21 ಗನ್ ಸೆಲ್ಯೂಟ್ ರಾಲಿ; ವಿಂಟೇಜ್ ಕಾರುಗಳ ಹಬ್ಬ

Written By:

ಭಾರತದ ಇತಿಹಾಸ ಪುಟ ತೆರೆದು ನೋಡಿದರೆ ಆಗಿನ ಕಾಲದಿಂದ ಇಂದಿನ ವರೆಗೂ ವಾಹನಗಳಿಗೆ ಅತಿ ಹೆಚ್ಚಿನ ಮಹತ್ವವಿದೆ. ಇಂತಹ ಪಳೆಯುಳಿಕೆಗಳ ಪೈಕಿ ಈಗಲೂ ಅತಿ ವಿರಳಗಳಲ್ಲಿ ಅತಿ ವಿಶಿಷ್ಟತೆಯನ್ನು ಕಾಪಾಡಿಕೊಂಡಿರುವ ವಾಹನಗಳನ್ನು ಸಂರಕ್ಷಿಸುತ್ತಾ ಬರಲಾಗಿದೆ ಎಂಬುದು ಅಷ್ಟೇ ಖುಷಿಯ ಸಂಗತಿ.

ಇಂತಹ ವಿಂಟೇಜ್ ಕಾರುಗಳನ್ನು ಒಂದೇ ಕಡೆ ತರುವ ಪ್ರಯತ್ನವನ್ನು 21 ಗನ್ ಸೆಲ್ಯೂಟ್ ರಾಲಿ ಮಾಡಿದೆ. ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಯೋಜನೆಯಾದ 21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿಯಲ್ಲಿ ಅತಿ ಪುರಾತನ ಕಾರುಗಳ ಅನಾವರಣವಾಗಿದ್ದವು. ಐದನೇ ಆವೃತ್ತಿಯ ಗನ್ ಸೆಲ್ಯೂಟ್ ರಾಲಿಯಲ್ಲಿ ದೇಶವನ್ನು ಆಳಿದ ಹಳೆಯ ಮಹಾರಾಜರುಗಳಿಂದ ಹಿಡಿದು ಇನ್ನಿತರ ಅತಿ ವಿಶಿಷ್ಟ ಕ್ಲಾಸಿಕ್ ಕಾರುಗಳು ಗಮನ ಸೆಳೆದಿದ್ದವು. ಇವೆಲ್ಲದರ ಪೂರ್ಣ ವಿವರಗಳಿಗಾಗಿ ಮುಂದುವರಿಯಿರಿ...

