21 ಗನ್ ಸೆಲ್ಯೂಟ್ ರಾಲಿ; ನೀವು ತಿಳಿದುಕೊಳ್ಳಬೇಕಾದ 10 ಅಂಶಗಳು

Written By:

ನೀವೂ ಒರ್ವ ಕಾರು ಅಭಿಮಾನಿಯಾದ್ದಲ್ಲಿ ಖಂಡಿತ ಈ ಲೇಖನವನ್ನು ಇಷ್ಟಪಡುವೀರಾ. ಏಕೆಂದರೆ 21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ವಿಂಟೇಜ್ ಕಾರು ರಾಲಿ ಎಂದಾಕ್ಷಣ ನಿಮಗೆ ವಿಷಯ ಅರಿಯವಾಗಿರಬಹುದು. ಆದರೆ ಇದು ಬರಿ ವಿಂಟೇಜ್ ಕಾರುಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಇಲ್ಲಿ ಅಂತರಾಷ್ಟ್ರೀಯ ಕಾರುಗಳಿಂದ ಹಿಡಿದು ದೇಶದ ಹಿಂದಿನ ಮಹಾರಾಜರುಗಳ ಪ್ರತಿಷ್ಠಿತ ಕಾರುಗಳ ಪ್ರದರ್ಶನ ನಡೆಯುತ್ತಿದೆ.

ಇದೀಗ ಐದನೇ ಬಾರಿಗೆ ಪ್ರಖ್ಯಾತ 21 ಗನ್ ಸೆಲ್ಯೂಟ್ ರಾಲಿ ಆಯೋಜನೆಯಾಗುತ್ತಿದೆ. ಇದರಂತೆ ಐತಿಹಾಸಿಕ ರಾಲಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ಅಂಶಗಳ ಬಗ್ಗೆ ನಾವು ಪಟ್ಟಿ ಮಾಡಿಕೊಡಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

21 ಗನ್ ಸೆಲ್ಯೂಟ್ ರಾಲಿ; ನೀವು ತಿಳಿದುಕೊಳ್ಳಬೇಕಾದ 10 ಅಂಶಗಳು

ದೇಶದ ಜನಪ್ರಿಯ 21 ಗನ್ ಸೆಲ್ಯೂಟ್ ರಾಲಿಗೆ ನಿಮ್ಮ ನೆಚ್ಚಿನ ಡ್ರೈವ್ ಸ್ಪಾರ್ಕ್ ಸಹ ಕೈಜೋಡಿಸಿಕೊಂಡಿದ್ದು, ಮಾಧ್ಯಮ ಪಾಲುದಾರಿಕೆಯನ್ನು ಹೊಂದಿರಲಿದೆ. ಇದರಂತೆ 21 ಗನ್ ಸೆಲ್ಯೂಟ್ ರಾಲಿಯನ್ನು ಸಂಪೂರ್ಣವಾಗಿ ಓದುಗರ ಮುಂದಿಡಲಿದ್ದೇವೆ.

 01. ವೇಳಾಪಟ್ಟಿ

01. ವೇಳಾಪಟ್ಟಿ

ಇದೇ ಬರುವ ಫೆಬ್ರವರಿ 21 ಹಾಗೂ 22ರಂದು 21 ಗನ್ ಸೆಲ್ಯೂಟ್ ರಾಲಿ ನಡೆಯಲಿದೆ. ಫೆಬ್ರವರಿ 21ರಂದು ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆಯಿಂದ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿರುವ ವಿಂಟೇಜ್ ಕಾರು ರಾಲಿ 52 ಕೀ.ಮೀ. ದೂರವನ್ನು ಕ್ರಮಿಸಿ ಮಧ್ಯಾಹ್ನ ಒಂದು ಗಂಟೆಗೆ ಸರಿ ಸುಮಾರಿಗೆ ಗುರ್ಗಾಂವ್ ತಲುಪಲಿದೆ. ಅಂತೆಯೇ ಫೆಬ್ರವರಿ 22ರಂದು ಗುರ್ಗಾಂವ್‌ನ ಲೇಷರ್ ವ್ಯಾಲಿಯಲ್ಲಿ ಆಟೋ ಶೋ ನಡೆಯಲಿದೆ.

