21 ಗನ್ ಸೆಲ್ಯೂಟ್ ಕಾರು ರಾಲಿಗೆ ಡ್ರೈವ್ ಸ್ಪಾರ್ಕ್ ಕೊಡುಗೆ

Written By:

ಇನ್ನೇನು ಕೆಲವೇ ದಿನಗಳಲ್ಲಿ 21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿ ಆರಂಭವಾಗಲಿರುವಂತೆಯೇ ದೇಶದ ನಂ.1 ಪ್ರಾದೇಶಿಕ ವಾಹನ ಜಾಲತಾಣವಾಗಿರುವ ಡ್ರೈವ್ ಸ್ಪಾರ್ಕ್ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಇದು ಕಾರ್ಯಕ್ರಮಕ್ಕೆ ಆಗಮಿಸಲಿರುವ ದೇಶದ ಹಳೆಯ ಕಾರು ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಸೃಷ್ಟಿ ಮಾಡಲು ಕಾರಣವಾಗಿದೆ.

ನಿಮ್ಮ ಮಾಹಿತಿಗಾಗಿ, ಈ ಬಾರಿಯ 21 ಗನ್ ಸೆಲ್ಯೂಟ್ ಕಾರು ರಾಲಿಯ ಅಧಿಕೃತ ಮಾಧ್ಯಮ ಪಾಲುದಾರಿಕೆಯನ್ನು ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಹೊಂದಿದೆ. ಇದರಂತೆ ಫೆಬ್ರವರಿ 21 ಹಾಗೂ 22ರಂದು ಆಯೋಜನೆಯಾಗಲಿರುವ ದೇಶದ ಪ್ರಖ್ಯಾತ ವಿಂಟೇಜ್ ಕಾರು ರಾಲಿಯ ಎಕ್ಸ್ ಕ್ಲೂಸಿವ್ ವರದಿಯನ್ನು ಚಿತ್ರ ಸಮೇತ ನಾವು ನಿಮ್ಮ ಮುಂದಿಡಲಿದ್ದೇವೆ.

To Follow DriveSpark On Facebook, Click The Like Button
1957 chevrolet bel air

ಈಗ ಕಾರ್ಯಕ್ರಮಕ್ಕೆ ಮುನ್ನುಡಿಯಾಗಿ ನಮ್ಮ ಹಿರಿಯ ಸಂಪಾದಕರಾಗಿರುವ ಸಂತೋಷ್ ರಾಜ್ ಕುಮಾರ್ ತಮ್ಮ ಕೈಗಳಿಂದ ಆಕರ್ಷಕ ವಿಂಟೇಜ್ ಕಾರು ರಚಿಸುವ ಮೂಲಕ ಅಭಿಮಾನಿಗಳಲ್ಲಿ ಇನ್ನಷ್ಟು ಹುರುಪು ತುಂಬಿದ್ದಾರೆ. 1950ನೇ ಇಸವಿಯಿಂದ 1981ನೇ ಇಸವಿಯ ವರೆಗೆ ಹೆಚ್ಚು ಜನಪ್ರಿಯತೆ ಹೊಂದಿದ್ಧ ಷೆವರ್ಲೆ ಬೆಲ್ ಏರ್ ಕಾರನ್ನು ಸಂತೋಷ್ ತಮ್ಮ ಭವ್ಯ ಹಸ್ತಗಳಿಂದ ರಚಿಸಿದ್ದಾರೆ.

ಎರಡು ಬಾಗಿಲಿನ ಹಾರ್ಡ್ ಟಾಪ್, ಎರಡು ಬಾಗಿಲಿನ ಕೂಪೆ, ನಾಲ್ಕು ಬಾಗಿಲಿನ ಸೆಡಾನ್, ನಾಲ್ಕು ಬಾಗಿಲಿನ ಸ್ಟೇಷನ್ ಹಾಗೂ ಎರಡು ಬಾಗಿಲಿನ ಕನ್ವರ್ಟಿಬಲ್ ದೇಹ ಶೈಲಿಯನ್ನು ಷೆವರ್ಲೆ ಬೆಲ್ ಏರ್ ಕಾರು ಹೊಂದಿದೆ. ಇದರಲ್ಲಿ 6 ಸಿಲಿಂಡರ್ ಹಾಗೂ ವಿ8 ಎಂಜಿನ್ ಬಳಕೆ ಮಾಡಲಾಗಿದೆ. ಅಂತೆಯೇ ಇದರ 3.9 ಲೀಟರ್‌ನಿಂದ 5.7 ಲೀಟರ್ ವರೆಗಿನ ಎಂಜಿನ್ 145ರಿಂದ 315 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಇದರಲ್ಲಿ 3 ಸ್ಪೀಡ್ ಮ್ಯಾನುವಲ್ 2 ಸ್ಪೀಡ್ ಪವರ್ ಗ್ಲಿಡ್ ಆಟೋ ಬಾಕ್ಸ್ ಕೂಡಾ ಇರಲಿದೆ.

ಈ ಬಾರಿಯ 21 ಗನ್ ಸೆಲ್ಯೂಟ್ ರಾಲಿ ಹಿಂದೆಂದಿಗಿಂತಲೂ ಹೆಚ್ಚು ವರ್ಣಮಯವಾಗಿರಲಿದ್ದು, 51ರಷ್ಟು ಮಹಾರಾಜರುಗಳ ಕಾರುಗಳ ಜೊತೆಗೆ ದೇಶ ವಿದೇಶದ ಒಟ್ಟು 201 ವಿಂಟೇಜ್ ಕಾರುಗಳು ಪಾಲ್ಗೊಳ್ಳಲಿದೆ.

English summary
21 Gun Salute Rally: 1957 Chevrolet Bel Air Convertible Illustration
Story first published: Saturday, February 7, 2015, 14:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark