2018ರಲ್ಲಿ ಬರಲಿದೆ ಬ್ಯಾಟರಿಯಿಂದ ಓಡಾಡುವ ರೈಲು

Written By:

ಜಗತ್ತಿನ ಸಂಚಾರ ವಾಹಕಗಳಲ್ಲಿ ರೈಲು ಪಯಣ ಅತ್ಯಂತ ಅಗ್ಗವಾಗಿದೆ ಎಂಬ ಮಾತಿದೆ. ಒಂದೇ ಸಮಯದಲ್ಲಿ ಸಾವಿರಾರು ಮಂದಿ ಯಾತ್ರಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ.

ಉಗಿ ಬಂಡಿಯಿಂದ ಆರಂಭವಾಗಿರುವ ನಮ್ಮ ರೈಲು ಪಯಣ ಎಲೆಕ್ಟ್ರಿಕ್ ಟ್ರೈನ್ ವರೆಗೂ ಬೆಳೆದು ನಿಂತಿದೆ. ಇದೀಗ ಫ್ರಾನ್ಸ್ ಮೂಲದ ಸಂಸ್ಥೆಯೊಂದು ಸಂಪೂರ್ಣ ಹೊಗೆ ರಹಿತ (emission free) ಬ್ಯಾಟರಿ ರೈಲುವೊಂದನ್ನು ತಯಾರಿಸಲು ಮುಂದಾಗಿದೆ.

To Follow DriveSpark On Facebook, Click The Like Button
2018ರಲ್ಲಿ ಫ್ಯೂಯಲ್ ಸೆಲ್ ರೈಲು ಎಂಟ್ರಿ

ಫ್ರಾನ್ಸ್‌ನ ಅಲ್ಸ್ಟಮ್ (Alstom) ಸಂಸ್ಥೆಯು ಬ್ಯಾಟರಿಯಿಂದ ಓಡಾಡುವ ರೈಲನ್ನು ಅಭಿವೃದ್ಧಿಪಡಿಸುತ್ತಿದೆ.

2018ರಲ್ಲಿ ಫ್ಯೂಯಲ್ ಸೆಲ್ ರೈಲು ಎಂಟ್ರಿ

ವರದಿಗಳ ಪ್ರಕಾರ ಈ ಫ್ಯೂಯಲ್ ಸೆಲ್ ರೈಲಿನ ಮೊದಲ ಮಾದರಿಯು 2018ನೇ ಇಸವಿಯಲ್ಲಿ ಆಗಮನವಾಗಲಿದೆ.

2018ರಲ್ಲಿ ಫ್ಯೂಯಲ್ ಸೆಲ್ ರೈಲು ಎಂಟ್ರಿ

ಈ ಸಂಬಂಧ ಫ್ರಾನ್ಸ್ ಮೂಲದ ಸಂಸ್ಥೆಯು ಜರ್ಮನಿಯ ಹಲವಾರು ಡಿಸೈನ್ ಸಂಸ್ಥೆಗಳ ಜೊತೆ ಆಶಯ ಪತ್ರಕ್ಕೆ ಸಹಿ ಹಾಕಿದೆ.

2018ರಲ್ಲಿ ಫ್ಯೂಯಲ್ ಸೆಲ್ ರೈಲು ಎಂಟ್ರಿ

ಎಲೆಕ್ಟ್ರಿಕ್ ಕಾರುಗಳಲ್ಲಿರುವ ಅದೇ ಫ್ಯೂಯಲ್ ಸೆಲ್ ತಂತ್ರಜ್ಞಾನವನ್ನು ರೈಲಿನಲ್ಲಿ ಆಳವಡಿಸಲಾಗುವುದು. ಆರಂಭದಲ್ಲಿ ಇಂತಹ ಎರಡು ಮಾದರಿಗಳನ್ನು ನಿರ್ಮಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

2018ರಲ್ಲಿ ಫ್ಯೂಯಲ್ ಸೆಲ್ ರೈಲು ಎಂಟ್ರಿ

ಕೊರಡಿಯಾ ಪ್ರಾದೇಶಿಕ ರೈಲು ತಳಹದಿಯಲ್ಲಿ ನಿರ್ಮಾಣವಾಗಲಿರುವ ಈ ಹೊಗೆ ರಹಿತ ರೈಲು, ಡೀಸೆಲ್ ಮಲ್ಟಿಪಲ್ ಯುನಿಟ್‌ಗೆ ಹೋಲಿಸಿದಾಗ ಕಡಿಮೆ ಶಕ್ತಿ ಬಳಕೆ ಮಾಡಲಿದೆ.

2018ರಲ್ಲಿ ಫ್ಯೂಯಲ್ ಸೆಲ್ ರೈಲು ಎಂಟ್ರಿ

ಈ ನಿಟ್ಟಿನಲ್ಲಿ 'ಇಂಟಲಿಜೆಟ್ ಎನರ್ಜಿ ಮ್ಯಾನೇಜ್‌ಮೆಂಟ್ ಸಿಸ್ಟಂ' ಆಳವಡಿಸಲಾಗಿದೆ. ಬ್ಯಾಟರಿಯಿಂದ ಓಡುವ ರೈಲು ಜರ್ಮನಿಯಲ್ಲೇ ಉತ್ಪಾದಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

2018ರಲ್ಲಿ ಫ್ಯೂಯಲ್ ಸೆಲ್ ರೈಲು ಎಂಟ್ರಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಲ್ಸ್ಟಮ್ ಟ್ರಾನ್ಸ್‌ಪೋರ್ಟ್ ಅಧ್ಯಕ್ಷರಾಗಿರುವ ಹೆನ್ರಿ ಪೌಪಾರ್ಟ್ ಲಾಫರ್ಜ್, "ವಿಶ್ವ ಪ್ರಯಾಣಿಕ ಸಾರಿಗೆ ವ್ಯವಸ್ಥೆಯಲ್ಲಿ ಫ್ಯೂಯಲ್ ಸೆಲ್ ತಂತ್ರಜ್ಞಾನದ ರೈಲುಗಳು ಮೊದಲ ಬಾರಿ ಅವಿಷ್ಕಾರವಾಗಲಿದೆ" ಎಂದಿದ್ದಾರೆ.

2018ರಲ್ಲಿ ಫ್ಯೂಯಲ್ ಸೆಲ್ ರೈಲು ಎಂಟ್ರಿ

"ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಹಾಗೂ ಇಂಧನಗಳ ಬೆಲೆ ಏರಿಕೆಯಾಗುತ್ತಿರುತ್ತಿರುವ ಹಿನ್ನಲೆಯಲ್ಲಿ ಇಂತಹ ಹೊಗೆ ರಹಿತ ರೈಲುಗಳ ಅಭಿವೃದ್ಧಿ ಅತ್ಯಗತ್ಯವಾಗಿದೆ" ಎಂಬುದನ್ನು ಅವರನ್ನು ವಿವರಿಸಿದ್ದಾರೆ.

English summary
France based Alstom has revealed its plan to develop an ‘emission-free’ battery train prototype by 2018. 
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark