ಕ್ರ್ಯಾಶ್ ಟೆಸ್ಟ್‌ನಲ್ಲಿ ಸಾಧಾರಣ ಕಾರು ಮಾದರಿಯಾಗಿ ಹೊರಹೊಮ್ಮಿದ ಕಿಯಾ ಸೆಲ್ಟೊಸ್

ಹೊಸ ಕಾರುಗಳ ಮಾರಾಟವು ಉತ್ತಮವಾಗಿರಲು ಬೆಲೆ ಮತ್ತು ಮೈಲೇಜ್ ಮಾತ್ರ ಮುಖ್ಯ ಅಂಶವಲ್ಲ. ಪ್ರಯಾಣಿಕ ಸುರಕ್ಷತೆಯೂ ಕೂಡಾ ಅತಿ ಮುಖ್ಯವಾದ ವಿಚಾರವಾಗಿದ್ದು, ಕಿಯಾ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ ಮಾಹಿತಿಯು ಇದೀಗ ಬಹಿರಂಗವಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 3 ಸ್ಟಾರ್ ರೇಟಿಂಗ್ ಪಡೆದ ಸೆಲ್ಟೊಸ್

ಕಿಯಾ ಮೋಟಾರ್ಸ್ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಕಾರು ಮಾರಾಟ ಜಾಲವನ್ನು ಹೊಂದಿದ್ದು, ತನ್ನದೆ ಆದ ವೈಶಿಷ್ಟ್ಯತೆ, ಗುಣಮಟ್ಟ ಮತ್ತು ವಿನ್ಯಾಸಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ. ಕಿಯಾ ಪ್ರಮುಖ ಕಾರು ಮಾದರಿಗಳಲ್ಲಿ ಸೆಲ್ಟೊಸ್ ಕೂಡಾ ಪ್ರಮುಖ ಮಾದರಿಯಾಗಿದ್ದು, ಅಮೆರಿಕದಲ್ಲಿ ಮಾರಾಟಗೊಳ್ಳುವ ಸೆಲ್ಟೊಸ್ ಮಾದರಿಯು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಅಂಕಗಳನ್ನು ಪಡೆದುಕೊಂಡಿದ್ದರೆ ಭಾರತದಲ್ಲಿ ಮಾರಾಟವಾಗುವ ಸೆಲ್ಟೊಸ್ ಮಾದರಿಯು ಕೇವಲ ಮೂರು ಅಂಕಗಳೊಂದಿಗೆ ಸಾಧಾರಣ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 3 ಸ್ಟಾರ್ ರೇಟಿಂಗ್ ಪಡೆದ ಸೆಲ್ಟೊಸ್

ಅಪಘಾತಗಳ ಸಂದರ್ಭದಲ್ಲಿ ಕಾರಿನಲ್ಲಿ ಪ್ರಯಾಣಿಸುವ ವಯಸ್ಕ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸುವಲ್ಲಿ ವಿಫಲವಾಗಿದ್ದು, ಒಟ್ಟು 17 ಅಂಕಗಳಲ್ಲಿ ಕೇವಲ 8.03 ಅಂಕದೊಂದಿಗೆ 3 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 3 ಸ್ಟಾರ್ ರೇಟಿಂಗ್ ಪಡೆದ ಸೆಲ್ಟೊಸ್

ಹೊಸ ಸೆಲ್ಟೊಸ್ ಕಾರಿನಲ್ಲಿ ಮಕ್ಕಳ ಸುರಕ್ಷತೆಗಾಗಿ ಹೆಚ್ಚು ಮುಂಜಾಗ್ರತ ಕ್ರಮಗಳು ಇಲ್ಲದಿರುವುದು ಕಾರಿನ ಒಟ್ಟಾರೆ ಸುರಕ್ಷಾ ರೇಟಿಂಗ್ ಮೇಲೆ ಪರಿಣಾಮ ಬೀರಿದ್ದು, ಮಕ್ಕಳ ಸುರಕ್ಷತೆಗಾಗಿ ಇರುವ 49 ಅಂಕಗಳಲ್ಲಿ ಕೇವಲ 15 ಅಂಕಗಳನ್ನು ಪಡೆದುಕೊಳ್ಳುವ ಮೂಲಕ 2 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 3 ಸ್ಟಾರ್ ರೇಟಿಂಗ್ ಪಡೆದ ಸೆಲ್ಟೊಸ್

