2016 ಟೊಯೊಟಾ ಫಾರ್ಚ್ಯುನರ್ ಸಿಡ್ನಿಯಲ್ಲಿ ಅನಾವರಣ
ಮುಂಬರುವ 2015 ಅಕ್ಟೋಬರ್ ತಿಂಗಳಲ್ಲಿ ಪದಾರ್ಪಣೆಗೈಯಲಿರುವ ಬಹುನಿರೀಕ್ಷಿತ ಟೊಯೊಟಾ 2015 ಫಾರ್ಚ್ಯುನರ್ ಕ್ರೀಡಾ ಬಳಕೆಯ ವಾಹನವು ಆಸ್ಟ್ರೇಲಿಯಾದ ಸಿಡ್ನಿ ಹಾಗೂ ಥಾಯ್ಲೆಂಡ್ ನಲ್ಲಿ ಭರ್ಜರಿ ಅನಾವರಣ ಕಂಡಿದೆ.
ಮುಂದಿನ ದಿನಗಳಲ್ಲಿ ಇದೇ ಕಾರು ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿರುವುದು ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಜಪಾನ್‌ನ ಈ ಐಷಾರಾಮಿ ಎಸ್ ಯುವಿ, ಟೊಯೊಟಾ ಹಿಲಕ್ಸ್ ಪಿಕಪ್ ಟ್ರಕ್ ತಳಹದಿಯಲ್ಲಿ ರೂಪುಗೊಂಡಿದೆ.

ಕಾರಿನಡಿಯಲ್ಲಿ ಟೊಯೊಟಾದ ನೂತನ ಡೈರಕ್ಟ್ ಇಂಜೆಕ್ಟಡ್ '1ಜಿಡಿ' 2.8 ಲೀಟರ್ ಟರ್ಬೊ ಡೀಸೆಲ್ ಫೋರ್ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದೆ. ಇದು ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಗೇರ್ ಬಾಕ್ಸ್ ಸಹ ಹೊಂದಿರುತ್ತದೆ.

ಆಸ್ಟ್ರೇಲಿಯಾದಲ್ಲಿ ಎಲ್ಲ ಫಾರ್ಚ್ಯುನರ್ ಶ್ರೇಣಿಯ ಮಾದರಿಗಳು ಫೋರ್ ವೀಲ್ ಚಾಲನಾ ವ್ಯವಸ್ಥೆಯನ್ನು ಪಡೆಯಲಿದೆ. ಇದು ಪ್ರತಿಸ್ಪರ್ಧಿಗಿಂತಲೂ ಒಂದು ಹೆಜ್ಜೆ ಮುಂದಿಡಲು ಸಹಕಾರಿಯಾಗಲಿದೆ.

ಎ-ಟ್ರಾಕ್ ಆಕ್ಟಿವ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ರಿವರ್ಸ್ ಕ್ಯಾಮೆರಾ, ಸೆವೆನ್ ಏರ್ ಬ್ಯಾಗ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಮತ್ತು ಎಮರ್ಜನ್ಸಿ ಸ್ಟಾಪ್ ಸಿಗ್ನಲ್ ಗಳು ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳಾಗಿರಲಿದೆ.

ನೂತನ ಫಾರ್ಚ್ಯನರ್ ಮಾದರಿಯು ಜಿಎಕ್ಸ್, ಜಿಎಕ್ಸ್ ಎಲ್ ಮತ್ತು ಟಾಪ್ ಸೆಲ್ಫ್ ಕ್ರೂಸಡ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಆಫ್ ರೋಡ್ ವೆರಿಯಂಟ್ ಇನ್ನಷ್ಟೇ ಅನಾವರಣಗೊಳ್ಳಬೇಕಾಗಿದೆ.