02. ಐತಿಹಾಸಿಕ ಹಾದಿ

02. ಐತಿಹಾಸಿಕ ಹಾದಿ

ದೆಹಲಿಯ ಕೆಂಪು ಕೋಟೆಯಿಂದ ಆರಂಭವಾಗಲಿರುವ 21 ಗನ್ ಸೆಲ್ಯೂಟ್ ರಾಲಿಯು ಮಹಾತ್ಮ ಗಾಂಧಿ, ರಾಜ್ ಘಾಟ್‌ನಂತಹ ಐತಿಹಾಸಿಕ ಹಾದಿಗಳಲ್ಲಾಗಿ 52 ಕೀ.ಮೀ. ದೂರದಲ್ಲಿರುವ ಗುರ್ಗಾಂವ್‌ನಲೇಷರ್ ವ್ಯಾಲಿ ತಲುಪಲಿದೆ.

ರೂಟ್ ಮ್ಯಾಪ್

ಕೆಂಪು ಕೋಟೆ - ನಿಷಾದ್ ರಾಜ್ ಮಾರ್ಗ್ - ಮಹಾತ್ಮ ಗಾಂಧಿ ಮಾರ್ಗ - ರಾಜ್ ಘಾಟ್ - ಭೈರನ್ ಮಾರ್ಗ್ - ನ್ಯಾಷನಲ್ ಆರ್ಟ್ ಗ್ಯಾಲರಿ - ಅಕ್ಬರ್ ರಸ್ತೆ - ತೀನ್ ಮೂರ್ತಿ ಮಾರ್ಗ್ - ದೌಲಾ ಖಾನ್ - ದ್ವಾರಕಾ/ಗುರ್ಗಾಂವ್ ರಸ್ತೆ - ರಾಡಿಸ್ಸನ್ ಬ್ಲೂ - ಟೋಲ್ ಪ್ಲಾಜಾ - ಐಎಫ್‌ಎಫ್ಸಿಒ ಚೌಕ್ - ಕ್ರೌನ್ ಪ್ಲಾಜಾ ಹೋಟೆಲ್ - ಲೇಷರ್ ವ್ಯಾಲಿ ಮೈದಾನ

03. ರಾಜಮನೆತನದ ಕಾರುಗಳು

03. ರಾಜಮನೆತನದ ಕಾರುಗಳು

ಇದೇ ಮೊದಲ ಬಾರಿಗೆ ದೇಶದ ಇತಿಹಾಸದಲ್ಲಿ ಒಂದೇ ಸಮಯಕ್ಕೆ 51ರಷ್ಟು ಮಹಾರಾಜ ಕಾರುಗಳ ಪ್ರದರ್ಶನವಾಗಲಿದೆ. ನಿಸ್ಸಂಶಯವಾಗಿಯೂ ನೀವು ಕೂಡಾ ಟಿಕೆಟ್ ಖರೀದಿ ಮಾಡಿದ್ದಲ್ಲಿ ನಿರಾಸೆಯಾಗಲ್ಲ.

04. ಹಳೆಯ ಕಾರುಗಳ ಹಬ್ಬ

04. ಹಳೆಯ ಕಾರುಗಳ ಹಬ್ಬ

21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿಯನ್ನು ಹಳೆಯ ಕಾರುಗಳ ಹಬ್ಬ ಎಂದೇ ವಿಶ್ಲೇಷಿಸಬಹುದು. ಯಾಕೆಂದರೆ ಈ ಬಾರಿ 201ರಷ್ಟು ವಿಂಟೇಜ್ ಕಾರುಗಳ ಪ್ರದರ್ಶನ ನಡೆಯುತ್ತಿದೆ. ಅಷ್ಟೇ ಯಾಕೆ ಸಮಾರಂಭಕ್ಕೆ ಇನ್ನಷ್ಟು ಮೆರಗು ತುಂಬಲು 50ರಷ್ಟು ವಿಂಟೇಜ್ ಮೋಟಾರುಸೈಕಲ್‌ಗಳ ಸಾನಿಧ್ಯವೂ ಇರಲಿದೆ.

