ಬಿಡುಗಡೆಗೊಂಡ ಟಾಟಾ ಜೆಸ್ಟ್ ಪ್ರಿಮಿಯೊ ಎಡಿಷನ್..

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇಯಾದ ಜನಪ್ರಿಯತೆಯನ್ನು ಪಡೆದುಕೊಂಡಂತಹ ಟಾಟಾ ಮೋಟರ್ಸ್ ತನ್ನ ಜೆಸ್ಟ್ ಕಾರಿನ ಹೊಸ ಪ್ರಿಮಿಯೊ ಎಡಿಷನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇಯಾದ ಜನಪ್ರಿಯತೆಯನ್ನು ಪಡೆದುಕೊಂಡಂತಹ ಟಾಟಾ ಮೋಟರ್ಸ್ ತನ್ನ ಜೆಸ್ಟ್ ಕಾರಿನ ಹೊಸ ಪ್ರಿಮಿಯೊ ಎಡಿಷನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ ರೂ.7.53 ಲಕ್ಷ ಬೆಲೆಗೆ ನಿಗದಿಪಡಿಸಲಾಗಿದೆ.

ಬಿಡುಗಡೆಗೊಂಡ ಟಾಟಾ ಜೆಸ್ಟ್ ಪ್ರಿಮಿಯೊ ಎಡಿಷನ್

ಜೆಸ್ಟ್ ಸೆಡಾನ್ ಕಾರಿನ ಸರಣಿಯಲ್ಲಿ 85,000 ಕಾರುಗಳು ಮಾರಾಟದ ಸಂಭ್ರಮದಲ್ಲಿರುವ ಟಾಟಾ ಮೋಟಾರ್ಸ್, ಜೆಸ್ಟ್ ಕಾರಿನ ಪ್ರೊಮಿಯೊ ಎಡಿಶನ್ ಬಿಡುಗಡೆ ಮಾಡಿದೆ. ಹೀಗಾಗಿ ರೆಗ್ಯುಲರ್ ಜೆಸ್ಟ್ ಕಾರಿಗಿಂತ ಹೊಸ ಆವೃತ್ತಿಯು ಹೆಚ್ಚುವರಿಯಾಗಿ 13 ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಬಿಡುಗಡೆಗೊಂಡ ಟಾಟಾ ಜೆಸ್ಟ್ ಪ್ರಿಮಿಯೊ ಎಡಿಷನ್

ಜೊತೆಗೆ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಜೆಸ್ಟ್ ಪ್ರಿಮಿಯೊ ಎಡಿಷನ್ ಡೀಸೆಲ್ ಆವೃತ್ತಿಯಲ್ಲಿ ಮಾತ್ರ ದೊರೆಯುವುದಾಗಿದೆ ಹೇಳಲಾಗಿದ್ದು, ಕಾರಿನ ಹೊರ ವಿನ್ಯಾಸಗಳು ವಿಶೇಷವಾಗಿ ಅಭಿವೃದ್ಧಿಗೊಂಡಿವೆ.

ಬಿಡುಗಡೆಗೊಂಡ ಟಾಟಾ ಜೆಸ್ಟ್ ಪ್ರಿಮಿಯೊ ಎಡಿಷನ್

ಜೆಸ್ಟ್ ಪ್ರಿಮಿಯೊ ಕಾರಿನ ವೈಶಿಷ್ಟ್ಯತೆಗಳು

ಜೆಸ್ಟ್ ಹೊಸ ಆವೃತ್ತಿಯು ಗ್ಲೋಸಿ ಬ್ಲಾಕ್ ಬಣ್ಣದಲ್ಲಿ ಡ್ಯುಯಲ್ ಟೋನ್ ರೂಫ್, ಪಿಯಾನೊ ಬ್ಲಾಕ್ ಫಿನಿಷ್ಡ್ ಹೊರಭಾಗದ ಹಿಂದಿನ ಮಿರರ್‍‍ಗಳು ಮತ್ತು ಟ್ಯಾನ್ ಫಿನಿಷ್ಡ್ ಮಿಡ್ ಪ್ಯಾಡ್ ಒಳಭಾಗದ ಡ್ಯಾಶ್‍‍ಬೋರ್ಡ್ ನಲ್ಲಿ ಇರಿಸಲಾಗಿದ್ದು, ಟೈಟಾನಿಯಂ ಮತ್ತು ಪ್ಲಾಟಿನಂ ಸಿಲ್ವರ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟಕ್ಕಿರಲಿದೆ.