ಪ್ರತಿ ಗಂಟೆಗೆ 64 ಕಿ.ಮೀ ವೇಗದಲ್ಲಿ ನಡೆಸಲಾದ ಕ್ರ್ಯಾಶ್ ಟೆಸ್ಟ್‌ನಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಹೆಚ್ಚು ಹಾನಿಯಾಗುವ ಎಲ್ಲಾ ಸಾಧ್ಯತೆಗಳಿರುವುದು ಪರೀಕ್ಷೆ ವೇಳೆ ಬಹಿರಂಗವಾಗಿದ್ದು, ಒಟ್ಟಾರೆ 5 ಸ್ಟಾರ್ ರೇಟಿಂಗ್ಸ್‌ನಲ್ಲಿ 3 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿರುವುದು ಎಸ್‌ಯುವಿ ಪ್ರಿಯರಲ್ಲಿ ನಿರಾಶೆ ಉಂಟುಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಗರಿಷ್ಠ ಸುರಕ್ಷತೆ ಪಡೆದುಕೊಳ್ಳುತ್ತಿದ್ದು, ಕಿಯಾ ಕಂಪನಿಯು ಭಾರತದಲ್ಲಿನ ಕಾರುಗಳ ಸುರಕ್ಷತೆ ಮೇಲೆ ಇನ್ನಷ್ಟು ಗಮನಹರಿಸಬೇಕಿದೆ.

ಇನ್ನು ಭಾರತದಲ್ಲೇ ಅಭಿವೃದ್ದಿಗೊಂಡು ಅಮೆರಿಕದಲ್ಲಿ ಮಾರಾಟಗೊಳ್ಳುವ ಸೆಲ್ಟೊಸ್ ಮಾದರಿಯು ಗರಿಷ್ಠ ರೇಟಿಂಗ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಐಐಹೆಚ್ಎಸ್ ಸಂಸ್ಥೆಯು ನಡೆಸಿದ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಕಿಯಾ ಸೆಲ್ಟೊಸ್ ಮಾದರಿಯು ಉತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 3 ಸ್ಟಾರ್ ರೇಟಿಂಗ್ ಪಡೆದ ಸೆಲ್ಟೊಸ್

ಆದರೆ ಭಾರತದಲ್ಲಿ ಪ್ರಯಾಣಿಕ ಸುರಕ್ಷತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾರು ಉತ್ಪಾದನೆ ಮಾಡಲಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆಯಲ್ಲಿ ಟಾಟಾ ಮತ್ತು ಮಹೀಂದ್ರಾ ಕಂಪನಿಯ ಕಾರುಗಳೇ ಉತ್ತಮ ಮಾದರಿಗಳಾಗಿವೆ ಎನ್ನಬಹುದು.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 3 ಸ್ಟಾರ್ ರೇಟಿಂಗ್ ಪಡೆದ ಸೆಲ್ಟೊಸ್

ಸದ್ಯ ಭಾರತದಲ್ಲೂ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಸೆಲ್ಟೊಸ್ ಕಾರು ಗ್ರಾಹಕರ ಆಯ್ಕೆ ಮುಂಚೂಣಿಯಲ್ಲಿದ್ದು, ದುಬಾರಿ ಬೆಲೆ ನಡುವೆಯೂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣ ಬೇಡಿಕೆ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 3 ಸ್ಟಾರ್ ರೇಟಿಂಗ್ ಪಡೆದ ಸೆಲ್ಟೊಸ್

ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 3 ಸ್ಟಾರ್ ರೇಟಿಂಗ್ ಪಡೆದ ಸೆಲ್ಟೊಸ್

ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ 2020ರ ಸೆಲ್ಟೊಸ್ ಕಾರು ಎಸ್‌ಯುವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.34 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Kia Seltos Secures Three-Star Rating At Global NCAP Crash Tests. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X