ಕಾರುಗಳಿಗೆ ಭಾರಿ ಡಿಸ್ಕೌಂಟ್; ವರ್ಷಾಂತ್ಯದ ಆಫರ್ ಮಿಸ್ ಮಾಡದಿರಿ!
2015ನೇ ವರ್ಷ ಅಂತಿಮ ಹಂತವನ್ನು ಪ್ರವೇಶಿಸಿರುವಂತೆಯೇ ದೇಶದ ಮುಂಚೂಣಿಯ ಸಂಸ್ಥೆಗಳು ತನ್ನ ಜನಪ್ರಿಯ ಮಾದರಿಗಳಿಗೆ ಡಿಸೆಂಬರ್ ತಿಂಗಳಲ್ಲಿ ಭಾರಿ ಆಫರ್ ಗಳನ್ನು ಮುಂದಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮವು ಕಾರು ಕೊಡುಗೆಗಳನ್ನು ಮತ್ತಷ್ಟು ರಂಗೇರಿಸಲಿದೆ.
Also Read: ಟಾಟಾ "ಫೆಂಟಾಸ್ಟಿಕೊ ಹಂಟ್" ಬೃಹತ್ ಡಿಜಿಟಲ್ ಅಭಿಯಾನ
ಪ್ರಸ್ತುತ ಈ ಲೇಖನದಲ್ಲಿ ಡಿಸೆಂಬರ್ ತಿಂಗಳಲ್ಲಿ ಜನಪ್ರಿಯ ಕಾರುಗಳಿಗೆ ಲಭ್ಯವಿರುವ ಡಿಸ್ಕೌಂಟ್ ಗಳ ಬಗ್ಗೆ ಸಮಗ್ರ ಮಾಹಿತಿ ಕೊಡುವ ಪ್ರಯತ್ನ ಮಾಡಲಿದ್ದೇವೆ. ಇದಕ್ಕಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಟಾಟಾ ಬೋಲ್ಟ್
ಒಟ್ಟು ಉಳಿತಾಯ: 60,000 ರು.
ದೇಶದ ಅತಿ ದೊಡ್ಡ ಟಾಟಾ ಸಂಸ್ಥೆಯು ತನ್ನ ಜನಪ್ರಿಯ ಬೋಲ್ಟ್ ಕಾರಿಗೆ 20,000 ರು.ಗಳ ವರೆಗೆ ಡಿಸ್ಕೌಂಟ್ ನೀಡುತ್ತಿದ್ದು, 40,000 ರು.ಗಳ ವರೆಗೆ ಎಕ್ಸ್ ಚೇಂಜ್ ಪ್ರಯೋಜನವನ್ನು ನಿಮ್ಮದಾಗಿಸಬಹುದಾಗಿದೆ. ಈ ಮೂಲಕ ಒಟ್ಟಾರೆ 60,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

ಹ್ಯುಂಡೈ ಐ10
ಒಟ್ಟು ಉಳಿತಾಯ: 50,000 ರು.
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ, ತನ್ನ ಜನಪ್ರಿಯ ಐ10 ಹ್ಯಾಚ್ ಬ್ಯಾಕ್ ಕಾರು ಖರೀದಿ ವೇಳೆಯಲ್ಲಿ 16,000 ರು.ಗಳ ಉಚಿತ ವಿಮೆ ಹಾಗೂ 14,000 ರು.ಗಳ ನಗದು ರಿಯಾಯಿತಿಯನ್ನು ನೀಡುತ್ತಿದೆ. ಇದರ ಜೊತೆಗೆ ಹ್ಯುಂಡೈ ಡೀಲರ್ ಗಳು ಹೆಚ್ಚುವರಿ 20,000 ರು.ಗಳ ಡಿಸ್ಕೌಂಟ್ ಕೂಡಾ ನೀಡುತ್ತಿದೆ ಎಂಬುದು ತಿಳಿದು ಬಂದಿದೆ.

