ಕಿಝಾಷಿ, ವಿಟಾರಾ ಓಟಕ್ಕೆ ಬ್ರೇಕ್ ಹಾಕಿದ ಸುಜುಕಿ

By Nagaraja

ಜಪಾನ್‌ನ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಮಾದರಿಗಳಲ್ಲಿ ಗುರುತಿಸಿಕೊಂಡಿರುವ ಕಿಝಾಷಿ ಹಾಗೂ ಗ್ರಾಂಡ್ ವಿಟಾರಾ ನಿರ್ಮಾಣವನ್ನು ಸ್ಥಗಿತಗೊಳಿಸಿದೆ. ವಿಶೇಷವೆಂದರೆ ಈ ಎರಡು ಮಾದರಿಗಳು ಮಾರುತಿ ಸುಜುಕಿ ಮುಖಾಂತರ ಭಾರತ ಎಂಟ್ರಿಯನ್ನು ಪಡೆದುಕೊಂಡಿತ್ತು.

ಮಾರುಕಟ್ಟೆಯಲ್ಲಿ ವರ್ಧಿಸುತ್ತಿರುವ ಬೇಡಿಕೆಗೆ ಅನುಸಾರವಾಗಿ ಹೊಸ ಹೊಸ ಮಾದರಿಗಳತ್ತ ಚಿತ್ತ ಹಾಯಿಸಿರುವುದೇ ಐಕಾನಿಕ್ ಮಾದರಿಗಳನ್ನು ಕೈಬಿಡಲು ಸಂಸ್ಥೆಯನ್ನು ಪ್ರೇರೇಪಿಸಿದೆ.


ಇದೀಗ ಹೊಸತಾಗಿ ಆಗಮನವಾಗಲಿರುವ ಕಾಂಪಾಕ್ಟ್ ಎಸ್‌ಯುವಿ ಕಾರಿಗೆ ವಿಟಾರಾ ನಾಮಕರಣವಾಗಲಿದೆ. ಇನ್ನು ಕಿಝಾಷಿ ಸ್ಥಾನವನ್ನು ಈಗಾಗಲೇ ಸಿಯಾಝ್ ಸೆಡಾನ್ ಕಾರು ತುಂಬಿಕೊಂಡಿದ್ದು, ಭಾರತದಲ್ಲಿ ಭಾರಿ ಯಶಸ್ಸನ್ನು ಸಾಧಿಸಿದೆ.

ಹೋಂಡಾ ಅಕಾರ್ಡ್ ಐಷಾರಾಮಿ ಕಾರಿನ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಕಿಝಾಷಿ ಭಾರತ ಮಾರುಕಟ್ಟೆಯನ್ನು 2013ರಲ್ಲಿ ಪ್ರವೇಶಿಸಿತ್ತು. ತದಾ ಬಳಿಕ ಅದೇ ವರ್ಷದಲ್ಲಿ ಕಳಪೆ ಮಾರಾಟ ಹಿನ್ನೆಲೆಯಲ್ಲಿ ಕ್ರಮೇಣವಾಗಿ ಹಿಂಪಡೆಯುವುದಾಗಿ ಘೋಷಿಸಿತ್ತು.

suzuki grand vitara

ಸುಜುಕಿಯ ಇವಾಟ ಘಟಕದಲ್ಲಿ ಉತ್ಪಾದನೆಯಾಗುತ್ತಿದ್ದು ಈ ಎರಡು ಮಾದರಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿತ್ತು. ಈ ಪೈಕಿ ಕಿಝಾಷಿ ನಿರ್ಮಾಣ ಪ್ರಕ್ರಿಯೆ 2009ರಲ್ಲಿ ಆರಂಭವಾಗಿದ್ದರೆ ಹೆಚ್ಚು ಶಕ್ತಿಶಾಲಿ ವರ್ಷನ್ ಆಗಿರುವ ಗ್ರಾಂಡ್ ವಿಟಾರಾ ಭಾರತದಲ್ಲಿ ಟಾಟಾ ಸಫಾರಿ, ಫೋರ್ಡ್ ಎಂಡೋವರ್ ಹಾಗೂ ಹೋಂಡಾ ಸಿಆರ್‌ವಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿತ್ತು.

ಅಂದ ಹಾಗೆ ಈ ಎರಡು ಮಾದರಿಗಳಿಗೆ ಬದಲಿ ಕಾರುಗಳನ್ನು ಸುಜುಕಿ ಘೋಷಿಸಿಲ್ಲ. ಆದರೆ ಇದೇ ವರ್ಷ ಪ್ಯಾರಿಸ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಇದರ ಸ್ಥಾನ ತುಂಬುವ ನಿರೀಕ್ಷೆಯಿದೆ.

ಬೈಕನ್‌ವೀರ್ ಬೈಕರ್ ಬೈಕಿಂಗ್ ಗ್ಲೋವ್ಸ್ - ಕೇವಲ ರು. 340ಕ್ಕೆ ನಿಮ್ಮದಾಗಿಸಿ - ತ್ವರೆ ಮಾಡಿ

More from DriveSpark

Article Published On: Tuesday, December 9, 2014, 10:01 [IST]
English summary
It is rather unfortunate that the Japanese manufacturer Suxuki has now announced that it has ended production of both Kizashi & Grand Vitara models. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+