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

21 ಗನ್ ಸೆಲ್ಯೂಟ್ ರಾಲಿಗೆ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಪ್ರಮುಖ ಪಾಲುದಾರಿಕೆಯನ್ನು ಹೊಂದಿತ್ತು. ಇದರಂತೆ ದೆಹಲಿಯತ್ತ ಪಯಣಿಸಿದ ನಮ್ಮ ಪ್ರತಿನಿಧಿ ಸಂತೋಷ್ ರಾಜ್ ಕುಮಾರ್ ಸಂಗ್ರಹಿಸಿರುವ ವರದಿಯನ್ನು ನಾವಿಲ್ಲಿ ವಾಹನ ಪ್ರೇಮಿಗಳ ಮುಂದಿಡುತ್ತಿದ್ದೇವೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ನಮ್ಮ ಪ್ರತಿನಿಧಿ ಅವರನ್ನು 21 ಗನ್ ಸೆಲ್ಯೂಟ್ ವಿಂಟೇಜ್ ರಾಲಿಯ ಸ್ವಾಗತ ಕಮಾನಿನಲ್ಲಿ 1920ರ ವಿಂಟೇಜ್ ಡೊಡ್ಜ್ ಕಾರು ಎದೆ ತಟ್ಟಿ ನಿಂತು ಸ್ವಾಗತಿಸಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ವಯಸ್ಸಾದವರಿಗೆ ನಡೆದಾಡುವುದು ಅಷ್ಟ. ಅಂತಹವರಿಗೆ ಆಸರೆಯಾಗಿ ಕೋಲು ಇರಬೇಕಾಗುತ್ತದೆ. 21 ಗನ್ ಸೆಲ್ಯೂಟ್ ರಾಲಿಯ ಕೇಂದ್ರ ಬಿಂದುವಾಗಿರುವ ಲೇಶರ್ ವ್ಯಾಲಿಯಲ್ಲಿ ಇಂತಹದೊಂದು ಸನ್ನಿವೇಶವನ್ನು ಬಿಂಬಿಸುವಂತೆಯೇ ಕ್ಲಾಸಿಕ್ ಕಾರೊಂದರ ಆಗಮನವಾಗಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ದೆಹಲಿಯ ಕೆಂಪು ಕೋಟೆಯಿಂದ 21 ಗನ್ ಸೆಲ್ಯೂಟ್ ರಾಲಿ ಆಯೋಜನೆಯಾಗಿತ್ತು. ಹಾಗೆ ಒಂದರ ಹಿಂದೆ ಒಂದರಂತೆ ವಿಂಟೇಜ್ ಕಾರುಗಳತ್ತ ಗಮನ ಹರಿಸಿದಾಗ ನಮ್ಮ ಮುಂದೆ ಬಂದು ನಿಂತ 1927ರ ಕಡು ನೀಲಿ ಬಣ್ಣದ ವಿಪ್ಪೆಟ್ ಓವರ್ ಲ್ಯಾಂಡ್ ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ತನ್ನ ಕಾಲದ ಶಕ್ತಿಯನ್ನು ಬಿಂಬಿಸುವ ವಿಪ್ಪೆಟ್‌ ಅತ್ಯಂತ ಅಂದವಾದ ಕಾರುಗಳಲ್ಲಿ ಒಂದಾಗಿತ್ತು. ಇದರ ರೇಡಿಯೇಟರ್ ಗ್ರಿಲ್‌ನಲ್ಲಿ ತಯಾರಕ ಹೆಸರನ್ನು ನೀವು ಕಾಣಬಹುದಾಗಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಇನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಧುನಿಕ ವಾಹನಗಳಿಗೆ ವಿರುದ್ಧವಾಗಿ ಮರದಿಂದ ಕೆತ್ತನೆಯಾದ ಅಲಾಯ್ ವೀಲ್ ನಮ್ಮಲ್ಲಿ ಇನ್ನಷ್ಟು ಕುತೂಹಲ ಸೃಷ್ಟಿ ಮಾಡಿತ್ತು. ಇಲ್ಲೂ ವಿಪ್ಪೆಟ್ ಲಾಂಛನವನ್ನು ಕಾಣಬಹುದಾಗಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಇನ್ನು ಸ್ವಲ್ಪ ಆಚೆ ನಡೆದಾಡಿದಾಗ ಮುಂಜಾವಿನ ಹೊತ್ತಿನಲ್ಲಿ ಮಿಂಚುಳ್ಳಿಯಂತೆ ಮಿನುಗುವ ಬೆಳ್ಳಿ ಬಣ್ಣದ 1935ರ ಫೋರ್ಡ್ ವಿ8 ತನ್ನ ಮೈಮಾಟದಿಂದಲೇ ಜನರನ್ನು ತನ್ನತ್ತ ಸೆಳೆಯುತ್ತಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಅತ್ತ ತಾನೇನು ಕಡಿಮೆಯೇನಲ್ಲ ಎಂಬ ರೀತಿಯಲ್ಲಿ ಅಮೆರಿಕ ತಯಾರಕರನ್ನು ನೆನಪಿಸುವಂತೆಯೇ 1940ರ ಬ್ಯೂಕ್ ಸಿರೀಸ್ 40 ಸ್ಪೆಷಲ್ ಎದ್ದು ಕಾಣಿಸುತ್ತಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಇನ್ನೊಂದೆಡೆ 21 ಗನ್ ಸೆಲ್ಯೂಟ್ ರಾಲಿಗಾಗಿ ವಿಂಟೇಜ್ ಕಾರುಗಳು ಸಂಖ್ಯೆ ಜಾಸ್ತಿಯಾಗತೊಡಗಿತ್ತು. ಇಲ್ಲಿ ಕ್ಯಾಮೆರಾ ಮಂದಿಗಳಂತೂ ಹಬ್ಬವೇ ಆಗಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಇಲ್ಲಿ ಕೊಟ್ಟಿರುವ ಹುಡ್ ಓರ್ನಮೆಂಟ್ ಯಾವ ಕಾರಿನ ಸಂಕೇತೆವೆಂದು ಅಂದಾಜಿಸಬಹುದೇ? 1950ರ ಕಾಲಘಟ್ಟದ ಈ ಕಾರು ಅಮೆರಿಕ ಕಾರು ಸಂಗ್ರಹಾಕಾರರ ಪಾಲಿಗೆ ನೆಚ್ಚಿನ ಕಾರೆನಿಸಿಕೊಂಡಿದೆ. ಉತ್ತರಕ್ಕಾಗಿ ಮುಂದುವರಿಯಿರಿ

