2016 ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಹತ್ತಿರದಿಂದ ಗಮನಿಸಿ!
ಇನ್ನಷ್ಟೇ ಭಾರತಕ್ಕೆ ಪ್ರವೇಶಿಸಲಿರುವ 2016 ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಥಾಯ್ಲೆಂಡ್ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆಯಾಗಿರುವ ಬಗ್ಗೆ ವರದಿ ಮಾಡಿರುತ್ತೇವೆ. ಈಗ ನಮ್ಮ ನೆಚ್ಚಿನ ಓದುಗರಿಗಾಗಿ ಈ ಬಹುನಿರೀಕ್ಷಿತ ಕಾರನ್ನು ಮತ್ತಷ್ಟು ನಿಕಟದಿಂದ ಪರಿಚಯಿಸುವ ಪ್ರಯತ್ನ ಮಾಡಲಿದ್ದೇವೆ.
ಹೇಳಿ ಕೇಳಿ ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಮಿಟ್ಸುಬಿಸಿ ಭಾರತದಲ್ಲಿ ಅಂತದ್ದೇನು ಸಾಧನೆ ಮಾಡಿಲ್ಲ. ಹಾಗಿದ್ದರೂ ಎಲ್ಲ ಹೊಸತನದ 2016 ಪಜೆರೊ ಸ್ಪೋರ್ಟ್ ಹಲವಾರು ನಿರೀಕ್ಷೆಗಳಿಗೆ ಕಾರಣವಾಗಿದೆ.

2016 ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಹತ್ತಿರದಿಂದ ಗಮನಿಸಿ!

ಪ್ರಸ್ತುತ ಏಳು ಸೀಟಿನ ಕ್ರೀಡಾ ಬಳಕೆಯ ವಾಹನವು ದೇಶದಲ್ಲಿ ಟೊಯೊಟಾ ಫಾರ್ಚ್ಯುನರ್, ಫೋರ್ಡ್ ಎಂಡೀವರ್ ಮತ್ತು ಇನ್ನಷ್ಟೇ ಬಿಡುಗಡೆಯಾಗಲಿರುವ ಷೆವರ್ಲೆ ಟ್ರೈಲ್ ಬ್ಲೇಜರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಭಾರತದಲ್ಲಿ ಐಷಾರಾಮಿ ಕ್ರೀಡಾ ಬಳಕೆಯ ಸಾಲಿನಲ್ಲಿ ಗುರುತಿಸಿಕೊಳ್ಳುವ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್, ತನ್ನದೇ ಆದ ವಿಶಿಷ್ಟ ಸಮಕಾಲೀನ ವಿನ್ಯಾಸವನ್ನು ಕಾಪಾಡಿಕೊಳ್ಳಲಿದೆ.

2800 ಎಂಎಂ ಚಂಕ್ರಾಂತರವನ್ನು ಹೊಂದಿರುವ 2016 ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ಸ್, ತನ್ನ ಹಿಂದಿನ ಮಾದರಿಯೊಂದಿಗೆ ಸಮಾನ ಅಗಲವನ್ನು (1815 ಎಂಎಂ) ಹಂಚಿಕೊಂಡಿದೆ.

ಅಂತೆಯೇ ಹಳೆಯ ಮಾದರಿಗಿಂತಲೂ 90 ಎಂಎಂ (4785 ಎಂಎಂ) ಹೆಚ್ಚು ಉದ್ದ ಹಾಗೂ 35 ಎಂಎಂ (1805 ಎಂಎಂ) ಕಡಿಮೆ ಎತ್ತರವನ್ನು ಪಡೆಯಲಿದೆ.

ಅಂತೆಯೇ ಆಫ್ ರೋಡ್ ನಲ್ಲೂ ಪರಿಣಾಮಕಾರಿ ಚಾಲನೆಗಾಗಿ ಗ್ರೌಂಡ್ ಕ್ಲಿಯರನ್ಸ್ 13 ಎಂಎಂಗಳಷ್ಟು (218 ಎಂಎಂ) ಹೆಚ್ಚಿಸಲಾಗಿದೆ.

ಇನ್ನುಳಿದಂತೆ ಕಾರಿನಡಿಯಲ್ಲಿ 2.4 ಲೀಟರ್ ಎಂಐವಿಇಸಿ ( MIVEC) ಟರ್ಬೊ ಡೀಸೆಲ್ ಎಂಜಿನ್ ಆಳವಡಿಕೆಯಾಗಲಿದೆ.

ಪ್ರಸ್ತುತ ಎಂಜಿನ್ 430 ಎನ್‌ಎಂ ತಿರುಗುಬಲದಲ್ಲಿ 178 ಅಶ್ವಶಕ್ತಿ ಉತ್ಪಾದಿಸಲಿದೆ.

ಅಂತೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಜಪಾನ್ ಸಂಸ್ಥೆಯ ಪ್ರಕಾರ ಹೊಸತಾದ ಎಂಜಿನ್ ತಾಂತ್ರಿಕತೆಯು ಒಟ್ಟಾರೆ ಇಂಧನ ಕ್ಷಮತೆಯಲ್ಲಿ ಶೇಕಡಾ 17ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ.

ಹಾಗೆಯೇ ಪ್ರತಿ ಕೀ.ಮೀ.ಗೆ 200 ಗ್ರಾಂ ಮಾತ್ರ ಕಾರ್ಬನ್ ಡೈ ಓಕ್ಸೈಡ್ (CO2) ಹೊಗೆ ಹೊರಸೂಸುವ ಮೂಲಕ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.


Click it and Unblock the Notifications







