2016 ಮಿಟ್ಸುಬಿಸಿ ಪಜೆರೊ ಥಾಯ್ಲೆಂಡ್ ಪ್ರವೇಶ; ಮುಂದೆ ಭಾರತ
2016 ಮಿಟ್ಸುಬಿಸಿ ಪಜೆರೊ ಥಾಯ್ಲೆಂಡ್ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಜಪಾನ್ ಸಂಸ್ಥೆಯಿಂದ ನಿರ್ಮಿಸಲ್ಪಡುವ ಈ ಐಕಾನಿಕ್ ಮಾದರಿಯು ಮುಂದಿನ ದಿನಗಳಲ್ಲಿ ಭಾರತವನ್ನು ತಲುಪಲಿದೆ ಎಂಬುದು ಈಗಿನ ಹಾಟ್ ಸುದ್ದಿ.
ಮಿಟ್ಸುಬಿಸಿ ಕಾರು ಬ್ರಾಂಡ್ ಭಾರತದಲ್ಲಿ ಅಷ್ಟೇನೂ ಸದ್ದು ಮಾಡದೇ ಇರಬಹುದು. ಆದರೆ ತಾಯ್ನಾಡಿನಲ್ಲಿ ಹೆಚ್ಚಿನ ಜನಪ್ರಿಯತೆ ಕಂಡಿರುವ ಮಿಟ್ಸುಬಿಸಿ ಈಗ ಹೊಚ್ಚ ಹೊಸ ಮಾದರಿಯೊಂದಿಗೆ ಕಣಕ್ಕಿಳಿದಿದೆ.

2016 ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ಸ್ ಬೆಲೆ ಮಾಹಿತಿ (ಭಾರತೀಯ ರುಪಾಯಿ ಪ್ರಕಾರ)
- 2.4 ಜಿಎಲ್‌ಎಸ್ ಪಜೆರೊ ಸ್ಪೋರ್ಟ್ - 20.81 ಲಕ್ಷ ರು.
- 2.4 ಜಿಟಿ ಪಜೆರೊ ಸ್ಪೋರ್ಟ್ - 22.85 ಲಕ್ಷ ರು.
- 2.4 ಜಿಟಿ 4 ವೀಲ್ ಡ್ರೈವ್ ಪಜೆರೊ ಸ್ಪೋರ್ಟ್ - 26.51 ಲಕ್ಷ ರು.
ಎಂಜಿನ್ ತಾಂತ್ರಿಕತೆ
- 2.4 ಲೀಟರ್ ಟರ್ಬೊ ಡೀಸೆಲ್ ಎಂಜಿನ್
- 178.45 ಅಶ್ವಶಕ್ತಿ
- 430 ಎನ್‌ಎಂ ತಿರುಗುಬಲ
ಗೇರ್ ಬಾಕ್ಸ್: 8 ಸ್ಪೀಡ್ ಆಟೋಮ್ಯಾಟಿಕ್

ವಿಶೇಷತೆಗಳು
- ಫೋರ್ ವೀಲ್ ಡ್ರೈವ್,
- ಎಲ್ಲ ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್
ಸುರಕ್ಷತೆ
- ಏಳು ಏರ್ ಬ್ಯಾಗ್,
- ಸ್ಟೆಬಿಲಿಟಿ ಕಂಟ್ರೋಲ್,
- ಎಬಿಎಸ್ ಜೊತೆ ಇಬಿಡಿ,
- ಬ್ಲೈಂಡ್ ಸ್ಪಾಟ್ ವಾರ್ನಿಂಗ್,
- ಮುಂಭಾಗದಲ್ಲಿ ಢಿಕ್ಕಿ ತಗ್ಗಿಸುವಿಕೆಯ ವ್ಯವಸ್ಥೆ,
- ನಾಲ್ಕು ಕ್ಯಾಮೆರಾಗಳ ಜೊತೆಗೆ ಬಹು ಮಿರರ್ ತಂತ್ರಜ್ಞಾನ
ಭಾರತದಲ್ಲಿನ ಪ್ರತಿಸ್ಪರ್ಧಿಗಳು
- ಟೊಯೊಟಾ ಫಾರ್ಚ್ಯುನರ್,
- ಫೋರ್ಡ್ ಎಂಡೀವರ್,
- ಷೆವರ್ಲೆ ಟ್ರೈಲ್‌ಬ್ಲೇಜರ್ (ಇನ್ನಷ್ಟೇ ಬಿಡುಗಡೆಯಾಗಬೇಕಿದೆ.)


Click it and Unblock the Notifications