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಅದುವೇ 1957ರ ಷೆವರ್ಲೆ ಬೆಲ್ ಏರ್ ಸೆಡಾನ್ ಕಾರು. ಇದು ಜಗತ್ತಿನ ಅತ್ಯಂತ ಹೆಚ್ಚು ಮಾನ್ಯತೆ ಪಡೆದ ಬಾಡಿ ಶೈಲಿ ಪಡೆದುಕೊಂಡಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

1954ರ ಕನ್ವರ್ಟಿಬಲ್ ಕಾರಿನ ಹೊಗೆ ಹೊರ ಹೋಗುವ ರಂಧ್ರವನ್ನು ಗಮನಿಸಿದ್ದೀರಾ? ಹೌದು ಇದು ಹಿಂದುಗಡೆ ಬಂಪರ್‌ನ ಎರಡು ಕಡೆಗಳಲ್ಲೂ ಎಕ್ಸಾಸ್ಟ್ ಪೈಪ್‌ಗಳನ್ನು ಪಡೆದುಕೊಂಡಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

1913ರ ಸ್ಟೋವೆರ್ ಕಾರನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಮಾಲಿಕ ಪಿಕೆ ಜೌಧುರಿ ಅವರಿಗೂ ಹಾಟ್ಸಪ್ ಹೇಳಲೇಬೇಕು. ವಿಶೇಷವೆಂದರೆ ಷೆವರ್ಲೆ ಬೆಲ್ ಏರ್ ಕಾರನ್ನು ಚೌಧುರಿ ಹೊಂದಿದ್ದಾರೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಬಳಿಕವಷ್ಟೇ ನಮ್ಮ ಗಮನಕ್ಕೆ ಬಂದಿರುವುದು ವಿಂಡ್ ಸ್ಕ್ರೀನ್ ಸಮೀಪದಲ್ಲಿ ಇತ್ತ ಕಡೆಯೂ ಎರಡು ಲ್ಯಾಂಪ್‌ಗಳನ್ನು ಹೊಂದಿರುವ ಈ ಕಾರು ಸೀಮೆ ಎಣ್ಣೆಯಲ್ಲಿ ಚಲಿಸುತ್ತದೆ. ಇದರಲ್ಲಿ ಎರಡು ಹಾರ್ನ್ ಆಯ್ಕೆಯೂ ಇರುತ್ತದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಈಗ ದೆಹಲಿಯ ಕೆಂಪು ಕೋಟೆಯಿಂದ ಎಲ್ಲ ವಿಂಟೇಜ್ ಕಾರುಗಳು ರೇಸ್‌ಗೆ ತಯಾರಾಗಿದ್ದವು. ಇಲ್ಲಿ ಪ್ರತಿಯೊಂದು ವಿಂಟೇಜ್ ಕಾರುಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದವು ಎಂಬಂತೆ ಭಾಸವಾಗುತ್ತಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಈ ಬೆಂಟ್ಲಿ ಕೂಪೆ ಕಾರಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದು ಅತ್ಯಂತ ಬಲಿಷ್ಠ ಕಾರು ಎಂಬುದರಲ್ಲಿ ಸಂದೇಹವೇ ಇಲ್ಲ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಕೆಂಪು ಕೋಟೆಯ ಮುಂಬಾಗದಲ್ಲಿ ಸಾಲಾಗಿ ನಿಂತುಕೊಂಡಿರುವ ವಿಂಟೇಜ್ ಕಾರುಗಳು. