2015ರಲ್ಲಿ ಟಿವಿಎಸ್-ಬಿಎಂಡಬ್ಲ್ಯು 300-500ಸಿಸಿ ಬೈಕ್ ಲಾಂಚ್
ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, ಟಿವಿಎಸ್ ಹಾಗೂ ಬಿಎಂಡಬ್ಲ್ಯು ಮೋಟೊರಾಡ್ ಜಂಟಿಯಾಗಿ 2015ನೇ ಸಾಲಿನಲ್ಲಿ ಹೊಸ ಬೈಕ್ ಲಾಂಚ್ ಮಾಡಲಿದೆ.
ಟಿವಿಎಸ್-ಬಿಎಂಡಬ್ಲ್ಯು ಮೋಟೊರಾಡ್‌ನಿಂದ ಮೊದಲ 300ಸಿಸಿ ಬೈಕ್ 2015ರಲ್ಲಿ ಬಿಡುಗಡೆಯಾಗಲಿದೆ. ಅದೇ ಸಾಲಿನಲ್ಲಿ 500 ಸಿಸಿ ಬೈಕ್ ಪರಿಚಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

500ಸಿಸಿ ಬೈಕ್ 2015ನೇ ಸಾಲಿನ ದ್ವಿತಿಯಾರ್ಧದಲ್ಲಿ ಲಾಂಚ್ ಆಗಲಿದೆ. ನೂತನ ಬೈಕ್‌ಗಳು ದೇಶದಲ್ಲಿ ಟಿವಿಎಸ್‌ನ ಡೀಲರ್‌ಶಿಪ್‌ಗಳ ಮುಖಾಂತರ ಮಾರಾಟವಾಗುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಯುರೋಪ್‌ನಲ್ಲೂ ಮಾರಾಟವಾಗಲಿದೆ.
ಕಳೆದ ವರ್ಷ ಒಪ್ಪಂದಕ್ಕೆ ಸಹಿ ಹಾಕಿದ್ದ ಟಿವಿಎಸ್ ಹಾಗೂ ಬಿಎಂಡಬ್ಲ್ಯು ಮೋಟೋರಾಡ್ 125ಸಿಸಿಯಿಂದ 500 ಸಿಸಿ ಬೈಕ್ ತಯಾರಿಯಲ್ಲಿ ತಂತ್ರಜ್ಞಾನ ಹಂಚಿಕೊಳ್ಳುವುದಕ್ಕೆ ಸಮ್ಮತಿ ಸೂಚಿಸಿತ್ತು.


Click it and Unblock the Notifications








