ಬಿಡುಗಡೆಗೂ ಮೊದಲೇ ಹೋಂಡಾ ಜಾಝ್ ರಫ್ತು ಆರಂಭ

By Nagaraja

ಪ್ರಸಕ್ತ ಸಾಲಿನಲ್ಲಿ ದೇಶದ ರಸ್ತೆಗೆ ಅಪ್ಪಳಿಸಲಿರುವ ಬಹುನಿರೀಕ್ಷಿತ ಮಾದರಿಗಳಲ್ಲಿ ಹೋಂಡಾ ಜಾಝ್ ಕೂಡಾ ಒಂದಾಗಿದೆ. ಕಳೆದ ಒಂದು ವರ್ಷದಿಂದ ಅತಿ ಹೆಚ್ಚು ಸುದ್ದಿಗೆ ಕಾರಣವಾಗಿರುವ ಹೋಂಡಾ ಜಾಝ್ ಈಗಾಗಲೇ ತವರೂರಿನ ಮಾರುಕಟ್ಟೆಯಾದ ಜಪಾನ್‌ನಲ್ಲಿ ಬಿಡುಯಾಗಿ ಒಂದು ವರ್ಷವೇ ಕಳೆದಿದ್ದು, ಗ್ರಾಹಕರಿಂದ ಅತಿ ಹೆಚ್ಚಿನ ಪ್ರತಿಕ್ರಿಯೆಗೆ ಪಾತ್ರವಾಗಿದೆ.

ಪ್ರಸ್ತುತ ಪ್ರೀಮಿಯಂ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯೆಸುವ ಯೋಜನೆಯನ್ನು ಹೊಂದಿದೆ. ಇದರಂತೆ ಸ್ಪರ್ಧಾತ್ಮಕ ದರ ಕಾಪಾಡುವ ನಿಟ್ಟಿನಲ್ಲಿ ಭಾರತದಲ್ಲೇ ಸ್ಥಳೀಯವಾಗಿ ನಿರ್ಮಾಣ ಕಾರ್ಯ ಆರಂಭಿಸಿತ್ತು. ಈಗ ಬಿಡುಗಡೆ ಮುನ್ನವೇ ಜಾಝ್ ರಫ್ತು ಕಾರ್ಯವನ್ನು ಹೋಂಡಾ ಆರಂಭಿಸಿದೆ.

2015 honda jazz

ವರದಿಗಳ ಪ್ರಕಾರ ಭಾರತದಲ್ಲಿ ನಿರ್ಮಾಣಗೊಂಡಿರುವ 2015 ಹೋಂಡಾ ಜಾಝ್ ಈಗಾಗಲೇ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದೆ. ಇನ್ನೊಂದೆಡೆ ಭಾರತದಲ್ಲಿ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ. ಈ ಬಗ್ಗೆ ಯಾವ ಕ್ಷಣ ಬೇಕಾದರೂ ಹೋಂಡಾ ಅಧಿಕೃತರಿಂದ ಘೋಷಣೆ ನಿರೀಕ್ಷಿಸಬಹುದಾಗಿದೆ.

ದಕ್ಷಿಣ ಆಫ್ರಿಕಾದತ್ತ ಪಯಣ ಬೆಳೆಸಿರುವ ಹೊಸ ಜಾಝ್ ಬೇಸ್ ವೆರಿಯಂಟ್ ಬೆಲೆ 9.54 ಲಕ್ಷ ರು.ಗಳಷ್ಟಿದೆ. ಅಂತೆಯೇ ಟಾಪ್ ಎಂಡ್ ವೆರಿಯಂಡ್ 14.05 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇನ್ನು ದಕ್ಷಿಣ ಆಫ್ರಿಕಾ ಜಾಝ್ ಮಾದರಿಯು ಎರಡು ಪೆಟ್ರೋಲ್ ಎಂಜಿನ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಅಂದರೆ ಡೀಸೆಲ್ ಎಂಜಿನ್ ಕೊರತೆ ಕಾಡಲಿದೆ.

2015 honda jazz

ಎಂಜಿನ್ ವಿವರಣೆ
1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ - 87 ಅಶ್ವಶಕ್ತಿ, 110 ತಿರುಗುಬಲ (ಭಾರತ ಹಾಗೂ ದಕ್ಷಿಣ ಆಫ್ರಿಕಾದಲ್ಲಿ)
1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ - 115 ಅಶ್ವಶಕ್ತಿ, 140 ತಿರುಗುಬಲ (ದಕ್ಷಿಣ ಆಫ್ರಿಕಾದಲ್ಲಿ ಮಾತ್ರ)
1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ - 99 ಅಶ್ವಶಕ್ತಿ, 220 ತಿರುಗುಬಲ (ಭಾರತದಲ್ಲಿ ಮಾತ್ರ)

ಇನ್ನು 5 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಸಿವಿಟಿ ಆಯ್ಕೆಯಲ್ಲಿ ಲಭ್ಯವಾಗಲಿದೆ. ಆದರೆ ಡೀಸೆಲ್ ಮಾದರಿಯು 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮಾತ್ರ ಪಡೆದುಕೊಳ್ಳಲಿದೆ.

ಸುರಕ್ಷತೆ
ಡ್ಯುಯಲ್ ಫ್ರಂಟ್ ಏರ್ ಬ್ಯಾಗ್,
ಸೈಡ್ ಮತ್ತು ಕರ್ಟೈನ್ ಏರ್ ಬ್ಯಾಗ್,
ಎಬಿಎಸ್,
ಇಬಿಡಿ,
ವಾಹನ ಸ್ಥಿರತೆ ನಿಯಂತ್ರಣ

ಅನುಕೂಲತೆ
ಸ್ಟೀರಿಂಗ್ ವೀಲ್ ಮೌಂಟೆಡ್ ಆಡಿಯೋ ಕಂಟ್ರೋಲ್,
ಯುಎಸ್‌ಬಿ ಕನೆಕ್ಟಿವಿಟಿ,
ಬ್ಲೂಟೂತ್,
ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್

ಹೋಂಡಾ ಜಾಝ್ ಜೊತೆಗೆ ಸಿಆರ್-ವಿ ಹಾಗೂ ಎಚ್‌ಆರ್-ವಿ ಮಾದರಿಗಳು ಸಹ ಪ್ರಸಕ್ತ ಸಾಲಿನಲ್ಲೇ ದೇಶದ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

More from DriveSpark

Article Published On: Thursday, January 29, 2015, 15:10 [IST]
English summary
Honda India has planned to locally manufacture the Jazz to keep costs low. Now the Japanese manufacturer has already commenced assembly of its Jazz in India. They have, however, still not launched the hatchback in India and have begun exports to South-Africa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+