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ವೇಳೆ ಹರ್ಷಗೊಳ್ಳುವ ಕೆಂಪು ಕೋಟೆಯೀಗ ಹಳೆಯ ಕಾರುಗಳಿಗೆ ತನ್ನ ಸೆಲ್ಯೂಟ್ ನೀಡುತ್ತಿದ್ದವು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಜನಪ್ರಿಯ ಹುಡ್ ಓರ್ನಮೆಂಟ್ ವಿಂಟೇಜ್ ಕಾರು ರಾಲಿ ಪ್ರಮುಖ ಆಕರ್ಷಣೆಯಾಗಿತ್ತು. ಇದು ಐಕಾನಿಕ್ ಕಾರುಗಳ ಇತಿಹಾಸವನ್ನು ಬಿಂಬಿಸುತ್ತಿದ್ದವು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಚಿನ್ನದ ಬಣ್ಣವನ್ನು ಹೊಂದಿರುವ 1933ರ ಷೆವರ್ಲೆ ಮಾಸ್ಟರ್ ಈಗಲ್. ಇದನ್ನು ಮದನ್ ಮೋಹನ್ ಎಂಬವರು ಮಾಲಿಕತ್ವ ಹೊಂದಿದ್ದಾರೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಕೇವಲ ಕಾರು ಮಾತ್ರವಲ್ಲದೆ ಕ್ಲಾಸಿಕ್ ಬುಲೆಟ್‌ಗಳ ಸಹ ತನ್ನ ಶಕ್ತಿ ಪ್ರದರ್ಶನ ನಡೆಸಿದ್ದವು. ಇಲ್ಲಿದೆ ನೋಡಿ ಬಿಎಂಡಬ್ಲ್ಯು ಮೋಟಾರ್‌ಸೈಕಲ್.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ದೇಶದ ರಸ್ತೆಗಳ ರಾಜ ಅಂಬಾಸಿಡರ್ ಹೋಲುವ 1950ರ ದಶಕದ ಮರ್ಸಿಡಿಸ್ ಬೆಂಝ್ 180.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಇಷ್ಟೆಲ್ಲ ಆದರೂ ಶ್ವೇತ ಬಣ್ಣದ ವಿಂಟೇಜ್ ಸುಂದರಿಯನ್ನು ಹುಡುಕುವ ನಮ್ಮ ಪ್ರಯತ್ನಕ್ಕೆ ಕೊನೆಗೂ ಇಲ್ಲಿ ಉತ್ತರ ದೊರಕಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಕೆಂಪು ಕೆನ್ನೆಯ ರೂಪದರ್ಶಿಯಂತಿರುವ ಈ ಕಾರು ಯಾವುದೇ ಗೊತ್ತೇ? ಇದುವೇ 1970ರ ದಶಕದ ಫೋಕ್ಸ್ ವ್ಯಾಗನ್ ಕರ್ಮಾನ್ ಗಿಯಾ ಕನ್ವರ್ಟಿಬಲ್ ಕಾರು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಈ ನಡುವೆ ನಮ್ಮ ಚಿತ್ತವೂ ಸ್ವಲ್ಪ ದುಬಾರಿ ಕಾರುಗಳತ್ತ ಹರಡಿತ್ತು. ಇಲ್ಲಿದೆ ನೋಡಿ 1980ರ ದಶಕದ ಡೈಮ್ಲರ್ ಡಿಎಸ್420 ಲಿಮೊಸಿನ್ ಕಾರು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

