ಐಷಾರಾಮಿ ಆಡಿ ಕ್ಯೂ3 ಫೇಸ್ ಲಿಫ್ಟ್ ಬಿಡುಗಡೆ
ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ತೆಯಾಗಿರುವ ಆಡಿ, ನೂತನ ಕ್ಯೂ3 ಫೇಸ್ ಲಿಫ್ಟ್ ಮಾದರಿಯನ್ನು ದೇಶಕ್ಕೆ ಪರಿಚಯಿಸಿದೆ. ನಿಮ್ಮ ಮಾಹಿತಿಗಾಗಿ, ಇತ್ತೀಚೆಗಷ್ಟೇ ಡ್ರೈವ್ ಸ್ಪಾರ್ಕ್ ಹಮ್ಮಿಕೊಂಡಿರುವ ಆಡಿ ಕ್ಯೂ3 ಸಮಗ್ರ ಚಾಲನಾ ಪರೀಕ್ಷೆಯು ಸದ್ಯದಲ್ಲೇ ಪ್ರಕಟವಾಗಲಿದೆ.
ಬೆಲೆ ಮಾಹಿತಿ: 28.99 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿರುವ ಆಡಿ ಕ್ಯೂ3 ಫೇಸ್ ಲಿಫ್ಟ್ ಮಾದರಿಯು ಮರ್ಸಿಡಿಸ್ ಬೆಂಝ್ ಜಿಎಲ್ ಎ, ಬಿಎಂಡಬ್ಲ್ಯು ಎಕ್ಸ್1 ಮತ್ತು ಮಿನಿ ಕಂಟ್ರಿಮ್ಯಾನ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಆಡಿ ಅದೃಷ್ಟ ಬದಲಾಯಿಸಿರುವ ಕ್ಯೂ3 ಬಿಡುಗಡೆಯಾಗ ಮೂರು ವರ್ಷಗಳ ಬಳಿಕ ಹೊಸ ಸ್ವರೂಪದ ಮಾದರಿಯು ಬಿಡುಗಡೆ ಭಾಗ್ಯ ಕಂಡಿದೆ. ಇದು ಅತ್ಯುತ್ತಮ ಹೊರಮೈ ಹಾಗೂ ಒಳಮೈ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಹೊಸತಾದ ಹೆಕ್ಸಾಗನಲ್ ಗ್ರಿಲ್, ಎಲ್‌ಇಡಿ ಹೆಡ್ ಲ್ಯಾಂಪ್ (ಐಚ್ಛಿಕ) ನೂತನ ಆಡಿ ಕ್ಯೂ3 ಪಯಣವನ್ನು ಮತ್ತಷ್ಟು ಆನಂದದಾಯಕವಾಗಿಸಲಿದೆ. ಇನ್ನು ಹಿಂದುಗಡೆಯೂ ಪರಿಷ್ಕೃತ ಬಂಪರ್ ಹಾಗೂ ಎಲ್ ಇಡಿ ಬೆಳಕಿನ ಸೇವೆಯಿರಲಿದೆ.

ಇನ್ನು ಕಾರಿನೊಳಗೂ ಕೆಲವೊಂದು ಬದಲಾವಣೆಗಳನ್ನು ಗಮನಿಸಬಹುದಾಗಿದ್ದು, ಹೆಚ್ಚು ಕ್ರೀಡಾತ್ಮಕತೆಗೆ ಆದ್ಯತೆ ಕೊಡಲಾಗಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುರುವುದಿಲ್ಲ.

ನೂತನ ಆಡಿ ಕ್ಯೂ3, 2.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 184 ಅಶ್ವಶಕ್ತಿ ಉತ್ಪಾದಿಸಲಿದೆ. ಅಂದರೆ ಹಿಂದಿನ ಮಾದರಿಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ. ಇನ್ನು 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಸಹ ಕಂಡುಬರಲಿದೆ.

ಅಂತೆಯೇ 2.0 ಲೀಟರ್ ಟಿಎಫ್‌ಎಸ್ಐ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ (209) ಇರಲಿದೆ. ಹಾಗೆಯೇ ಕ್ವಾಟ್ರೊ ಆಲ್ ವೀಲ್ ಡ್ರೈವ್ ಹಾಗೂ ಫ್ರಂಟ್ ವೀಲ್ ಡ್ರೈವ್ ಆಯ್ಕೆಯೂ ಇರುತ್ತದೆ.

ಸುರಕ್ಷತೆ
ಆರು ಏರ್ ಬ್ಯಾಗ್,
ಎಬಿಎಸ್,
ಇಬಿಡಿ,
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್,
ಬ್ರೇಕ್ ಅಸಿಸ್ಟ್


Click it and Unblock the Notifications








