ಜಸ್ಟ್ ವೇಟ್; ಟಾಟಾ ಜೆಸ್ಟ್ ವೇಟಿಂಗ್ ಪಿರೀಡ್ ಹೆಚ್ಚಳ

By Nagaraja

ಇತ್ತೀಚೆಗಷ್ಟೇ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮುಂದಿನ ಪೀಳಿಗೆಯ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು.

ಇದೀಗ ಎಲ್ಲ ಹೊಸ ತಂತ್ರಜ್ಞಾನದೊಂದಿಗೆ ಆಗಮನವಾಗಿರುವ ಜೆಸ್ಟ್ ಕಾರಿಗೆ ವಾಹನೋದ್ಯಮದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೆ ಸಂಸ್ಥೆಯ ಪ್ರಕಾರ ಈ ಕಾಂಪಾಕ್ಟ್ ಸೆಡಾನ್ ಕಾರಿನ ಕಾಯುವಿಕೆ ಅವಧಿ ಆರು ತಿಂಗಳಷ್ಟು ವಿಸ್ತರಿಸಿದೆ.


ಸಂಸ್ಥೆಯ ಪ್ರಕಾರ ಈಗಾಗಲೇ 10,000ಗಿಂತಲೂ ಹೆಚ್ಚು ಜೆಸ್ಟ್ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಅಲ್ಲದೆ ಬುಕ್ಕಿಂಗ್ ಮಾಡಿದ ಇತರರ ಗ್ರಾಹಕರು ತಮ್ಮ ಕನಸಿನ ಕಾರಿನ ಆಗಮನಕ್ಕಾಗಿ ಆರು ತಿಂಗಳಷ್ಟು ಕಾಲ ಕಾಯಬೇಕಾಗಿದೆ.

ಅಂದ ಹಾಗೆ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಜೆಸ್ಟ್ ಕಾರನ್ನು ಒದಗಿಸುತ್ತಿದೆ. ಇದು ಎಎಂಟಿ ಟ್ರಾನ್ಸ್‌ಮಿಷನ್‌ನಲ್ಲೂ ಲಭ್ಯವಿದ್ದು, ಗ್ರಾಹಕರಿಗೆ ವಿನೂತನ ಅನುಭವ ನೀಡುತ್ತಿದೆ.

Tata Zest

ಟಾಟಾ ಜೆಸ್ಟ್ ದೆಹಲಿ ಎಕ್ಸ್ ಶೋ ರೂಂ ಬೆಲೆ 4.65 ಲಕ್ಷ ರು.ಗಳಿಂದ 7 ಲಕ್ಷ ರು.ಗಳ ವರೆಗಿದೆ. ಇದು ಆರು ಬಣ್ಣಗಳ ಆಯ್ಕೆಯೊಂದಿಗೆ ಆಗಮನವಾಗಿದ್ದು, ಪ್ರಮುಖವಾಗಿ ಮಾರುತಿ ಸ್ವಿಫ್ಟ್ ಡಿಜೈರ್, ಹ್ಯುಂಡೈ ಎಕ್ಸ್‌ಸೆಂಟ್ ಮತ್ತು ಹೋಂಡಾ ಅಮೇಜ್ ಮಾದರಿಗಳಿಗೆ ಸೆಡ್ಡು ನೀಡುತ್ತಿದೆ.

ನಿಮ್ಮ ಮಾಹಿತಿಗಾಗಿ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಮತ್ತು ಕನೆಕ್ಟ್ ನೆಕ್ಸ್ಟ್ ಸಿದ್ಧಾಂತದ ಅಡಿಯಲ್ಲಿ ನಿರ್ಮಾಣಗೊಂಡಿರುವ ಟಾಟಾ ಜೆಸ್ಟ್ ವರ್ಷಾರಂಭದಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಇದೇ ಸಂದರ್ಭದಲ್ಲಿ ಅನಾವರಣಗೊಂಡಿದ್ದ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರು ಸಹ ಟಾಟಾ ಬಹುನಿರೀಕ್ಷಿತ ಮಾದರಿಯಾಗಿದ್ದು, ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ.

More from DriveSpark

Article Published On: Wednesday, November 19, 2014, 9:59 [IST]
English summary
Tata Motors had showcased its next generation of products at 2014 Auto Expo, which was was held in Delhi. On display where their ‘Horizonext' products, these included a compact sedan and a hatchback.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+