1940ರ ದಶಕದಲ್ಲೇ ಕ್ರೋಮ್ ಗ್ರಿಲ್‌ಗೆ ಎಷ್ಟೊಂದು ಪ್ರಾಮುಖ್ಯತೆ ಕಲ್ಪಿಸಲಾಗಿದೆ ಎಂಬುದನ್ನು ಓಲೈವ್ ಹಸಿರು ಬಣ್ಣದ ಪೊಂಟಿಯಾಕ್ ಸಿಲ್ವರ್ ಸ್ಟ್ರೀಕ್ ಸೆಡಾನ್ ನೋಡಿದಾಗಲೇ ತಿಳಿಯುತ್ತದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಈಗ ಸೆಲ್ಫಿ ಚಿತ್ರದ ಸಮಯ. ಇಲ್ಲಿದೆ ನೋಡಿ ಚಿತ್ರಕ್ಕೆ ಫೋಸ್ ಕೊಡುತ್ತಿರುವ 1960ರ ಬ್ಯೂಕ್ ಇನ್ವಿಕ್ಟಾ ಕನ್ವರ್ಟಿಬಲ್ ಕಾರು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಸ್ಪೋರ್ಟ್ಸ್ ಕಾರುಗಳು ಸದಾ ತನ್ನ ಸಾನಿಧ್ಯವನ್ನು ತೋರ್ಪಿಡಸುತ್ತಲೇ ಬಂದಿದೆ. ಇದರಂತೆ ನೆರೆದ ಪ್ರೇಕ್ಷಕರನ್ನು ರಂಜಿಸುತ್ತಿರುವ 1940ರ ಎಂಜಿ ಟಿಸಿ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಯುರೋಪ್ ಕಾರುಗಳ ಪಾರುಪತ್ಯವನ್ನು ನಾವಿಲ್ಲಿ ಕಾಣಬಹುದಾಗಿದೆ. ಚಿತ್ರದಲ್ಲಿರುವ 1929ರ ಮರ್ಸಿಡಿಸ್ ನರ್‌ಬರ್ಗ್ ಮಾಲಿಕತ್ವವನ್ನು ವಿವೇಕ್ ಹೊಂದಿದ್ದಾರೆ. ಇದರಲ್ಲಿ ಹೆಚ್ಚುವರಿ ಚಕ್ರವನ್ನು ಲಗತ್ತಿಸಿರುವ ಶೈಲಿ ನೋಡಿದಾಗಲೇ ಕಾರಿನ ಅಂದತೆಗೆ ಎಷ್ಟೊಂದು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬುದು ತಿಳಿದು ಬರುತ್ತದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಹಾಗೇ ಮುಂದಕ್ಕೆ ಸಾಗಬೇಕಾದರೆ 1933ರ ಹಡ್ಸನ್ ಏಳು ಸೀಟುಗಳ ಓಪ್ ಟೂರರ್ ನಮ್ಮಲ್ಲಿ ಹೆಚ್ಚಿನ ಕುತೂಹಲತೆ ಸೃಷ್ಟಿ ಮಾಡಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ದೆಹಲಿಯ ಕೆಂಪು ಕೋಟೆಯಿಂದ ಗುರ್ಗಾಂವ್ ವರೆಗೆ ಸಾಗಿದ ರಾಲಿಯಲ್ಲಿ ಅತಿ ಹೆಚ್ಚು ಗಮನ ಕೇಂದ್ರಿತವಾದ ವಾಹನಗಳಲ್ಲಿ ಈ ತ್ರಿಚಕ್ರ ವಾಹನ ಕೂಡಾ ಒಂದಾಗಿದೆ. ಮರ್ಸಿಡಿಸ್ ಬೆಂಝ್ ‌ನ ಈ ಮೋಟಾರು ವ್ಯಾಗನ್ ಸೈಕಲ್ ಕಾರು ಎಂದೇ ಚಿರಪರಿಚವಾಗಿದೆ. 1886ರಲ್ಲಿ ನಿರ್ಮಾಣವಾದ ಈ ಗಾಡಿಯನ್ನು ವಿಶ್ವದ ಮೊದಲ ವಾಹನ ಎಂದು ಅರಿಯಲ್ಪಡುತ್ತದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಕ್ಲಾಸಿಕ್ ಫೋರ್ಡ್ ಮಸ್ತಾಂಗ್ ಕಾರನ್ನು ನೀವು ಹಲೆವೆಡೆ ನೋಡಿರಬಹುದು. ಇಲ್ಲೂ ಫೋರ್ಡ್ ಮಸ್ತಾಂಗ್ ತನ್ನ ವಿಭಿನ್ನ ಅಲಾಯ್ ವೀಲ್‌ನೊಂದಿಗೆ ಗಮನಸೆಳೆದಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಈಗಿನ ತಲೆಮಾರಿನ ವಾಹನ ಪ್ರೇಮಿಗಳು ಇದನ್ನು ಮಿಸ್ ಮಾಡಿಕೊಳ್ಳುತ್ತಿರಬಹುದು. ಇದುವೇ ಮರದಿಂದ ನಿರ್ಮಿತ ನಂಬರ್ ಪ್ಲೇಟ್.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