05. 21 ಗನ್ ಸೆಲ್ಯೂಟ್ ರಾಲಿಯ ರೂವಾರಿ

05. 21 ಗನ್ ಸೆಲ್ಯೂಟ್ ರಾಲಿಯ ರೂವಾರಿ

ಗುರ್ಗಾಂವ್ ಮೂಲದ ಕಾರು ಬಾಡಿಗೆ ಸಂಸ್ಥೆಯಾಗಿರುವ ದೆನಾಬ್ ಮತ್ತು ಪೊಲ್ಯೂಕ್ಸ್ ಮಹಾ ನಿರ್ದೇಶಕರಾಗಿರುವ ಮದನ್ ಮೋಹನ್ ಅವರು 21 ಗನ್ ಸೆಲ್ಯೂಟ್ ರಾಲಿಯನ್ನು ಆಯೋಜಿಸುತ್ತಿದ್ದಾರೆ. ಅವರೊರ್ವ ಪಕ್ಕಾ ವಿಂಟೇಜ್ ಕಾರು ಪ್ರೇಮಿ ಹಾಗೂ ಸಂಗ್ರಹಾಗಾರರಾಗಿದ್ದಾರೆ. ಅಂದ ಹಾಗೆ ಹೇರಿಟೇಜ್ ಮೋಟರಿಂಗ್ ಕ್ಲಬ್ ಆಫ್ ಇಂಡಿಯಾದ ಸಹಯೋಗದಲ್ಲಿ ರಾಲಿ ನಡೆಯುತ್ತಿದೆ.

 06. ತೀರ್ಪುಗಾರರು

06. ತೀರ್ಪುಗಾರರು

ಪ್ರತಿಯೊಂದು ಕಾರು ಶೋದ ಯಶಸ್ಸಿನಲ್ಲೂ ತೀರ್ಪುಗಾರರ ಸಮಿತಿಯ ನಿಖರ ನಿರ್ಧಾರಗಳು ನಿರ್ಣಾಯಕವೆನಿಸುತ್ತದೆ. ಅಂತೆಯೇ 21 ಗನ್ ಸೆಲ್ಯೂಟ್ ರಾಲಿಯಲ್ಲೂ ಇದನ್ನು ಕಾಣಬಹುದಾಗಿದೆ. ಈ ಬಾರಿ ರಾಲಿಯಲ್ಲಿ ಪ್ರದರ್ಶನಗೊಳ್ಳುವ ಕಾರುಗಳನ್ನು ಕಾರು ಸಂಗ್ರಹಾಗಾರರು ಆಗಿರುವ ಬರ್ವಾನಿ ರಾಜಮನೆತನದ (58ನೇ ಬರ್ವಾನಿ ಮಹಾರಾಣ) ಎಚ್‌ಎಚ್ ಮಹಾರಾಣ ಸಾಬೀಬ್ ಮನ್ವೇಂದ್ರ ಸಿಂಘ್ ಜೀ ಬಹದ್ದೂರ್, ಭಾರತದ ವಿಂಟೇಜ್ ಮತ್ತು ಕ್ಲಾಸಿಕ್ ಕಾರು ಕ್ಲಬ್‌ನ ಅಧ್ಯಕ್ಷರಾಗಿರುವ ನಿತಿನ್ ದೊಸ್ಸಾ ಮತ್ತು ಪ್ರಖ್ಯಾತ ಚಿತ್ರ ನಿರ್ಮಾಪಕ ರಾಜಾ ಮುಜಾಫಿರ್ ಅಲಿ ಪ್ರಧಾನ ತೀರ್ಪುಗಾರರ ಸಮಿತಿಯಲ್ಲಿರಲಿದ್ದಾರೆ.

07. ಬಹುಮಾನ

07. ಬಹುಮಾನ

21 ಗನ್ ಸೆಲ್ಯೂಟ್ ರಾಲಿ ಅಂದರೆ ಕೇವಲ ಹಳೆಯ ಕಾರುಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಲ್ಲ. ಇಲ್ಲಿ ವಿವಿಧ ವಿಭಾಗಗಳಲ್ಲಾಗಿ ಸ್ಪರ್ಧೆಗಳು ನಡೆಯಲಿದ್ದು, ಅತ್ಯಾಕರ್ಷಕ ಬಹುಮಾನ ಸಿಗಲಿದೆ. ಇಲ್ಲಿ ಅತ್ಯುತ್ತಮ ಕಾರು ಶೋ, ಅತ್ಯುತ್ತಮ ಪೋಷಣೆಯ ಕಾರು, ಹಳೆಯ ವಿಂಟೇಜ್ ಕಾರು, ಕಾಂಕಾರ್ ಡಿ ಎಲೆಗನ್ಸ್ ಜೊತೆಗೆ ಗಸ್ಟ್ ಆಯ್ಕೆ ಪ್ರಶಸ್ತಿಯೂ ಇರಲಿದೆ.