ಎಂಜಿನ್ ಆಯ್ಕೆ
- 2,755 ಸಿಸಿ ಡೀಸೆಲ್ ಎಂಜಿನ್ - 177 ಅಶ್ವಶಕ್ತಿ, 450 ಎನ್ ಎಂ ತಿರುಗುಬಲ. ಫೋರ್ ವೀಲ್ ಮತ್ತು ಟು ವೀಲ್ ಡ್ರೈವ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್.
- 2,393 ಸಿಸಿ ಡೀಸೆಲ್ ಎಂಜಿನ್ - 150 ಅಶ್ವಶಕ್ತಿ, 400 ಎನ್ ಎಂ ತಿರುಗುಬಲ. ಟು ವೀಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್.
- 2,694 ಸಿಸಿ ಪೆಟ್ರೋಲ್ ಎಂಜಿನ್ - 166 ಅಶ್ವಶಕ್ತಿ, 245 ಎನ್ ಎಂ ತಿರುಗುಬಲ. ಟು ವೀಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್.
- ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್,
- ಫ್ರಂಟ್ ಮತ್ತು ರಿಯರ್ ಎಸಿ,
- ದೊಡ್ಡದಾದ ಟಚ್ ಸ್ಕ್ರೀನ್ ಪರದೆ ಜೊತೆಗೆ ಟೊಯೊಟಾ ಲಿಂಕ್ ಕನೆಕ್ಟಿವಿಟಿ,
- ರಿವರ್ಸ್ ವ್ಯೂ ಕ್ಯಾಮೆರಾ ಸ್ಟ್ಯಾಂಡರ್ಡ್,
- ಡಿಸ್ಕ್ ಬ್ರೇಕ್,
- ಸೆವೆನ್ ಏರ್ ಬ್ಯಾಗ್,
- ಹಿಲ್ ಸ್ಟ್ಯಾರ್ಟ್ ಅಸಿಸ್ಟ್,
- ಟ್ರಾಕ್ಷನ್ ಮತ್ತು ಸ್ಟೆಬಿಲಿಟಿ ಕಂಟ್ರೋಲ್,
- ಫೈವ್ ಲಿಂಕ್ ರಿಯರ್ ಕಾಯಿಲ್ ಸಸ್ಪೆನ್ಷನ್,
- ಏಳು ಸೀಟು,
- 17 ಇಂಚುಗಳ ಸ್ಟೀರಿಂಗ್ ವೀಲ್ ಜೊತೆ ಆಲ್ ಟರೈನ್ ಚಕ್ರಗಳು
- ಐಚ್ಛಿಕ 18 ಇಂಚುಗಳ ಚಕ್ರ
- ರೂಫ್ ರೈಲ್,
- ಕೀಲೆಸ್ ಎಂಟ್ರಿ ಮತ್ತು ಸ್ಟ್ಯಾರ್ಟ್,
- ರಿವರ್ಸ್ ಪಾರ್ಕಿಂಗ್ ಸೆನ್ಸಾರ್,
- ಎಲ್ ಇಡಿ ಡೇಟೈಮ್ ಲೈಟ್ಸ್,
- ಎಲ್ ಇಡಿ ಬೈ-ಎಲ್ಇಡಿ ಹೆಡ್ ಲೈಟ್,
- ಎಲ್ ಇಡಿ ರಿಯರ್ ಲೈಟ್ಸ್,
- ನೆಬುಲಾ ಬ್ಲೂ,
- ಫಾಟಂ ಬ್ರೌನ್,
- ಆ್ಯಟಿಟ್ಯೂಡ್ ಬ್ಲ್ಯಾಕ್ ಮೈಕಾ,
- ಸೂಪರ್ ವೈಟ್,
- ವೈಟ್ ಪಿಯರ್ಲ್,
- ಡಾರ್ಕ್ ಗ್ರೇ ಮೈಕಾ ಮೆಟ್ಯಾಲಿಕ್,
- ಸಿಲ್ವರ್ ಮೆಟ್ಯಾಲಿಕ್

ಕೆಲವು ಗಮನಾರ್ಹ ವೈಶಿಷ್ಟ್ಯಗಳು

ಕೆಲವು ಗಮನಾರ್ಹ ವೈಶಿಷ್ಟ್ಯಗಳು

ಕೆಲವು ಗಮನಾರ್ಹ ವೈಶಿಷ್ಟ್ಯಗಳು

ಕೆಲವು ಗಮನಾರ್ಹ ವೈಶಿಷ್ಟ್ಯಗಳು

ಬಣ್ಣಗಳು

ಅಂತಿಮವಾಗಿ ನೂತನ ಟೊಯೊಟಾ 2016 ಫಾರ್ಚ್ಯುನರ್ ಐಷಾರಾಮಿ ಕ್ರೀಡಾ ಬಳಕೆಯ ವಾಹನವು ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಭಾರತಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ.


Click it and Unblock the Notifications