ಬಿಡುಗಡೆಗೊಂಡ ಟಾಟಾ ಜೆಸ್ಟ್ ಪ್ರಿಮಿಯೊ ಎಡಿಷನ್

ಗ್ರಾಹಕರ ಆಯ್ಕೆಗಾಗಿ ಬ್ಲಾಕ್ ಬೂಟ್ ಸ್ಪಾಯ್ಲರ್, 15 ಇಂಚಿನ ವೀಲ್ಸ್ ನೊಂದಿಗೆ ಸಿಲ್ವರ್ ಫಿನಿಷ್ಡ್ ವೀಲ್ ಕ್ಯಾಪ್‍‍ಗಳನ್ನು ಪಡೆದಿದ್ದು, ಹಿಂಭಾಗದಲ್ಲಿ ಪಿಯಾನೊ ಬ್ಲಾಕ್ ಬೂಟ್ ಲಿಡ್ ಗಾರ್ನಿಶ್ ಮತ್ತು ಸ್ಪೆಷಲ್ ಎಡಿಶನ್ ಬ್ಯಾಡ್ಜ್, ಸ್ಮೋಕ್ಡ್ ಮಲ್ಟಿ ರಿಫ್ಲೆಕ್ಟರ್ ಹೆಡ್‍‍ಲ್ಯಾಂಪ್ಸ್ ಮತ್ತು ಪಿಯಾನೊ ಬ್ಲಾಕ್ ಹುಡ್ ಸ್ಟ್ರಿಪ್ ಮುಂಭಾಗದಲ್ಲಿ ಡ್ಯುಯಲ್ ಟೋನ್ ಬಂಪರ್ ಒದಗಿಸಲಾಗಿದೆ.

ಬಿಡುಗಡೆಗೊಂಡ ಟಾಟಾ ಜೆಸ್ಟ್ ಪ್ರಿಮಿಯೊ ಎಡಿಷನ್

ಕಾರಿನ ಕ್ಯಾಬಿನ್ ಕಾಂಟ್ರಾಸ್ಟ್ ಸ್ವಿಚಿಂಗ್ ಪಡೆದಿರುವ ಫ್ಯಾಬ್ರಿಕ್ ಸೀಟ್ ಮತ್ತು ಡ್ಯಾಷ್‍‍ಬೋರ್ಡ್ ಮಧ್ಯದಲ್ಲಿ ಪ್ರೀಮಿಯೊ ಬ್ರಾಂಡಿಂಗ್ ಪಡೆದಿರುತ್ತದೆ. ಇದಲ್ಲದೆ ಜೆಸ್ಟ್ ಎಕ್ಸ್ ಎಂ ಮಾದರಿಯಂತೆಯೇ ಹರ್ಮಾನ್‍‍ನ ನ್ಯಾವಿಗೇಷನ್ ಹೊಂದಿರುವಂತಹ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆದುಕೊಂಡಿರುತ್ತದೆ.

ಬಿಡುಗಡೆಗೊಂಡ ಟಾಟಾ ಜೆಸ್ಟ್ ಪ್ರಿಮಿಯೊ ಎಡಿಷನ್

ಎಂಜಿನ್ ಸಾಮರ್ಥ್ಯ

ಜೆಸ್ಟ್ ಪ್ರೀಮಿಯೋ 74 ಬಿಹೆಚ್‍‍ಪಿ ಮತ್ತು 190 ಎನ್ಎಂ ಟಾರ್ಕ್‍ ಉತ್ಪಾದಿಸುವ 1.3 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಪಡೆದಿದ್ದು, 5 ಸ್ಫೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಟಾಟಾ ಜೆಸ್ಟ್ ಪ್ರಿಮಿಯೊ ಎಡಿಷನ್

ಟಾಟಾ ಟಿಗೋರ್ ಕಾರಿಗಿಂತ ಜೆಸ್ಟ್ ಹಳೆಯದಾಗಿದ್ದು, ಹೀಗಾಗಿ ಇನ್ನಷ್ಟು ಗ್ರಾಹಕರನ್ನು ಸೆಳೆಯಲು ಕಾರಿನ ಕ್ಯಾಬಿಸ್ ಸ್ಪೇಸ್ ಮತ್ತು ಉಪಕರಣಗಳ ಜೊತೆಗೆ ಹೊಸ ಕಾರನ್ನು ಬಿಡುಗಡೆ ಮಾಡಲಿದೆ.

ಬಿಡುಗಡೆಗೊಂಡ ಟಾಟಾ ಜೆಸ್ಟ್ ಪ್ರಿಮಿಯೊ ಎಡಿಷನ್

ಜೆಸ್ಟ್ ಪ್ರಿಮಿಯೊ ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಮಾರುತಿ ಡಿಜೈರ್, ಫೋಕ್ಸ್‌ವ್ಯಾಗನ್ ಎಮಿಯೊ ಮುಂಬರಲಿರುವ ಹೋಂಡಾ ಅಮೇಜ್ ಮತ್ತು ಫೋರ್ಡ್ ಆಸ್ಪೈರ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on tata motors sedan zest
English summary
Tata Zest Premio Edition Launched In India.
Story first published: Monday, March 5, 2018, 18:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X