ನ್ಯೂ ಫೋರ್ಡ್ ಫಿಗೊ
ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಹೊಸ ಫಿಗೊ ಹ್ಯಾಚ್ ಬ್ಯಾಕ್ ಕಾರಿನ ಮೇಲೆ ಉಚಿತ ವಿಮೆ ಹಾಗೂ ಹಳೆಯ ಕಾರನ್ನು ಎಕ್ಸ್‌ಚೇಂಜ್ ಮಾಡುವುದಾದ್ದಲ್ಲಿ 25,000 ರು.ಗಳ ವರೆಗೆ ಪ್ರಯೋಜನವನ್ನು ನೀಡುತ್ತಿದೆ.

ಹೋಂಡಾ ಬ್ರಿಯೊ
ಇನ್ನು ಬ್ರಿಯೊ ಕಾರನ್ನು ಆಯ್ಕೆ ಮಾಡುವ ಗ್ರಾಹಕರಿಗೆ ಜಪಾನ್ ಮೂಲದ ಹೋಂಡಾ ಸಂಸ್ಥೆಯು ವೆರಿಯಂಟ್ ಅವಲಂಬಿಸಿ 20,000 ರು.ಗಳ ವರೆಗೆ ಆಫರ್ ಮುಂದಿಡುತ್ತಿದೆ.

ಮಾರುತಿ ಎಸ್-ಕ್ರಾಸ್
ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಸುಜುಕಿಯ ಎಸ್-ಕ್ರಾಸ್ ಕ್ರೀಡಾ ಬಳಕೆಯ ವಾಹನವನ್ನು ನೆಕ್ಸಾ ಶೋ ರೂಂನಲ್ಲಿ ಖರೀದಿ ವೇಳೆಯಲ್ಲಿ 30,000 ರು.ಗಳ ವರೆಗೆ ಎಕ್ಸ್ ಚೇಂಜ್ ಮತ್ತು ಲಾಯಲ್ಟಿ ಆಫರ್ ನೀಡಲಾಗುತ್ತದೆ.

ವೋಲ್ವೋ ಎಕ್ಸ್‌ಸಿ60
ದೇಶದ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದೆನಿಸಿಕೊಂಡಿರುವ ವೋಲ್ವೋ ಎಕ್ಸ್‌ಸಿ60 ಎಸ್‌ಯುವಿ ಖರೀದಿ ವೇಳೆಯಲ್ಲಿ ಆರು ಲಕ್ಷ ರು.ಗಳ ವರೆಗೆ ನಗದು ಪ್ರಯೋಜನವನ್ನು ನೀಡಲಾಗುತ್ತಿದೆ.

ಫೋರ್ಡ್ ಇಕೊಸ್ಪೋರ್ಟ್
ಅಂತೆಯೇ ಫೋರ್ಡ್ ಇಕೊಸ್ಪೋರ್ಟ್ ಖರೀದಿ ವೇಳೆಯಲ್ಲಿ ಉಚಿತ ವಿಮೆ ಹಾಗೂ 25,000 ರು.ಗಳ ವರೆಗೆ ಹೆಚ್ಚುವರಿ ಎಕ್ಸ್ ಚೇಂಜ್ ಆಫರ್ ನೀಡಲಾಗುತ್ತಿದೆ.

ಬಿಎಂಡಬ್ಲ್ಯು ಎಕ್ಸ್5
ಹಾಗೊಂದು ವೇಳೆ ನೀವು ಜರ್ಮನಿಯ ಐಷಾರಾಮಿ ಬಿಎಂಡಬ್ಲ್ಯು ಸಂಸ್ಥೆಯ ಎಕ್ಸ್5 ಮಾದರಿಯನ್ನು ಖರೀದಿಸುವುದಾದ್ದಲ್ಲಿ 6.30 ಲಕ್ಷ ರು.ಗಳ ವರೆಗೆ ನಗದು ಡಿಸ್ಕೌಂಟ್ ನೀಡಲಾಗತ್ತಿದೆ. ಇದರ ಜೊತೆಗೆ ಹಳೆಯ ಕಾರು ಎಕ್ಸ್ ಚೇಂಜ್ ವೇಳೆಯಲ್ಲಿ ಹೆಚ್ಚುವರಿ 70,000 ರು.ಗಳ ಪ್ರಯೋಜನವನ್ನು ನೀಡುತ್ತಿದೆ.

