2016 ಟೊಯಾಟಾ ಫಾರ್ಚ್ಯುನರ್ ಸಕತ್ ಬ್ಯೂಟಿಫುಲ್
ಹೊಸ ಕಾರೊಂದರ ಆಗಮನಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, 2016 ಟೊಯೊಟಾ ಫಾರ್ಚ್ಯುನರ್ ಐಷಾರಾಮಿ ಕ್ರೀಡಾ ಬಳಕೆಯ ವಾಹನದ ಚಿತ್ರಗಳು ಲೀಕ್ ಆಗಿವೆ. ಜಪಾನ್ ಮೂಲದ ಟೊಯೊಟಾ ಸಂಸ್ಥೆಯ ಜನಪ್ರಿಯ ಎಸ್ ಯುವಿಗಳಲ್ಲಿ ಒಂದಾಗಿರುವ ಫಾರ್ಚ್ಯುನರ್ ವರ್ಷಾಂತ್ಯದೊಳಗೆ ಅಂತರಾಷ್ಟ್ರೀಯ ಮಾರುಕಟ್ಟೆ ತಲುಪಲಿದೆ.
ನಿಮಗೆ ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲದಿದ್ದರೆ ನಾವಿಲ್ಲಿ ಹೇಳ ಬಯಸುವುದೇನೆಂದರೆ ನೂತನ ಫಾರ್ಚ್ಯುನರ್ ಟೊಯೊಟಾ ಹಿಲಕ್ಸ್ ಪಿಕಪ್ ಟ್ರಕ್ ನ ಎಸ್ ಯುವಿ ಮಾದರಿಯಾಗಿದೆ. ಅಲ್ಲದೆ ಏಷ್ಯಾದ ಆಯ್ದ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ.

ಭಾರತದಲ್ಲಿ ಪ್ರೀಮಿಯಂ ಎಸ್ ಯುವಿ ಸಾಲಿನಲ್ಲಿ ಗುರುತಿಸಿಕೊಂಡಿರುವ ಟೊಯೊಟಾ ಫಾರ್ಚ್ಯುನರ್ ಗೆ ಅತ್ಯುತ್ತಮ ಬೇಡಿಕೆ ದಾಖಲಾಗಿದೆ. ಈಗ ಬರಲಿರುವ ನೂತನ ಮಾದರಿಯು ಮತ್ತಷ್ಟು ಮೋಡಿ ಮಾಡುವ ನಿರೀಕ್ಷೆಯಿದೆ.

ಹೊಸ ಕಾರಿನಲ್ಲಿ 2.8 ಲೀಟರ್ ಟರ್ಬೊ ಡೀಸೆಲ್ ಎಂಜಿನ್ (177 ಅಶ್ವಶಕ್ತಿ) ಮತ್ತು 2.4 ಲೀಟರ್ ಡೀಸೆಲ್ ಎಂಜಿನ್ (160 ಅಶ್ವಶಕ್ತಿ) ಆಳವಡಿಸುವ ಸಾಧ್ಯತೆಯಿದೆ. ಹಾಗೆಯೇ 2.7 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ (164 ಅಶ್ವಶಕ್ತಿ) ಮತ್ತು ಇನ್ನು ಆಯ್ದ ಮಾರುಕಟ್ಟೆಯಲ್ಲಿ 4.0 ಲೀಟರ್ ವಿ6 ಪೆಟ್ರೋಲ್ (278 ಅಶ್ವಶಕ್ತಿ) ಎಂಜಿನ್ ಕೂಡಾ ಇರಲಿದೆ.

2009ನೇ ಸಾಲಿನಲ್ಲಿ ಫಾರ್ಚ್ಯುನರ್ ಮೊದಲ ಬಾರಿಗೆ ಭಾರತಕ್ಕೆ ಕಾಲಿರಿಸಿತ್ತು. ಈಗ ನೂತನ ಫಾರ್ಚ್ಯುನರ್ 2016 ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಮುಂಭಾಗದಲ್ಲಿ ವಿ ಆಕಾರದ ಟ್ವಿನ್ ಸ್ಲೇಟ್ ಗ್ರಿಲ್, ಕ್ರೋಮ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್, ಫಾಗ್ ಲ್ಯಾಂಪ್ ಹೆಚ್ಚು ಆಕರ್ಷಕವೆನಿಸಲಿದೆ.

ಇನ್ನು ಐಷಾರಾಮಿ ಒಳಮೈ, ದೊಡ್ಡದಾದ ಮಾಹಿತಿ ಮನರಂಜನಾ ಪರದೆ, 12 ಸ್ಪೋಕ್ ಅಲಾಯ್ ವೀಲ್, ಏಳು ಸೀಟುಗಳ ಲೆಥರ್ ಸೀಟು, ನಾಲ್ಕು ಸ್ಪೋಕ್ ಸ್ಟೀರಿಂಗ ವೀಲ್, ಆಡಿಯೋ, ಬ್ಲೂಟೂತ್ ನಿಯಂತ್ರಣ ಮುಂತಾದ ಸೌಲಭ್ಯಗಳಿರಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ನೂತನ ಫಾರ್ಚ್ಯುನರ್ ಮಾದರಿಯು, ಫೋರ್ಡ್ ಎಂಡೀವರ್ ಮತ್ತು ಮಿಟ್ಸುಬಿಸಿ ಪಜೆರೊ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ. ಭಾರತದಲ್ಲೂ ಇದು ಐಷಾರಾಮಿ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರಲಿದೆ ಎಂಬ ನಂಬಿಕೆಯನ್ನು ಸಂಸ್ಥೆ ಹೊಂದಿದೆ.


Click it and Unblock the Notifications