ಫೋಕ್ಸ್‌ವ್ಯಾಗನ್ ಮಾಲಿನ್ಯ ಮೋಸ; ಭಾರತದಲ್ಲೂ ತನಿಖೆಗೆ ಆದೇಶ
ಅಮೆರಿಕದಲ್ಲಿ ಭಾರಿ ಪ್ರಮಾಣದ ಮಾಲಿನ್ಯ ಮೋಸ ಸಂಭವಿಸಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತ ಸರಕಾರವು, ಫೋಕ್ಸ್ ವ್ಯಾಗನ್ ವಿರುದ್ದ ಮಾಲಿನ್ಯ ತಪಾಸಣೆ ಹಮ್ಮಿಕೊಳ್ಳುವಂತೆ ಭಾರತೀಯ ವಾಹನ ಅಧ್ಯಯನ ಸಂಸ್ಥೆಗೆ (ARAI) ಸರಕಾರ ಆದೇಶ ಹೊರಡಿಸಿದೆ.
ಅಮೆರಿಕದಲ್ಲಿ ಫೋಕ್ಸ್ ವ್ಯಾಗನ್ ಡೀಸೆಲ್ ಕಾರುಗಳಲ್ಲಿ ವಿಶೇಷ ತಂತ್ರಾಂಶವನ್ನು ಆಳವಡಿಸುವ ಮೂಲಕ ಮಾಲಿಕ ತಪಾಸಣೆ ವೇಳೆ ವಂಚನೆ ಮಾಡಲಾಗಿತ್ತು. ಇದನ್ನು ಕಂಡು ಹುಡುಕಿರುವ ಅಮೆರಿಕ ಪರಿಸರ ಸಂರಕ್ಷಣಾ ಎಜೆನ್ಸಿಯು 1.17 ಲಕ್ಷ ಕೋಟಿ ದಂಡ ವಿಧಿಸಿದೆ.

ಕೇವಲ ಅಮೆರಿಕ ಮಾತ್ರವಲ್ಲದೆ ಯುರೋಪ್‌ನಲ್ಲೂ ಎಮಿಷನ್ ಟೆಸ್ಟ್‌ಗೆ ಸಂಬಂಧಿಸಿದಂತೆ ಮೋಸ ನಡೆದಿದೆ ಎಂಬುದು ತಿಳಿದು ಬಂದಿದೆ. ಒಟ್ಟಾರೆ ವಿಶ್ವದ್ಯಾಂತ 1.10 ಕೋಟಿ ಫೋಕ್ಸ್ ವ್ಯಾಗನ್ ಕಾರುಗಳಲ್ಲಿ ತೊಂದರೆ ಕಾಣಿಸಿಕೊಂಡಿದೆ.
ಇದರಂತೆ ಪ್ರಕರಣವು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು ತನಿಖೆ ನಡೆಸುವಂತೆ ಎಆರ್‌ಎಐಗೆ ಸೂಚನೆ ನೀಡಿದೆ. ಈ ನಡುವೆ ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಲು ಫೋಕ್ಸ್ ವ್ಯಾಗನ್ ಇಂಡಿಯಾ ನಿರಾಕರಿಸಿದೆ.


Click it and Unblock the Notifications








