹೀಂದ್ರಾ ಎಂಸ್ಟಾಲಿನ್ ಎಂಜಿನ್ ಪಡೆದುಕೊಳ್ಳಲಿದೆ ಟಿವೊಲಿ ಫೇಸ್‌ಲಿಫ್ಟ್

ಸ್ಯಾಂಗ್‌ಯಾಂಗ್ ಟಿವೊಲಿ ಕಾರು ವಿನ್ಯಾಸವನ್ನು ಆಧರಿಸಿ ಕಳೆದ ವರ್ಷ ಭಾರತದಲ್ಲಿ ಎಕ್ಸ್‌ಯುವಿ300 ಮಾದರಿಯನ್ನು ಬಿಡುಗಡೆಗೊಳಿದ್ದ ಮಹೀಂದ್ರಾ ಕಂಪನಿಯು ಇದೀಗ ಗ್ರಾಹಕರ ಬೇಡಿಕೆ ಆಧಾರದ ಮೇಲೆ ಎಕ್ಸ್‌ಯುವಿ300 ಮಾದರಿಯ ಎಂಜಿನ್ ಆಯ್ಕೆಯಲ್ಲಿ ಕೆಲವು ಬದಲಾವಣೆ ತಂದಿದ್ದು, ಪರ್ಫಾಮೆನ್ಸ್ ಪ್ರಿಯರಾಗಿ ಎಂಸ್ಟಾಲಿನ್ ಎಂಜಿನ್ ಮಾದರಿಯನ್ನು ಅಭಿವೃದ್ದಿಗೊಳಿಸಿ ಬಿಡುಗಡೆ ಸಜ್ಜುಗೊಂಡಿದೆ.

ಮಹೀಂದ್ರಾ ಎಂಸ್ಟಾಲಿನ್ ಎಂಜಿನ್ ಪಡೆದುಕೊಳ್ಳಲಿದೆ ಟಿವೊಲಿ ಫೇಸ್‌ಲಿಫ್ಟ್

2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಎಕ್ಸ್‌ಯುವಿ300 ಸ್ಪೋಟ್ಜ್ ಮಾದರಿಯಲ್ಲಿ ಎಂಸ್ಟಾಲಿನ್ ಎಂಜಿನ್ ಅನ್ನು ಇದೀಗ ಸ್ಯಾಂಗ್‌ಯಾಂಗ್ ಟಿವೊಲಿ ಫೇಸ್‌ಲಿಫ್ಟ್ ಕೂಡಾ ಪಡೆದುಕೊಂಡಿದ್ದು, ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

ಮಹೀಂದ್ರಾ ಎಂಸ್ಟಾಲಿನ್ ಎಂಜಿನ್ ಪಡೆದುಕೊಳ್ಳಲಿದೆ ಟಿವೊಲಿ ಫೇಸ್‌ಲಿಫ್ಟ್

ಭಾರತದಲ್ಲಿ ಇದೇ ತಿಂಗಳು ಬಿಡುಗಡೆಯಾಗಬೇಕಿದ್ದ ಮಹೀಂದ್ರಾ ಎಕ್ಸ್‌ಯುವಿ300 ಸ್ಪೋರ್ಟ್ಜ್ ಕೂಡಾ ಕರೋನಾ ವೈರಸ್ ಹಿನ್ನಲೆಯಲ್ಲಿ ವಿಳಂಬವಾಗುತ್ತಿದ್ದು, ಹೊಸ ಎಂಸ್ಟಾಲಿನ್ ಎಂಜಿನ್ ಪಡೆದುಕೊಂಡ ಟಿವೊಲಿ ಫೇಸ್‌ಲಿಫ್ಟ್ ಕಾರು ಎಕ್ಸ್‌ಯುವಿ300 ಸ್ಟೋಟ್ಜ್ ಬಿಡುಗಡೆಗೂ ಮುನ್ನವೇ ಮಾರುಕಟ್ಟೆ ಪ್ರವೇಶಿಸುತ್ತಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಮಹೀಂದ್ರಾ ಎಂಸ್ಟಾಲಿನ್ ಎಂಜಿನ್ ಪಡೆದುಕೊಳ್ಳಲಿದೆ ಟಿವೊಲಿ ಫೇಸ್‌ಲಿಫ್ಟ್

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಎಂಸ್ಟಾಲಿನ್ ಎಂದು ಹೆಸರಿಸಿರುವ ಮಹೀಂದ್ರಾ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