21 ಗನ್ ಸೆಲ್ಯೂಟ್ ರಾಲಿ ಇತಿಹಾಸವನ್ನು ಎತ್ತಿ ಹಿಡಿದ ಮೋಟಾರ್‌ಸೈಕಲ್‌ಗಳಲ್ಲಿ ಬಿಎಸ್‌ಎ ಒಂದಾಗಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಇಲ್ಲಿದೆ ನೋಡಿ ವಿಚಿತ್ರ ಭಂಗಿಯ ದ್ವಿಚಕ್ರ ವಾಹನ. 150 ಡಿ ಸಿರೀಸ್ ಸ್ಕೂಟರ್ ತನ್ನ ಆಗಾಧ ಪರಂಪರೆಯನ್ನು ಎತ್ತಿ ಹಿಡಿಯುತ್ತಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಹಾಗೇ ಇನ್ನು ಮುಂದಕ್ಕೆ..... ಅಯ್ಯೋ ಅಷ್ಟೋತ್ತಲ್ಲಿ ಆಯಾಸರಾಗಿಬಿಟ್ಟರಾ?

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

200ಕಕ್ಕೂ ಹೆಚ್ಚು ವಿಂಟೇಜ್ ಕಾರುಗಳು ಪ್ರದರ್ಶನ ಕಂಡಿರುವ ಕಾರುಗಳ ಗಮನಸೆಳೆದ ಟ್ರಯಂಪ್ 1500.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಟಾಪ್ ಲೆಸ್ ವಿಂಟೇಜ್ ಕಾರು ಸಹ ನೋಡುಗರನ್ನು ಆಕರ್ಷಿಸಿದ್ದವು. ಈ ಪೈಕಿ ಅಮೆರಿಕ ಕೆಂಪು ವರ್ಣದ ಕಾರು ನಿಮ್ಮ ಮೆಚ್ಚುಗೆಗೆ ಪಾತ್ರವಾಗಲಿದೆ ಎಂಬ ನಂಬಿಕೆ ನಮ್ಮದ್ದು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಇಲ್ಲಿ ಸಂಗ್ರಹವಾದ ಮೊತ್ತವನ್ನು ಸಹಾಯಾರ್ಥ ಸಂಸ್ಥೆಗೆ ನೀಡುವ ಗುರಿಯನ್ನು ಆಯೋಜಕರು ಹೊಂದಿದ್ದರು. ಇದು ವಿಂಜೇಟ್ ರಾಲಿಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ವಿಂಟೇಜ್ ರಾಲಿಯ ಆರಂಭದಲ್ಲೇ ಕಾಣಿಸಿಕೊಂಡಿರುವ ನಿತಿನ್ ದೊಸ್ಸಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಕೆಂಪು ಕೋಟೆಯಿಂದ ಗುರ್ಗಾಂವ್‌ನತ್ತ ಪಯಣ ಬೆಳೆಸುತ್ತಿರುವ 1886ರ ಮರ್ಸಿಡಿಸ್ ಬೆಂಝ್ ಮೋಟಾರ್ ವ್ಯಾಗನ್

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ದೆಹಲಿಯ ದೈನಂದಿನ ವಾಹನ ದಟ್ಟಣೆಯನ್ನು ನೋಡಿ ಬೇಜಾರಾಗಿರುವ ಜನರಿಗೆ ವಿಂಟೇಜ್ ಕಾರು ರಾಲಿ ನಿಜಕ್ಕೂ ಹಬ್ಬದ ವಾತಾವರಣ ನೀಡುತ್ತಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

1930ರ ಮರ್ಸಿಡಿಸ್ ಬೆಂಝ್ ತಾನೇ ನಂ.1 ಎಂದು ಬಿಂಬಿಸುವ ರೀತಿಯಲ್ಲಿ ಅಂಕಿಯನ್ನು ಪಡೆದಿರುವುದು ನೀವು ಕಾಣಬಹುದಾಗಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಟ್ರಾಫಿಕ್‌ನಲ್ಲಿ ಅಚ್ಚುಕಟ್ಟಾಗಿ ನಿಯಮಗಳನ್ನು ಪಾಲಿಸುತ್ತಾ ವಿಂಟೇಜ್ ಕಾರುಗಳು ಮುಂದಕ್ಕೆ ಸಾಗುತ್ತಿರುವುದನ್ನು ನೋಡುವುದೇ ಖುಷಿ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಇನ್ನು ಮುಂದೆಕ್ಕೆ... 1954 ಕ್ಯಾಡಿಲಾಕ್ ಸಿರೀಸ್ 62 ಕನ್ವರ್ಟಿಬಲ್

