ದೇಶದ ಹೆಮ್ಮೆ 21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿ
ದೇಶದ ವಾಹನ ಪ್ರೇಮಿಗಳು ಬಹಳ ಕಾತರದಿಂದ ಕಾದು ಕುಳಿತುಕೊಂಡಿರುವ 5ನೇ ಆವೃತ್ತಿಯ 21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿ ಇದೇ ಮುಂಬರುವ 2015 ಫೆಬ್ರವರಿ 21 ಹಾಗೂ 22ರಂದು ಆಯೋಜನೆಯಾಗಲಿದೆ.
ದೆಹಲಿಯ ರೆಡ್ ಪೋರ್ಟ್‌ನಿಂದ ಗುರ್ವಾಂಗ್ ವರೆಗೆ ಸಾಗಲಿರುವ ಈ ಮಹತ್ತರ ವಿಂಟೇಜ್ ರಾಲಿಗೆ ನಮ್ಮ ಡ್ರೈವ್ ಸ್ಪಾರ್ಕ್ ಅಧಿಕೃತ ಮಾಧ್ಯಮ ಪಾಲುದಾರಿಕೆಯನ್ನು ಹೊಂದಿದ್ದೇವೆ ಎಂಬುದನ್ನು ಹೆಮ್ಮೆಯಿಂದಲೇ ತಿಳಿಸಲಿಚ್ಛಿಸುತ್ತಿದ್ದೇವೆ. ಇದರಿಂತೆ 21 ಗನ್ ಸೆಲ್ಯೂಟ್ ರಾಲಿಗೆ ಸಂಬಂಧಪಟ್ಟ ಎಲ್ಲ ಸುದ್ದಿಗಳನ್ನು ನಾವು ಪ್ರಕಟಿಸಲಿದ್ದೇವೆ.

ದೇಶದ ಹೆಮ್ಮೆಯ 21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿಯಲ್ಲಿ ಪ್ರಖ್ಯಾತ ಮಹರಾಜ ಕಾರುಗಳ ಜೊತೆ ಅಂತರಾಷ್ಟ್ರೀಯ ಐಕಾನಿಕ್ ಕಾರುಗಳು ಪ್ರದರ್ಶನಗೊಳ್ಳಲಿದೆ. ಅಂತೆಯೇ 201 ವಿಂಟೇಜ್ ಕಾರುಗಳ ಜೊತೆಗೆ 50 ವಿಂಟೇಜ್ ಬೈಕ್‌ಗಳು ಪ್ರದರ್ಶನಗೊಳ್ಳಲಿದೆ.
ಇದರಲ್ಲಿ 1936ನೇ ಇಸವಿಯ ಡೈಮ್ಲರ್ ಸ್ಪೋರ್ಟ್ಸ್ ಕೂಪೆ, 1946ರ ಲಿಂಕನ್ ಕಾಂಟಿನೆಂಟಲ್, 1930ರ ಪ್ಯಾಕರ್ಡ್ 733 ಹಾಗೂ ಇನ್ನಿತರ ಅಪರೂಪದ ಕಾರುಗಳ ದರ್ಶನವಾಗಲಿದೆ. ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ 51 ಮಹಾರಾಜಾಸ್ ಕಾರುಗಳು ಸಹ ರಾಲಿಯ ಪ್ರಮುಖ ಆಕರ್ಷಣೆಯಾಗಲಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ 21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿ ಮಹಾ ನಿರ್ದೇಶಕ ಮದನ್ ಮೋಹನ್, "ಈ ಬಾರಿಯ ವಿಂಟೇಜ್ ಕಾರು ರಾಲಿ ಹಿಂದೆಂದಿಗಿಂತಲೂ ಅಭೂತಪೂರ್ವವಾಗಲಿದ್ದು, ವಿಶ್ವ ಪ್ರವಾಸಿ ತಾಣದ ಮ್ಯಾಪ್‌ನಲ್ಲಿ ಭಾರತ ಗುರುತಿಸಿಕೊಳ್ಳಿಸುವುದೇ ಪ್ರಮುಖ ಧ್ಯೇಯವಾಗಿದೆ" ಎಂದಿದ್ದಾರೆ.
21 ಗನ್ ಸೆಲ್ಯೂಟ್ ರಾಲಿ ದೇಶದ ಪಾಲಿಗೆ ನಿಜಕ್ಕೂ ಮೈಲುಗಲ್ಲಾಗಲಿದೆ. ಇದು ದೇಶದ ಭವ್ಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರ ಜೊತೆಗೆ ಜಾಗತಿಕವಾಗಿ ಭಾರತವನ್ನು ಗುರುತಿಸಲು ನೆರವಾಗಲಿದೆ. ಇಲ್ಲಿ ಮಲೇಷ್ಯಾ ಸಿಂಗಾಪುರ ವಿಂಟೇಜ್ ಕಾರು ಕ್ಲಬ್‌ಗಳು ಸಹ ತನ್ನ ಪಾಲುದಾರಿಕೆಯನ್ನು ಖಚಿತಪಡಿಸಿದೆ. ಇನ್ನು ಬ್ರಿಟನ್, ಶ್ರೀಲಂಕಾ ಹಾಗೂ ಪ್ಯಾರಿಸ್ ರಾಷ್ಟ್ರಗಳು ಸಹ 21 ಗನ್ ಸೆಲ್ಯೂಟ್ ರಾಲಿಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಉತ್ಸುಕತೆ ವ್ಯಕ್ತಪಡಿಸಿದೆ.
ದೆಹಲಿಯ ರೆಡ್ ಪೋರ್ಟ್‌ನಿಂದ ಆರಂಭವಾಗಲಿರುವ ಐತಿಹಾಸಿಕ ರಾಲಿಯು ರಾಜ್‌ಫಾಟ್, ತೀನ್ ಮೂರ್ತಿ ಮಾರ್ಗವಾಗಿ ರಾಷ್ಟೀಯ ಆರ್ಟ್ ಗ್ಯಾಲರಿ ಆಗಿ ಗುರ್ಗಾಂವ್ ಲೇಶುವರ್ ವ್ಯಾಲಿ ಪಾರ್ಕ್ ತಲುಪಲಿದೆ. ಈ ಮೂಲಕ ಸರಿ ಸುಮಾರು 52 ಕೀ.ಮೀ. ದೂರವನ್ನು ಕ್ರಿಮಿಸಲಿದೆ.


Click it and Unblock the Notifications








