ದಟ್ಸನ್ ಗೊ ಸಣ್ಣ ಕಾರು ಏಕೆ ಸುರಕ್ಷಿತವಲ್ಲ?
ಗ್ಲೋಬಲ್ ಎನ್ಸಿಎಪಿ ನಡೆಸಿರುವ ಅಪಘಾತ ಪರೀಕ್ಷೆಯಲ್ಲಿ (Crash Test)ದಟ್ಸನ್ ಗೊ ಎಂಟ್ರಿ ಲೆವೆಲ್ ಹ್ಯಾಚ್ಬ್ಯಾಕ್ ಕಾರು 'ಸೊನ್ನೆ' ರೇಟಿಂಗನ್ನು ಗಿಟ್ಟಿಸಿಕೊಂಡಿರುವ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ.
ಇದಾದ ಬೆನ್ನಲ್ಲೇ ಪ್ರಸಕ್ತ ಸಾಲಿನಲ್ಲಷ್ಟೇ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ದಟ್ಸನ್ ಗೊ ಕಾರನ್ನು ಹಿಂಪಡೆಯುವಂತೆ ನಿಸ್ಸಾನ್ ಸಂಸ್ಥೆಗೆ ಗ್ಲೋಬನ್ ಎನ್ಸಿಎಂಪಿ ಸಲಹೆ ಮಾಡಿತ್ತು.

ಭಾರತ ಮೂಲದ ದಟ್ಸನ್ ಗೊ ಕನಿಷ್ಠ ಸುರಕ್ಷಾ ಮಾನದಂಡಗಳನ್ನು ತೇರ್ಗಡೆ ಹೊಂದುವಲ್ಲಿ ವಿಫಲವಾಗಿರುವುದು ಗಂಭೀರ ಚಿಂತನೆಗೆ ಎಡೆಮಾಡಿಕೊಟ್ಟಿದೆ.
ಏರ್ಬ್ಯಾಗ್, ಆ್ಯಂಟಿ ಲಾಕ್ ಬ್ರೇಕ್ಗಳಂತಹ ಅಗತ್ಯ ಸುರಕ್ಷತಾ ವೈಶಿಷ್ಟ್ಯಗಳು ಹೊಂದಿರದಿರುವುದೇ ದಟ್ಸನ್ ಗೊ ವೈಫಲ್ಯಕ್ಕೆ ಕಾರಣವಾಗಿದೆ. ಗಂಟೆಗೆ 64 ಕೀ.ಮೀ. ವೇಗದಲ್ಲಿ ಅಪಘಾತ ಪರೀಕ್ಷೆ ನಡೆಸಲಾಗಿತ್ತು. ಪರಿಣಾಮ ದಟ್ಸನ್ ಗೊ ಸಂಪೂರ್ಣ ನಜ್ಜುಗುಜ್ಜಾದ ಪರಿಸ್ಥಿತಿಯಲ್ಲಿ ಕಂಡುಬಂದಿತ್ತು.
ಒಟ್ಟಿನಲ್ಲಿ ಪರಿಸ್ಥಿತಿ ಸದ್ಯದಲ್ಲೇ ಬದಲಾಗುವ ನಿರೀಕ್ಷೆಯಿದೆ. ಭಾರತದಲ್ಲೂ ಕ್ರ್ಯಾಶ್ ಟೆಸ್ಟ್ ಕಡ್ಡಾಯವಾಗಿ ಬಳಕೆ ಮಾಡುವ ಕುರಿತಂತೆ ಚಿಂತನೆಯಲ್ಲಿದೆ. ಇದರಿಂದ ಕಾರು ಬೆಲೆ ಕೊಂಚ ದುಬಾರಿಯೆನಿಸಿದರೂ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ ಎಂಬುದನ್ನು ಅನುಮಾನವಿಲ್ಲ.


Click it and Unblock the Notifications