08. ಕಲಾವಿದರ ಸಂಗೀತ, ಫ್ಯಾಶನ್ ಶೋ

08. ಕಲಾವಿದರ ಸಂಗೀತ, ಫ್ಯಾಶನ್ ಶೋ

ಇನ್ನು 21 ಗನ್ ಸೆಲ್ಯೂಟ್ ರಾಲಿ ಕಾರು ಪ್ರದರ್ಶನಕ್ಕೆ ಮಾತ್ರ ಸೀಮಿತವಲ್ಲ. ಇಲ್ಲಿಗೆ ಆಗಮಿಸುವ ವಾಹನ ಪ್ರೇಮಿಗಳಿಗೆ ಸಂಗೀತ ರಸದೌತಣವು ಸಿಗಲಿದೆ. ಅಂತೆಯೇ ಸೂಫಿ ಗಾಯಕರಾದ ವಾದಾಲಿ ಬ್ರದರ್ಸ್ ಎಂದೇ ಖ್ಯಾತಿ ಪಡೆದಿರುವ ಉಸ್ತಾದ್ ಪುರಾಣ್ ಚಾಂದ್ ವಾದಾಲಿ ಮತ್ತು ಉಸ್ತಾದ್ ಪಿಯಾರೆ ಲಾಲ್ ವಾದಾಲಿ ತಮ್ಮ ಕಂಠ ಮಾದುರ್ಯದ ಆಸ್ವಾದನೆಯನ್ನು ನೀಡಲಿದ್ದಾರೆ. ಹಾಗೆಯೇ ಬ್ಲ್ಯಾಕ್ ಸ್ಲೇಡ್ ಬ್ಯಾಂಡ್ ಮೇಳದ ಪಾಪ್, ರಾಕ್, ರೆಟ್ರೊ, ರೆಗ್ಗೇ, ಜಾಝ್, ಬ್ಲೂ, ಹಿಂದಿ, ಪಂಜಾಬ್ ಗಾಯನದ ಸಮ್ಮೀಳನ ನಡೆಯಲಿದೆ.

ಇವೆಲ್ಲದಕ್ಕೂ ಮಿಗಿಲಾಗಿ ಈ ಬಾರಿಯ 21 ಗನ್ ಸೆಲ್ಯೂಟ್ ರಾಲಿಯಲ್ಲಿ ಫ್ಯಾಶನ್ ಶೋ ಕೂಡಾ ಇರಲಿದೆ.

09. ನಿಮ್ಮ ಟಿಕೆಟ್ ಕಾಯ್ದಿರಿಸಿ

09. ನಿಮ್ಮ ಟಿಕೆಟ್ ಕಾಯ್ದಿರಿಸಿ

ಈ ಎಲ್ಲ ವಿಚಾರಗಳನ್ನು ಕೇಳಿದ ಬಳಿಕ ನೀವು ಕೂಡಾ 21 ಗನ್ ಸೆಲ್ಯೂಟ್ ರಾಲಿ ವೀಕ್ಷಿಸಲು ಕಾತರದಿಂದಿರಬಹುದು. ಇನ್ಯಾಕೆ ತಡ ಈ ಕೂಡಲೇ ಕೆಳಗಡೆ ಕೊಟ್ಟಿರುವ ಬುಕ್ ಮೈ ಶೋ ಗೆ ಭೇಟಿ ಕೊಟ್ಟು ನಿಮ್ಮ ಟಿಕೆಟನ್ನು ಕಾಯ್ದಿರಿಸಿ.

10. ಭವ್ಯ ಪರಂಪರೆಯ ಮೆಲುಕು

10. ಭವ್ಯ ಪರಂಪರೆಯ ಮೆಲುಕು

ಈ ಹಿಂದಿನ 21 ಗನ್ ಸೆಲ್ಯೂಟ್ ರಾಲಿಯ ಚಿತ್ರಗಳನ್ನು ವೀಕ್ಷಿಸಿದರೆ ಭವ್ಯ ಭಾರತದ ಇತಿಹಾಸ ಪರಂಪರೆಯನ್ನು ಮೆಲುಕು ಹಾಕಬಹುದಾಗಿದೆ. ಇದಕ್ಕಾಗಿ ಇಲ್ಲಿ ಕೊಟ್ಟಿರುವ ಲಿಂಕ್‌ಗೆ ಭೇಟಿ ಕೊಡಿರಿ.

http://www.21gunsaluterally.com/vintage-car-rally-pictures-2014/

 

 

English summary
The following slides will highlight 10 things you should know about the upcoming event that is no doubt going to be a grand spectacle.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark