ಮುಂದಿನ 53 ವರ್ಷಗಳ ಬಳಿಕ ತೈಲದ ಅಭಾವ?
ಮುಂದಿನ 53 ವರ್ಷಗಳ ಬಳಿಕ ತೈಲದ ಅಭಾವ ಕಾಡಲಿದೆ. ಹೌದು ಜಾಗತಿಕ ತೈಲ ಮೀಸಲು ನಿಕ್ಷೇಪದ ಬಗ್ಗೆ ಸಂಸ್ಥೆ ಬಿಡುಗಡೆ ಮಾಡಿರುವ ತಾಜಾ ವರದಿಗಳಲ್ಲಿ ಈ ಆತಂಕಕಾರಿ ವಿಚಾರವನ್ನು ಉಲ್ಲೇಖಿಸಲಾಗಿದೆ.
ಜಾಗತಿಕ ತೈಲ ಮೀಸಲು ನಿಕ್ಷೇಪ 1,687.9 ಬಿಲಿಯನ್ ಬ್ಯಾರೆಲ್ ಆಗಿದ್ದು, ಈಗಿನ ಉತ್ಪಾದನಾ ಪ್ರಮಾಣ ಗಮನಿಸಿದರೆ ಮುಂದಿನ 53.3 ವರ್ಷಗಳಲ್ಲಿ ತೈಲದ ಅಭಾವ ಕಾಡಲಿದೆ ಎಂಬ ವರದಿ ಬಯಲಾಗಿದೆ.

ಹಾಗಿದ್ದರೂ ಬಿಪಿ ಅಂದಾಜು ಮಾಡಿದಕ್ಕಿಂತಲೂ ಹೆಚ್ಚು ತೈಲ ನಿಕ್ಷೇಪ ಕಂಡುಬಂದಿರುವುದು ಸ್ವಲ್ಪ ಸಮಾಧಾನಕರ ವಿಚಾರವಾಗಿದೆ. ಅಮೆರಿಕದಲ್ಲಿ 44.2 ಬಿಲಿಯನ್ ಬ್ಯಾರೆಲ್ ಮೀಸಲು ತೈಲ ನಿಕ್ಷೇಪವಿದ್ದು, ಇದು ಅಂದಾಜು ಮಾಡಿದಕ್ಕಿಂತಲೂ ಶೇಕಡಾ 26ರಷ್ಟು ಹೆಚ್ಚಾಗಿದೆ.
ಸದ್ಯ ಜಗತ್ತಿನ ಅಗ್ರಗಣ್ಯ ವಾಹನ ತಯಾರಕ ಸಂಸ್ಥೆಗಳು ಬದಲಿ ಇಂಧನ ವ್ಯವಸ್ಥೆ ಕಂಡುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಲ್ಲಿ ವಿದ್ಯುತ್ ಚಾಲಿತ ಹಾಗೂ ಹೈಬ್ರಿಡ್ ವಾಹನಗಳು ಪ್ರಮುಖವಾಗಿದೆ.


Click it and Unblock the Notifications








