ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್ ವೈಶಿಷ್ಟ್ಯದೊಂದಿಗೆ ಆಡಿ ಎ6 ಎಂಟ್ರಿ
ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿ ಭಾರತ ಮಾರುಕಟ್ಟೆಯಲ್ಲಿ ಫೇಸ್‌ಲಿಫ್ಟ್ 2015 ಎ6 ಮಾದರಿಯನ್ನು ಬಿಡುಗಡೆಗೊಳಿಸಿದೆ. ಅಲ್ಲದೆ ಹೊರಮೈ ಮತ್ತು ಒಳಮೈಗಳಲ್ಲಿ ಕೆಲವೊಂದು ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.
ಮುಖ್ಯಾಂಶಗಳು
- ಬೆಲೆ: 49.5 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
- ಹೊಸತಾದ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್ ಲೈಟ್

- ಮರ್ಸಿಡಿಸ್ ಬೆಂಝ್ ಇ ಕ್ಲಾಸ್,
- ಬಿಎಂಡಬ್ಲ್ಯು 5 ಸಿರೀಸ್,
- ಜಾಗ್ವಾರ್ ಎಕ್ಸ್ ಇ

ಕಾರಿನೊಳಗೆ ಹಿಂತೆಗೆದುಕೊಳ್ಳಬಹುದಾದ ಎಂಟು ಇಂಚುಗಳ ಮಾನಿಟರ್ ಮತ್ತು ಹೊಸತಾದ ನೇವಿಗೇಷನ್ ವ್ಯವಸ್ಥೆಯಿರಲಿದೆ. ಅಲ್ಲದೆ ಎನ್‌ವಿಡಿಯಾ (Nvidia)ಜೊತೆಗೆ ಹೊಸ ಟೆಕ್ನಾಲಜಿ ಜೊತೆಗಾರಿಕೆಯಾಗಲ್ಲಿ ಹೆಚ್ಚಿನ ವೇಗದ ಎಲ್‌ಟಿಇ ಟೆಗ್ರಾ 30 ಗ್ರಾಫಿಕ್ಸ್ ಚಿಪ್ ಸಹ ಕಂಡುಬರಲಿದೆ.

ಪೆಟ್ರೋಲ್ ಎಂಜಿನ್
- 2.0 ಟಿಎಫ್‌ಎಸ್ಐ (180 ಅಶ್ವಶಕ್ತಿ)
ಡೀಸೆಲ್ ಎಂಜಿನ್
- 2.0 ಲೀಟರ್ ಟಿಡಿಐ ಡೀಸೆಲ್ (175 ಅಶ್ವಶಕ್ತಿ)
ಅಂದ ಹಾಗೆ ಆಡಿ ಎ6 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಸೆವೆನ್ ಸ್ಪೀಡ್ ಗೇರ್ ಬಾಕ್ಸ್ ಕಾಣಬಹುದಾಗಿದೆ. ಅಂತೆಯೇ ಆಲ್ ವೀಲ್ ಡ್ರೈವ್ ಕ್ವಾಟ್ರೊ ಚಾಲನಾ ಆಯ್ಕೆ ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಲಿದೆ.


Click it and Unblock the Notifications