ಟೋಕಿಯೋದಲ್ಲಿ ರಂಗೇರಿದ 4ನೇ ತಲೆಮಾರಿನ ಟೊಯೊಟಾ ಪ್ರಯಾಸ್

By Nagaraja

ನಾಲ್ಕನೇ ತಲೆಮಾರಿನ ಟೊಯೊಟಾ ಪ್ರಯಾಸ್ 44ನೇ ಟೋಕಿಯೋ ಮೋಟಾರು ಶೋದಲ್ಲಿ ರಂಗೇರಿದೆ. ಹಾಗಿದ್ದರೂ ಈ ಬಹುನಿರೀಕ್ಷಿತ ಕಾರು ಪ್ರಾರಂಭದಲ್ಲಿ ಜಪಾನ್ ನಲ್ಲಿ ಮಾತ್ರ ಮಾರಾಟವಾಗಲಿದ್ದು, ಬಳಿಕ ಜಾಗತಿಕ ಮಾರುಕಟ್ಟೆಯನ್ನು ತಲುಪಲಿದೆ.

ನೂತನ ಟೋಕಿಯೋ ಪ್ರಯಾಸ್ ಹೈಬ್ರಿಡ್ ವಾಹನವಾಗಿರಲಿದ್ದು, ತನ್ನ ಹಿಂದಿನ ತಲೆಮಾರಿನ ಮಾದರಿಗಳಿಗೆ ಹೋಲಿಸಿದಾಗ ಶೈಲಿಯಿಂದ ತೊಡಗಿ ಆಕ್ರಮಣಕಾರಿಯಾಗಿ ಗುರುತಿಸಿಕೊಂಡಿದೆ.

ಟೋಕಿಯೋದಲ್ಲಿ ರಂಗೇರಿದ 4ನೇ ತಲೆಮಾರಿನ ಟೊಯೊಟಾ ಪ್ರಯಾಸ್

ಬ್ಲೈಡ್ ಸ್ಪಾಟ್ ಮಾನಿಟರಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮುಂತಾದ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ. ಟೊಯೊಟಾ ಸೇಫ್ಟಿ ಸೆನ್ಸ್ ಆಕ್ಟಿವ್ ಸೇಫ್ಟಿ ಪ್ಯಾಕೇಜ್ ಜೊತೆಗೆ ಮೊನೊಕ್ಯೂಲರ್ ಕ್ಯಾಮೆರಾ ಜೊತೆಗೆ ಮಲ್ಟಿಮೀಟರ್ ವೇವ್ ರಾಡಾರ್ ಹಾಗೂ ಪಾದಚಾರಿ ಗ್ರಹಣಾ ಶಕ್ತಿಯು ಇದರಲ್ಲಿರಲಿದೆ.

ಟೋಕಿಯೋದಲ್ಲಿ ರಂಗೇರಿದ 4ನೇ ತಲೆಮಾರಿನ ಟೊಯೊಟಾ ಪ್ರಯಾಸ್

ತನ್ನ ಹಿಂದಿನ ಮಾದರಿಗಳಿಗೆ ಹೋಲಿಸಿದಾಗ 2016 ಟೊಯೊಟಾ ಹೈಬ್ರಿಡ್ ಹಗುರ ಭಾರ ಹಾಗೂ ಚಿಕ್ಕದಾಗಿದಾಗಿರಲಿದೆ. ಎಂಜಿನಿಯರ್ ಗಳ ಹೈಬ್ರಿಡ್ ಉಪಕರಣಗಳನ್ನು ಕಡಿಮೆ ಸ್ಥಳದಲ್ಲಿ ಜೋಡಣೆ ಮಾಡವ ವ್ಯವಸ್ಥೆ ಮಾಡಿದ್ದಾರೆ. ಇದು ಶೇಕಡಾ 18ರಷ್ಟು ಹೆಚ್ಚಿನ ಇಂಧನ ಕ್ಷಮತೆ ನೀಡುವಲ್ಲಿ ಸಹಕಾರಿಯಾಗಲಿದೆ.

ಟೋಕಿಯೋದಲ್ಲಿ ರಂಗೇರಿದ 4ನೇ ತಲೆಮಾರಿನ ಟೊಯೊಟಾ ಪ್ರಯಾಸ್

ಕೇಂದ್ರ ಗುರುತ್ವ ಬಲವು ಕಡಿಮೆಯಾಗಿರುವುದರಿಂದ ವಾಹನಕ್ಕೆ ಹೆಚ್ಚಿನ ಸ್ಥಿರತೆ ಲಭ್ಯವಾಗಲಿದೆ. ಇವೆಲ್ಲವೂ ಕಾರಿನ ಒಟ್ಟಾರೆ ನಿರ್ವಹಣೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ.

ಟೋಕಿಯೋದಲ್ಲಿ ರಂಗೇರಿದ 4ನೇ ತಲೆಮಾರಿನ ಟೊಯೊಟಾ ಪ್ರಯಾಸ್

ಭಾರತದಲ್ಲಿ ಸದ್ಯಕ್ಕೆ ಪ್ರಯಾಸ್ ಮಾದರಿಯು ಮಾರಾಟದಲ್ಲಿದ್ದು, 38.10 ಲಕ್ಷ ರುಗಳಿಂದ 39.80 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಟೋಕಿಯೋದಲ್ಲಿ ರಂಗೇರಿದ 4ನೇ ತಲೆಮಾರಿನ ಟೊಯೊಟಾ ಪ್ರಯಾಸ್

ಪ್ರಸ್ತುತ ನಾಲ್ಕನೇ ತಲೆಮಾರಿನ ಪ್ರಯಾಸ್ ಮಾದರಿಯು 2016 ವರ್ಷಾಂತ್ಯದಲ್ಲಿ ದೇಶದ ಮಾರುಕಟ್ಟೆ ತಲುಪುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

Most Read Articles

Kannada
English summary
Fourth-Generation Toyota Prius Unveiled At Tokyo Motor Show
Story first published: Saturday, October 31, 2015, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X