ಹೈಡ್ರೋಜನ್ ನಿಯಂತ್ರಿತ ಕಾರುಗಳಿಗೆ ಬ್ರಿಟನ್ ಉತ್ತೇಜನ
ಬಹುತೇಕ ಎಲ್ಲ ಮುಂಚೂಣಿಯ ಆಟೋಮೋಟಿವ್ ಸಂಸ್ಥೆಗಳು ಸುಸ್ಥಿರ ಪರಿಸರ ಬೆಳವಣಿಗೆಗಾಗಿ ನೂತನ ಸಂಚಾರ ವಾಹಕದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.
ಇದರಂತೆ ಏಷ್ಯಾ, ಜಪಾನ್, ಅಮೆರಿಕ ಹಾಗೂ ಯುರೋಪ್ ಖಂಡಗಳ ನಡುವೆ ಆರೋಗ್ಯಕರ ಪೈಪೋಟಿ ಬೆಳೆದು ಬರುತ್ತಿದೆ. ಈ ನಡುವೆ ಹೈಡ್ರೋಜನ್ ನಿಯಂತ್ರಿತ ಕಾರುಗಳಿಗೆ ಬ್ರಿಟನ್ ಉತ್ತೇಜನ ನೀಡಲಾರಂಭಿಸಿದೆ.

ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಫ್ಯೂಯಲ್ ಸೆಲ್ ಕಾರುಗಳನ್ನು ಪರಿಚಯಸಿರುವುದರ ಪೈಕಿ ಮೊದಲಿಗರಾಗಿ ಗುರುತಿಸಿಕೊಂಡಿದ್ದಾರೆ. ಇದು ಅಮೆರಿಕದಲ್ಲಿ ಮಾರಾಟದಲ್ಲಿದೆ.
ಅದೇ ರೀತಿ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಮುಂದಿನ ವರ್ಷದಿಂದ ಬ್ರಿಟನ್‌ನಲ್ಲಿ ಹೈಡ್ರೋಜನ್ ವಾಹನಗಳ ಮಾರಾಟ ಆರಂಭಿಸಲಿದೆ. ಇದಕ್ಕೆ ಬ್ರಿಟನ್‌ನಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.
ಬಿಯಾಂಡ್ ಪೆಟ್ರೋಲಿಯಂ (ಬಿಎಂ) ವರದಿ ಪ್ರಕಾರ ಜಾಗತಿಕ ಕಚ್ಚಾ ತೈಲ ನಿಕ್ಷೇಪ 44.2 ಬಿಲಿಯನ್ ಬ್ಯಾರಲ್ ಮಾತ್ರ ಉಳಿದುಕೊಂಡಿದ್ದು, ಮುಂದಿನ 53.3 ವರ್ಷಗಳಿಗೆ ಮಾತ್ರ ಬರಲಿದೆ. ಈ ನಿಟ್ಟಿನಲ್ಲಿ ಬದಲಿ ವ್ಯವಸ್ಥೆ ಜಾರಿಗೆ ತರಲು ಇದು ಸಕಾಲವಾಗಿದೆ ಎಂದಿದೆ.


Click it and Unblock the Notifications