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ನಾವು ಈ ಮೊದಲು ತೋರಿಸಿರುವ ರೆಡ್ ಥೀಮ್ ಪಡೆದ ಅಮೆರಿಕ ಶೈಲಿಯ ಫೋರ್ಡ್ ಗ್ಯಾಲಕ್ಸಿ ಕನ್ವರ್ಟಿಬಲ್ ಕಾರು. ಈ ಓಪನ್ ಟಾಪ್ ಕಾರು ಹೆಚ್ಚು ಆಕರ್ಷಕವೆನಿಸಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ದೆಹಲಿ ರಸ್ತೆಗಳು ನಿಜಕ್ಕೂ ಗತಕಾಲದ ವೈಭವವನ್ನು ಮರುಕಳಿಸುವಂತಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾವನೆ ಇಲ್ಲಿ ಭಾಸವಾಗುತ್ತಿತ್ತು ಅಂದರೆ ತಪ್ಪಾಗಲಾರದು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಇನ್ನು ಆಯಾಸೆಗೊಂಡಿರುವ ದೆಹಲಿ ಪೊಲೀಸ್ ಮಹಿಳೆ ಕೂಡಾ ವಿಂಟೇಜ್ ಕಾರನ್ನು ಆಶ್ರಯಿಸಿಕೊಂಡಿದ್ದರು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಎಲ್ ಹೆಡ್ ಸಿಕ್ಸ್ ಎಂಜಿನ್ ಪಡೆದುಕೊಂಡಿರುವ 1947ರ ಸ್ಟುಡ್‌ಬೇಕರ್ ಕಮಾಂಡರ್ ರಿಗಲ್ ಡಿಲಕ್ಸ್ ಕನ್ವರ್ಟಿಬಲ್ ಕಾರಿದು. 94 ಅಶ್ವಶಕ್ತಿ ಉತ್ಪಾದಿಸಲ್ಲ ಈ ಕಾರು ಮೂರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಮಿಲಿಟರಿ ವಾಹನ ಕೂಡಾ 21 ಗನ್ ಸೆಲ್ಯೂಟ್ ರಾಲಿಯ ಗಣತೆಯನ್ನು ಎತ್ತಿ ಹಿಡಿದಿತ್ತು. ಈ ಹಸಿರುವ ಬಣ್ಣದ ವಾಹನದಲ್ಲಿ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಕಪ್ಪು ಹಾಗೂ ಕೆಂಪು ವರ್ಣದ ಮಿಶ್ರಣವನ್ನು ಪಡೆದುಕೊಂಡಿರುವ ಮಗದೊಂದು ಆಕರ್ಷಕ ವಾಹನ. ಇದನ್ನು ಗ್ಲಾಮರಸ್ ಚೆಲುವೆಯೊಬ್ಬಾಕೆ ಚಾಲನೆ ಮಾಡಿರುವುದು ವಿಶೇಷವೆನಿಸಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ದೈತ್ಯಕಾರಾದ ರೋಲ್ಸ್ ರಾಯ್ಸ್ ಫಾಟಂ I ಬೋಟ್ ಟೈಲ್ ಸ್ಪೋರ್ಟ್ಸ್ ಟೂರರ್. ಇದು ಕಾರ್ಯಕ್ರಮದಲ್ಲಿ ಕಂಡುಬಂದಿರುವ ದೈತ್ಯಕಾರಾದ ವಾಹನಗಳಲ್ಲಿ ಒಂದಾಗಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಸಂಪೂರ್ಣ ಕ್ರೋಮ್ ಸ್ಪರ್ಶವನ್ನು ಪಡೆದಿರುವ ಮಿನಿ ಸ್ಕೂಟರ್. ಈ 98 ಸಿಸಿ ಬ್ರೋಕ್ ಹೌಸ್ ಕೊರ್ಗಿ ವಾಹನವನ್ನು 1948ರಿಂದ 1954ರ ವರೆಗೆ ಬ್ರಿಟನ್‌ನಲ್ಲಿ ನಿರ್ಮಿಸಲಾಗಿತ್ತು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಉದಯ್ ಬಹದ್ದೂರ್ ಮಾಲಿಕತ್ವದಲ್ಲಿರುವ ಮರ್ಸಿಡಿಸ್ ಬೆಂಝ್ 230. ಅಲ್ಲದೆ ಆರು ಸಿಲಿಂಡರ್ ಎಂಜಿನ್ ಸಹ ಪಡೆದುಕೊಂಡಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

