2016 ದೆಹಲಿ ಆಟೋ ಎಕ್ಸ್ ಪೋ ಯಾವಾಗ ನಡೆಯುತ್ತೇ ಗೊತ್ತೇ?
ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳವಾಗಿರುವ ಆಟೋ ಎಕ್ಸ್ ಪೋ ವರ್ಷಂಪ್ರತಿ ರಾಷ್ಟ್ರ ರಾಜಧಾನಿ ನವದಹೆಲಿಯಲ್ಲಿ ಆಯೋಜನೆಯಾಗುತ್ತಾ ಬಂದಿದೆ. ಇಲ್ಲಿ ಎಕ್ಸ್ ಕ್ಲೂಸಿವ್ ಮಾದರಿಗಳು ಬಿಡುಗಡೆಯಾಗುವುದರೊಂದಿಗೆ ದೇಶದ ಜೊತೆಗೆ ವಿದೇಶದ ವಾಹನ ತಯಾರಿಕ ಸಂಸ್ಥೆಗಳಿಗೆ ತಮ್ಮ ಭವಿಷ್ಯ ಕಾನ್ಸೆಪ್ಟ್ ಪ್ರದರ್ಶಿಸಲು ಅವಕಾಶ ದೊರೆಯುತ್ತದೆ.
ನಿಮ್ಮಗೆಲ್ಲರಿಗೂ ತಿಳಿದಿರುವಂತೆಯೇ ಕಳೆದ ವರ್ಷ ನಡೆಯ ಆಟೋ ಎಕ್ಸ್ ಪೋ ಭರ್ಜರಿ ಯಶ ಸಾಧಿಸಿತ್ತು. ಈಗ 13ನೇ ಆವೃತ್ತಿಯ 2016ನೇ ಆಟೋ ಎಕ್ಸ್ ಪೋಗಾಗಿ ಸಿದ್ಧತೆ ನಡೆಯುತ್ತಿದೆ.

ಈ ನಡುವೆ ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ಸಾಲಿನ ಆಟೋ ಎಕ್ಸ್ ಪೋ 2016 ಫೆಬ್ರವರಿ 5ರಿಂದ 9ರ ವರೆಗೆ ಇಂಡಿಯಾ ಎಕ್ಸ್ ಪೋ ಮಾರ್ಟ್, ಗ್ರೇಟರ್ ನೋಯ್ಡಾ ಮತ್ತು ದೆಹಲಿ ಎನ್‌ಸಿಆರ್‌ನಲ್ಲಿ ಆಯೋಜನೆಯಾಗಲಿದೆ.
ಇದೇ ಅವಧಿಯಲ್ಲಿ ಜರಗುವ ಆಟೋ ಬಿಡಿಭಾಗಗಳ ಕಾಂಪೊನೆಂಟ್ ಎಕ್ಸ್ ಪೋ 2016 ಫೆಬ್ರವರಿ 4ರಿಂದ 7ರ ವರೆಗೆ ಪ್ರಗತಿ ಮೈದಾನದಲ್ಲಿ ನಡೆಯಲಿದೆ.
13ನೇ ಆವೃತ್ತಿಯ ದೆಹಲಿ ಆಟೋ ಎಕ್ಸ್ ಪೋದಲ್ಲಿ ಹಲವಾರು ನೂತನ ಮಾದರಿಗಳು ಬಿಡುಗಡೆಯಾಗಲಿದೆ. ಇದೇ ಆಟೋ ಶೋದಲ್ಲಿ ಟೊಯೊಟಾ ಸಂಸ್ಥೆಯು ಮುಂದಿನ ಜನಾಂಗದ ಇನ್ನೋವಾ ಬಿಡುಗಡೆ ಮಾಡಲಿದೆ. ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮಹೀಂದ್ರ ಆಂಡ್ ಮಹೀಂದ್ರ ಕೂಡಾ ತನ್ನ ಹೊಸ ಉತ್ಪನ್ನಗಳೊಂದಿಗೆ ಮುಂದೆ ಬರುವ ನಿರೀಕ್ಷೆಯಿದೆ. ಕಾರು ಸಂಸ್ಥೆಗಳು ಮಾತ್ರವಲ್ಲದೆ ದ್ವಿಚಕ್ರ ವಾಹನಗಳ ಪ್ರದರ್ಶನವೂ ನಡೆಯಲಿದೆ.


Click it and Unblock the Notifications








