ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

ದಕ್ಷಿಣ ಕೊರಿಯಾದ ಪ್ರಮುಖ ಕಾರು ಕಂಪನಿಗಳಲ್ಲಿ ಒಂದಾಗಿರುವ ಸ್ಯಾಂಗ್‌ಯಾಂಗ್ ಮೋಟಾರ್ ಕಂಪನಿಯು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಯಾಗಿರುವ ಎಡಿಸನ್ ಮೋಟಾರ್ಸ್ ಪಾಲಾಗಿದ್ದು, ಸ್ಯಾಂಗ್‌ಯಾಂಗ್ ಕಂಪನಿಯನ್ನು ಎಡಿಸನ್ ಮೋಟಾರ್ಸ್ ಕಂಪನಿಯು 305 ಬಿಲಿಯನ್ ವೊನ್(ರೂ. 1,885 ಕೋಟಿ) ಗೆ ಖರೀದಿಸಿದೆ.

ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದ ಸ್ಯಾಂಗ್‌ಯಾಂಗ್‌ ಕಂಪನಿಯಲ್ಲಿ ಭಾರತದಲ್ಲಿ ಅತಿ ದೊಡ್ಡ ವಾಹನ ತಯಾರಿಕಾ ಕಂಪನಿಯಾಗಿರುವ ಮಹೀಂದ್ರಾ ಕಂಪನಿಯು ಹೆಚ್ಚಿನ ಮಟ್ಟದ ಪಾಲನ್ನು ಹೊಂದಿತ್ತು. 2010ರಲ್ಲಿ ಸ್ಯಾಂಗ್‌ಯಾಂಗ್‌ ಕಂಪನಿಯಲ್ಲಿ ಹೂಡಿಕೆ ಆರಂಭದೊಂದಿಗೆ ಶೇ.75ರಷ್ಟು ಪಾಲು ತನ್ನದಾಗಿಸಿಕೊಂಡಿದ್ದ ಕಂಪನಿಯು ಭಾರತದಲ್ಲೂ ಸ್ಯಾಂಗ್‌ಯಾಂಗ್‌ ಬ್ರಾಂಡ್ ಕಾರುಗಳನ್ನು ಮಾರಾಟ ಮಾಡಿತ್ತು.

ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

ಆದರೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿನ ಪ್ರತಿಸ್ಪರ್ಧೆಯ ನಡುವೆ ಸ್ಯಾಂಗ್‌ಯಾಂಗ್‌ ಕಾರುಗಳು ನಿರಂತರವಾಗಿ ಹಿನ್ನಡೆ ಅನುಭವಿಸಿದ್ದವು. ಕೊನೆಗೆ ಭಾರತದಲ್ಲಿ ಸ್ಯಾಂಗ್‌ಯಾಂಗ್‌ ಕಾರುಗಳನ್ನೇ ಆಧರಿಸಿ ರೀಬ್ಯಾಡ್ಜ್ ಮಾದರಿಗಳ ಮಾರಾಟವನ್ನು ಆರಂಭಿಸಿತ್ತು.

ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

ರೀಬ್ಯಾಡ್ಜ್ ಮಾದರಿಗಳ ಹೊರತಾಗಿ ನಿರಂತರವಾಗಿ ನಷ್ಟದ ಸುಳಿಯಲ್ಲಿ ಸಿಲುಕಿದ ಸ್ಯಾಂಗ್‌ಯಾಂಗ್‌ ಕಂಪನಿಯು ಆರ್ಥಿಕ ದಿವಾಳಿತಕ್ಕೆ ಬಂದು ತಲುಪಿತು. ಹೀಗಾಗಿ ಕಳೆದ ವರ್ಷ ಸ್ಯಾಂಗ್‌ಯಾಂಗ್‌ ಕಂಪನಿಯಲ್ಲಿನ ಸ್ಟಾಕ್ ಮಾರಾಟ ಮಾಡಲು ನಿರ್ಧರಿಸಿದ ಕಂಪನಿಯು ಇದೀಗ ಸಂಪೂರ್ಣವಾಗಿ ಎಡಿಸನ್ ಮೋಟಾರ್ಸ್ ಗ್ರೂಪ್ ಕಂಪನಿಯು 305 ಬಿಲಿಯನ್ ವೊನ್ ಗೆ ಮಾರಾಟ ಮಾಡಿದ್ದು, ಸ್ಯಾಂಗ್‌ಯಾಂಗ್ ಕಾರು ಮಾದರಿಗಳನ್ನು ಇನ್ಮುಂದೆ ಎಡಿಸನ್ ಮೋಟಾರ್ಸ್ ತನ್ನ ಹೆಸರಿನಲ್ಲಿ ಮಾರಾಟ ಮಾಡಲಿದೆ.

ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

ಜೊತೆಗೆ ದಕ್ಷಿಣ ಕೊರಿಯಾದ ಅತಿ ದೊಡ್ಡ ಉತ್ಪಾದನಾ ಘಟಕ ಹೊಂದಿರುವ ಸ್ಯಾಂಗ್‌ಯಾಂಗ್ ಘಟಕದಲ್ಲಿ ಇವಿ ವಾಹನ ಘಟಕ ಆರಂಭಿಸಲು ಎಡಿಸನ್ ಮೋಟಾರ್ಸ್ ಬೃಹತ್ ಯೋಜನೆ ರೂಪಿಸಿದೆ.

ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

ಸ್ಯಾಂಗ್‌ಯಾಂಗ್ ಕಂಪನಿ ಜೊತೆಗಿನ ಯೋಜನೆಗಳಿಂದ ಸತತ ನಷ್ಟ ಮತ್ತು ಕರೋನಾ ವೈರಸ್ ಪರಿಣಾಮ ನೆಲಕಚ್ಚಿದ ಆಟೋ ಉದ್ಯಮದಲ್ಲಿನ ಸಂಕಷ್ಟಕರ ಪರಿಸ್ಥಿತಿಯಿಂದ ಸಹಭಾಗಿತ್ವ ಯೋಜನೆಗೆ ಬ್ರೇಕ್ ಹಾಕಿದ್ದ ಮಹೀಂದ್ರಾ ಕಂಪನಿಯು ಸ್ಯಾಂಗ್‌ಯಾಂಗ್ ಕಂಪನಿಯಲ್ಲಿನ ಹೂಡಿಕೆಯನ್ನು ಹಿಂಪಡೆಯಲು ನಿರ್ಧರಿಸಿತ್ತು.

ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

ಸ್ಯಾಂಗ್‌ಯಾಂಗ್ ಕಂಪನಿಯಲ್ಲಿ ಶೇ.75ರಷ್ಟು ಸ್ಟಾಕ್ ಹೊಂದಿದ್ದ ಮಹೀಂದ್ರಾ ಕಂಪನಿಯು ಕಳೆದ ಕೆಲ ವರ್ಷಗಳಲ್ಲಿ ಸತತ ನಷ್ಟದಿಂದ ರೂ.3 ಸಾವಿರ ಕೋಟಿ ನಷ್ಟ ಅನುಭವಿಸಿತ್ತು. ಜೊತೆಗೆ ಕೋವಿಡ್ ಪರಿಣಾಮ ಜಾಗತಿಕ ಮಟ್ಟದಲ್ಲಿ ಉಂಟಾದ ಆರ್ಥಿಕ ಏರಿಳಿತದ ಪರಿಣಾಮ ಸಹಭಾಗಿತ್ವ ಯೋಜನೆ ಅಡಿಯಲ್ಲಿನ ಹಲವು ಹೊಸ ಯೋಜನೆಗಳನ್ನು ಮೊಟಕುಗೊಳಿಸಿ ಮಾರಾಟಕ್ಕೆ ನಿರ್ಣಯಿಸಿತ್ತು.

ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

2011ರಲ್ಲಿ ರೆಕ್ಸ್ಟಾನ್ ಎಸ್‌ಯುವಿ ಮೂಲಕ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದ ಸ್ಯಾಂಗ್‌ಯಾಂಗ್ ಕಂಪನಿಯು ಮಹೀಂದ್ರಾ ಸಹಭಾಗಿತ್ವದಲ್ಲಿ ವಿವಿಧ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸಿತ್ತು. ಆದರೆ ಪ್ರತಿಸ್ಪರ್ಧಿ ಕಾರು ಮಾದರಿಗಳ ಅಬ್ಬರದ ಮುಂದೆ ಸ್ಯಾಂಗ್‌ಯಾಂಗ್ ಹೊಸ ಕಾರುಗಳ ಮಾರಾಟವು ನೀರಿಕ್ಷಿತ ಪ್ರಮಾಣವನ್ನು ಸಹ ತಲುಪುವಲ್ಲಿ ವಿಫಲವಾದವು.

ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

ತದನಂತರ ಸ್ಯಾಂಗ್‌ಯಾಂಗ್ ಕಾರುಗಳ ವಿನ್ಯಾಸವನ್ನೇ ಬಳಸಿಕೊಂಡ ಮಹೀಂದ್ರಾ ಕಂಪನಿಯು ರೆಕ್ಸ್ಟಾನ್ ಬದಲಿದೆ ಅಲ್ಟುರಾಸ್ ಜಿ4 ಮತ್ತು ಸ್ಯಾಂಗ್‌ಯಾಂಗ್ ಟ್ರಿವೊಲಿ ಕಾರಿನ ವಿನ್ಯಾಸದಲ್ಲಿ ಎಕ್ಸ್‌ಯುವಿ300 ಮಾದರಿಯನ್ನು ಬಿಡುಗಡೆ ಮಾಡಿತ್ತು.

ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

ಎಕ್ಸ್‌‌ಯುವಿ300 ಯಶಸ್ವಿಯಾದರೂ ಅಲ್ಟುರಾಸ್ ಜಿ4 ಸಹ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸ್ಯಾಂಗ್‌ಯಾಂಗ್ ಕಂಪನಿಯಲ್ಲಿನ ತನ್ನ ಸ್ಟಾಕ್ ಮಾರಾಟಕ್ಕೆ ಮುಂದಾದ ಮಹೀಂದ್ರಾ ಕಂಪನಿಯು ಇದೀಗ ಎಡಿಸನ್ ಮೋಟಾರ್ಸ್ ಮಾರಾಟ ಮಾಡಿದೆ.

ಮಹೀಂದ್ರಾ ಒಡೆತನದ ಸ್ಯಾಂಗ್‌ಯಾಂಗ್ ಕಾರು ಕಂಪನಿಯನ್ನು ಖರೀದಿಸಿದ ಎಡಿಸನ್ ಮೋಟಾರ್ಸ್

ಎಡಿಸನ್ ಮೋಟಾರ್ಸ್ ದಕ್ಷಿಣ ಕೊರಿಯಾದ ಜನಪ್ರಿಯ ಎಲೆಕ್ಟ್ರಿಕ್ ಬಸ್ ಮತ್ತು ಟ್ರಕ್ ತಯಾರಕ ಕಂಪನಿಯಾಗಿದ್ದು, ಇದು ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಮೆಕ್ಸಿಕೋ ಸೇರಿದಂತೆ ಹೆಚ್ಚಿನ ಮಾರುಕಟ್ಟೆಗಳಲ್ಲಿ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸುವ ಯೋಜಿಸಿದೆ.

Source: Reuters

Most Read Articles

Kannada
English summary
Ssangyong motor has been bought by a group of companies for 305 billion won
Story first published: Tuesday, January 11, 2022, 8:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X