ಮಹೀಂದ್ರಾ ಎಂಸ್ಟಾಲಿನ್ ಎಂಜಿನ್ ಪಡೆದುಕೊಳ್ಳಲಿದೆ ಟಿವೊಲಿ ಫೇಸ್‌ಲಿಫ್ಟ್

ಹೊಸ ಎಂಜಿನ್ ಅನ್ನು ಎಕ್ಸ್‌ಯುವಿ300 ಸ್ಪೋರ್ಟ್ಜ್ ವರ್ಷನ್‌ನಲ್ಲಿ ಮಾತ್ರವೇ ಜೋಡಣೆ ಮಾಡಲಾಗಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 126-ಬಿಎಚ್‌ಪಿ ಮತ್ತು 230-ಎನ್ಎಂ ಟಾರ್ಕ್ ಉತ್ಪಾದನಾ ಸಾಮಾರ್ಥ್ಯ ಪಡೆದುಕೊಂಡಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಮಹೀಂದ್ರಾ ಎಂಸ್ಟಾಲಿನ್ ಎಂಜಿನ್ ಪಡೆದುಕೊಳ್ಳಲಿದೆ ಟಿವೊಲಿ ಫೇಸ್‌ಲಿಫ್ಟ್

ಹೊಸ ಎಂಜಿನ್ ಮಾದರಿಯನ್ನು ಕೇವಲ ಟಿವೊಲಿ ಫೇಸ್‌ಲಿಫ್ಟ್ ಮತ್ತು ಎಕ್ಸ್‌ಯುವಿ300 ಸ್ಪೋರ್ಟ್ಜ್ ವರ್ಷನ್‌ನಲ್ಲಿ ಮಾತ್ರವಲ್ಲದೇ ಮುಂಬರುವ ಫೋರ್ಡ್ ಹೊಸ ಇಕೋಸ್ಪೋರ್ಟ್ಸ್ ಆವೃತ್ತಿಯಲ್ಲೂ ಇದೇ ಎಂಜಿನ್ ಅನ್ನು ಬಳಕೆ ಮಾಡಲಾಗುತ್ತಿದೆ.

ಮಹೀಂದ್ರಾ ಎಂಸ್ಟಾಲಿನ್ ಎಂಜಿನ್ ಪಡೆದುಕೊಳ್ಳಲಿದೆ ಟಿವೊಲಿ ಫೇಸ್‌ಲಿಫ್ಟ್

ಭಾರತದಲ್ಲಿ ಸಹಭಾಗಿತ್ವ ಯೋಜನೆಯಲ್ಲಿ ಹೊಸ ಕಾರುಗಳ ಅಭಿವೃದ್ದಿಗಾಗಿ ಒಂದಾಗಿರುವ ಫೋರ್ಡ್ ಮತ್ತು ಮಹೀಂದ್ರಾ ಕಂಪನಿಗಳು ಹೊಸ ಮಾದರಿಯ ಎಂಜಿನ್ ಅನ್ನು ವಿವಿಧ ಕಾರು ಮಾದರಿಗಳಲ್ಲಿ ಬಳಕೆ ಮಾಡಿಕೊಳ್ಳಲಿದ್ದು, ಉತ್ಪಾದನಾ ವೆಚ್ಚ ತಗ್ಗಿಸಲು ಹಲವಾರು ಹೊಸ ಯೋಜನೆಗಳನ್ನು ರೂಪಿಸಿವೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಮಹೀಂದ್ರಾ ಎಂಸ್ಟಾಲಿನ್ ಎಂಜಿನ್ ಪಡೆದುಕೊಳ್ಳಲಿದೆ ಟಿವೊಲಿ ಫೇಸ್‌ಲಿಫ್ಟ್

ಇನ್ನು 1.2-ಲೀಟರ್ ಎಂಸ್ಟಾಲಿನ್ ಪೆಟ್ರೋಲ್ ಎಂಜಿನ್ ಹೊಂದಿರುವ ಎಕ್ಸ್‌ಯುವಿ 300 ಸ್ಪೋಟ್ಜ್ ಮಾದರಿಯು ಮುಂಬರುವ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗಲಿದ್ದು, ಸಾಮಾನ್ಯ ಕಾರಿಗಿಂತ ಸ್ಟೋಟ್ಜ್ ಆವೃತ್ತಿಯು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳೊಂದಿಗೆ ತುಸು ದುಬಾರಿ ಬೆಲೆ ಪಡೆದುಕೊಳ್ಳಲಿದೆ.

Most Read Articles

Kannada
English summary
2020 Ssangyong Tivoli Facelift With Mahindra Engine. Read in Kannada.
Story first published: Wednesday, May 20, 2020, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X