1950ರ ದಶಕದ ಜಾಗ್ವಾರ್ ಎಂಕೆ7 ಕಾರು 10 ಅಡಿ ಉದ್ದದ ವೀಲ್ ಬೇಸ್ ಪಡೆದುಕೊಂಡಿದೆ. ಇದರ 3.5 ಲೀಟರ್ ಎಂಜಿನ್ 160 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಗಂಟೆಗೆ ಗರಿಷ್ಠ 160 ಕೀ.ಮೀ. ವೇಗದಲ್ಲಿ ಸಂಚರಿಸಬಹುದಾಗಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಹುಬ್ಬೇರಿಸಿದ ದೃಶ್ಯದೊಂದಿಗೆ ಮೊರಿಸ್ ಮೈನರ್ ವಿಂಟೇಜ್ ಕಾರು.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಕೊನೆಯ ದಿನದಲ್ಲೂ ವಿಂಟೇಜ್ ರಾಲಿ ಮೆರಗು ತುಂಬಿತ್ತು. ಚಿತ್ರದಲ್ಲಿ ನೋಡುತ್ತಿರುವ ಆಕಾಶ ನೀಲಿ ಬಣ್ಣದ 1933ರ ಸ್ಟುಡ್‌ಬೇಕರ್ ಕಮಾಂಡರ್ ವಿಂಟೇಜ್ ಕಾರಿನ ಒಡೆತನವನ್ನು ಕಲೆಕ್ಟರ್ ವಿವೇಕ್ ಗೋನ್ಖಾ ಹೊಂದಿದ್ದಾರೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಮೊಹಮ್ಮದ್ ಇಕ್ರಾಂ ಮಾಲಿಕತ್ವದಲ್ಲಿರುವ 1923ರ ಬೀನ್ ಟೂರರ್. ಇದರ 4 ಸಿಲಿಂಡರ್ ಎಂಜಿನ್ 14 ಅಶ್ವಶಕ್ತಿ ಉತ್ಪಾದಿಸುತ್ತದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಈ ಎಲ್ಲ ವಿಂಟೇಜ್ ಕಾರುಗಳನ್ನು ಇಂದಿನ ವರೆಗೂ ಸಂರಕ್ಷಿಸಿ ಬಂದಿರುವುದು ನಿಜಕ್ಕೂ ಶ್ಲಾಘನೀಯ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ನಿಜಕ್ಕೂ ಜೀವನದಲ್ಲಿ ಒಂದಲ್ಲ ಒಂದು ಬಾರಿಯಾದರೂ ವಿಂಟೇಜ್ ರಾಲಿಯನ್ನು ಕಣ್ಣಾರೆ ಅನುಭವಿಸಬೇಕು ಎಂಬುದು ನಮ್ಮ ಪ್ರತಿನಿಧಿಯ ಆಶಯವಾಗಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಇಲ್ಲಿ ಕೆಲವು ತಾಸಿನ ವರೆಗೆ ವಿಂಟೇಜ್ ಕಾರುಗಳನ್ನು ಓಡಿಸುವ ಭಾಗ್ಯ ನಮ್ಮ ಹಿರಿಯ ಸಂಪಾದಕ ಸಂತೋಷ್ ರಾಜ್ ಕುಮಾರ್ ಅವರಿಗೂ ದೊರಕಿತ್ತು. ಅವರ ಪ್ರಕಾರ ಆಧುನಿಕ ಕಾರುಗಳನ್ನು ಹೋಲಿಸಿದಾಗ ಇದರ ಚಾಲನಾ ಪದ್ಧತಿ ಸ್ವಲ್ಪ ವಿಭಿನ್ನವಾಗಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಈಗಿನ ಚಾಲನಾ ಪದ್ಧತಿಗೆ ವಿರುದ್ಧವಾಗಿ ಬಲ ಬದಿಯಲ್ಲಿ ಬ್ರೇಕ್, ಮಧ್ಯದಲ್ಲಿ ವೇಗವರ್ಧನೆ ಹಾಗೂ ಎಡ ಬದಿಯ ತುದಿಯಲ್ಲಿ ಕ್ಲಚ್ ವ್ಯವಸ್ಥೆ ಇದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಏತನ್ಮಧ್ಯೆ ಮಿಲಿಟರಿ ಬಣ್ಣವನ್ನು ಹೊಂದಿರುವ ವಿಲ್ಲಿಯವರ ಎಂಡಬ್ಲ್ಯು ಜೀಪ್ ದಾರಿ ಮಧ್ಯದಲ್ಲಿ ಕಾಣಸಿಗತೊಡಗಿತು. ಇದು ಅತಿ ವಿರಳ ಫೋರ್ಡ್ ಜೀಪ್‌ಗಳಲ್ಲಿ ಒಂದಾಗಿದೆ.

21 ಗನ್ ಸಲ್ಯೂಟ್ ವಿಂಟೇಜ್ ಕಾರು ರಾಲಿ 2015

ಒಟ್ಟಿನಲ್ಲಿ 21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿ ಅಭೂತಪೂರ್ವ ಯಶಸ್ಸು ಸಾಧಿಸಿತ್ತು ಅಂದರೆ ತಪ್ಪಾಗಲಾರದು. ಇದು ವಿಂಟೇಜ್ ಕಾರು ಉತ್ಸಾಹಿ ಹಾಗೂ ಸಂಗ್ರಹಾಗಾರರಿಗೆ ಒಂದು ಕಡೆ ಒಟ್ಟು ಸೇರಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆ ಒದಗಿಸಿತ್ತು.

 

English summary
We bring you all the action with plenty of pictures for you to click through from this exciting event 21 Gun Salute Vintage Car Rally 2015 that took place in Delhi and Gurgaon last weekend, so read on.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more