ಟಾಟಾದಿಂದ ನ್ಯಾನೋ ಡೀಸೆಲ್ ಗಾಡಿ ಬರಲ್ಲ

By Nagaraja

ವಾಹನ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡುವ ಬೆಳವಣಿಗೆಯೊಂದರಲ್ಲಿ ನ್ಯಾನೋ ಡೀಸೆಲ್ ಕಾರು ಯೋಜನೆಗೆ ಟಾಟಾ ಮೋಟಾರ್ಸ್ ಮಂಗಳ ಹಾಡಿದೆ. ಅತ್ಯಂತ ಕಡಿಮೆ ದರದಲ್ಲಿ ಗರಿಷ್ಠ ಇಂಧನ ಕ್ಷಮತೆ ನೀಡುವ ಡೀಸೆಲ್ ನ್ಯಾನೋ ಎಂಟ್ರಿ ಕೊಡಲಿದೆ ಎಂಬುದು ವಾಹನ ಪ್ರೇಮಿಗಳ ಬಹುಕಾಲದ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯು ಕಾರ್ಯ ನಿರತವಾಗಿದ್ದರೂ ಅಂತಿಮ ಹಂತದಲ್ಲಿ ಯೋಜನೆಯನ್ನು ಕೈಬಿಡಲು ನಿರ್ಧರಿಸಿದೆ.

ವಿಶ್ವದ ಅತಿ ಅಗ್ಗದ ಕಾರೆಂಬ ಪಟ್ಟವನ್ನು ಕಟ್ಟಿಕೊಂಡಿರುವ ನ್ಯಾನೋ, 800 ಸಿಸಿ ಡಿಒಎಚ್‌ಸಿ 2 ಸಿಲಿಂಡರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಬಗ್ಗೆ ಮಾಹಿತಿಯಿತ್ತು. ಹಾಗಿದ್ದರೂ ಬಾಷ್‌ನಿಂದ ತರಿಸುವ ಬಿಎಸ್ IV ತಂತ್ರಗಾರಿಕೆಯ ಡೈರಕ್ಟ್ ಇಂಜೆಕ್ಷನ್ ಕಾಮನ್ ರೈಲ್ ಎಂಜಿನ್, ಕಾರಿನ ವೆಚ್ಚವನ್ನು ಮೂರು ಲಕ್ಷ ರು.ಗಳಷ್ಟು ದುಬಾರಿ ಮಾಡಲಿದೆ. ಅಂದರೆ ಇದು ದರದ ವಿಚಾರದಲ್ಲಿ ಮಾರುತಿ ಸುಜುಕಿ ಅಲ್ಟೊ ಹಾಗೂ ಹ್ಯುಂಡೈ ಇಯಾನ್ ಸಮೀಪ ತಲುಪಲಿದೆ.

Tata Nano Diesel

ಇದೇ ಕಾಲಘಟ್ಟದಲ್ಲಿ ಡೀಸೆಲ್ ಇಂಧನ ದರವು ವರ್ಷವೊಂದರಲ್ಲೇ ಶೇಕಡಾ 35ರಷ್ಟು ಏರಿಕೆಯಾಗಿದೆ. ಈ ಎಲ್ಲ ಮಾರುಕಟ್ಟೆ ಪರಿಸ್ಥಿತಿಯಲ್ಲಿ ದುಬಾರಿ ನ್ಯಾನೋ ತಯಾರಿಸುವುದು ಪ್ರಾಯೋಗಿಕವಾಗಿ ಸೂಕ್ತವಲ್ಲ. ಈ ಎಲ್ಲ ವಿಚಾರಗಳನ್ನು ಪರಿಗಣಿಸಿರುವ ಟಾಟಾವು ತಮ್ಮ ಯೋಜನೆ ಕೈಬಿಡಲು ನಿರ್ಧರಿಸಿದೆ.

ಇದುವರೆಗೆ 2.5 ಲಕ್ಷ ನ್ಯಾನೋ ಕಾರುಗಳನ್ನು ಟಾಟಾ ಮಾರಾಟ ಮಾಡಿವೆ. ಅಷ್ಟೇ ಅಲ್ಲದೆ ತನ್ನ ಮಾರಾಟವನ್ನು ಇನ್ನಷ್ಟು ಉತ್ತೇಜಿಸಲು ಇತ್ತೀಚೆಗಷ್ಟೇ ಪವರ್ ಸ್ಟೀರಿಂಗ್ ಹೊಂದಿರುವ ನ್ಯಾನೋ ಟ್ವಿಸ್ಟ್ ಲಾಂಚ್ ಮಾಡಿತ್ತು. ಇದೀಗ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ನ್ಯಾನೋವನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ.

More from DriveSpark

Article Published On: Wednesday, April 16, 2014, 14:17 [IST]
English summary
Tata Motors has finally decided to not go ahead with the launch of the diesel variant of the Nano small car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+