ಫೋಕ್ಸ್‌ವ್ಯಾಗನ್ 'ಫೋಕ್ಸ್‌ಫೆಸ್ಟ್' ಫೇಸ್ಟಿವ್ ಆಫರ್

By Nagaraja

ದೀಪಾವಳಿ ಹಾಗೂ ದಸರಾ ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಕೊಡುಗೆಯೊಂದಿಗೆ ಮುಂದೆ ಬಂದಿರುವ ಜರ್ಮನಿ ಮೂಲದ ಫೋಕ್ಸ್ ವ್ಯಾಗನ್ ಸಂಸ್ಥೆಯು "ಫೋಕ್ಸ್‌ಫೆಸ್ಟ್ 2015" ಫೇಸ್ಟಿವ್ ಆಫರ್ ಘೋಷಿಸಿದೆ.

ಈ 30 ದಿನಗಳ ಅವಧಿಯಲ್ಲಿ ಗ್ರಾಹಕರು ಪೋಕ್ಸ್ ವ್ಯಾಗನ್ ಕಾರು ಖರೀದಿ ವೇಳೆಯಲ್ಲಿ ಆಕರ್ಷಕ ಆಫರುಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದ್ದು, ಹಾಲಿಡೇ ಪ್ಯಾಕೇಜ್, ಗಿಫ್ಟ್ ಹಾಗೂ ಇತರೆ ಗರಿಷ್ಠ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಫೋಕ್ಸ್‌ವ್ಯಾಗನ್ ಫೋಕ್ಸ್‌ಫೆಸ್ಟ್ 2015

ಹೊಸ ಕಾರು ಖರೀದಿ ವೇಳೆಯಲ್ಲಿ ಗ್ರಾಹಕರಿಗೆ ಫೋಕ್ಸ್ ವ್ಯಾಗನ್ ಹಣಕಾಸು ನೆರವು ನೀಡಲಿದೆ. ಇದರ ಜೊತೆಗೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ವೆಂಟೊ ಹೈಲೈನ್ ಪ್ಲಸ್ ಖರೀದಿಯಲ್ಲಿ ಒಂದು ವರ್ಷದ ವಿಮೆ ಸೌಲಭ್ಯಯೂ ಲಭ್ಯವಾಗಲಿದೆ.

ಎಲ್ಲ ಫೋಕ್ಸ್ ವ್ಯಾಗನ್ ಕಾರುಗಳಿಗೂ ಗರಿಷ್ಠ 40,000 ರು.ಗಳ ವರೆಗೆ ಎಕ್ಸ್ ಚೇಂಜ್ ಹಾಗೂ ಲಾಯಲ್ಟಿ ಪ್ರಯೋಜನ, ವಾರ್ಷಿಕ ಶೇಕಡಾ 3.99 ರಲ್ಲಿ ಹಣಕಾಸು ಯೋಜನೆ ಹಾಗೂ ಅದೃಷ್ಟವಂತರು Blaupunkt ಮಲ್ಟಿಮೀಡಿಯಾ ಟಾಬ್ಲೆಟ್ ಗೆಲ್ಲಬಹುದಾಗಿದೆ. ಇವೆಲ್ಲರ ಜೊತೆಗೆ ವಿಶೇಷ ಹಾಲಿಡೇ ಪ್ಯಾಕೇಜ್ ಸಹ ನೀಡಲಾಗುತ್ತದೆ.

ಈ ಎಲ್ಲ ಆಫರ್ ಗಳು ಸಂಸ್ಥೆಯ ಜನಪ್ರಿಯ ಪೊಲೊ, ವೆಂಟೊ ಹಾಗೂ ಜೆಟ್ಟಾ ಮಾದರಿಗಳಿಗೆ ಲಭ್ಯವಾಗಲಿದೆ. ಸಮಗ್ರ ಮಾಹಿತಿಗಾಗಿ ಅಧಿಕೃತ ಫೋಕ್ಸ್ ವ್ಯಾಗನ್ ಡೀಲರ್ ಶಿಪ್ ಸಂಪರ್ಕಿಸಲು ಮರೆಯದಿರಿ.

More from DriveSpark

Article Published On: Friday, October 23, 2015, 9:39 [IST]
English summary
2015 Volkswagen Volkfest India Announced For Festive Celebration
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+