ಟಾಟಾ ಸುಮೋ ಗೋಲ್ಡ್
ಟಾಟಾ ಸುಮೋ ಗೋಲ್ಡ್ ಖರೀದಿ ವೇಳೆಯಲ್ಲಿ 10,000 ರು.ಗಳ ವರೆಗೆ ನಗದು ಡಿಸ್ಕೌಂಟ್ ಹಾಗೂ 15,000 ರು.ಗಳ ವರೆಗೆ ಹೆಚ್ಚುವರಿ ಎಕ್ಸ್ ಚೇಂಜ್ ಡಿಸ್ಕೌಂಟ್ ನಿಮ್ಮದಾಗಿಸಬಹುದಾಗಿದೆ.

ಹೋಂಡಾ ಅಮೇಜ್
ತನ್ನ ಯಶಸ್ವಿ ಕಾಂಪಾಕ್ಟ್ ಸೆಡಾನ್ ಕಾರಿನ ಮೇಲೆ 40,000 ರು.ಗಳ ಡಿಸ್ಕೌಂಟ್ ಅನ್ನು ಹೋಂಡಾ ಒದಗಿಸುತ್ತಿದೆ.

ಮಾರುತಿ ಸಿಯಾಝ್
ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ಹೋಂಡಾ ಸಿಟಿ ಪ್ರತಿಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಮಾರುತಿ ಸಿಯಾಝ್ ಕಾರಿಗೆ ಈಗಾಗಲೇ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದೆ. ಇವೆಲ್ಲದರ ಜೊತೆಗೆ ಸಂಸ್ಥೆಯು 10,000 ರು.ಗಳ ಡಿಸ್ಕೌಂಟ್, ಲಾಯಲ್ಟಿ ಹಾಗೂ ಎಕ್ಸ್ ಚೇಂಜ್ ಆಫರ್ ಗಳನ್ನು ನೀಡುತ್ತಿದೆ.

ಬಿಎಂಡಬ್ಲ್ಯು 3 ಸಿರೀಸ್
ಬಿಎಂಡಬ್ಲ್ಯು 3 ಸಿರೀಸ್ ಕಾರಿನ ಎಲ್ಲ ವೆರಿಯಂಟ್ ಗಳ ಮೇಲೂ 4 ಲಕ್ಷ ರು.ಗಳ ಡಿಸ್ಕೌಂಟ್ ಅನ್ನು ಜರ್ಮನಿಯ ಸಂಸ್ಥೆ ನೀಡುತ್ತಿದೆ.

ಬಿಎಂಡಬ್ಲ್ಯು 5 ಸಿರೀಸ್
ಹೆಚ್ಚು ಸ್ಥಳಾವಕಾಶಯುಕ್ತ ಬಿಎಂಡಬ್ಲ್ಯು 5 ಸಿರೀಸ್ ಖರೀದಿಸುವ ಇರಾದೆಯಿದ್ದಲ್ಲಿ ಇದೇ ಸೂಕ್ತ ಸಂದರ್ಭವಾಗಿದ್ದು, ಈ ಜನಪ್ರಿಯ ಕಾರು ಖರೀದಿಯ ವೇಳೆಯಲ್ಲಿ 5 ಲಕ್ಷ ರು.ಗಳ ವರೆಗೆ ರಿಯಾಯಿತಿ ದರ ನೀಡಲಾಗುತ್ತಿದೆ.

ಆಡಿ ಎ4
ನಿಮ್ಮ ನೆಚ್ಚಿನ ಆಡಿ ಎ4 ಕಾರು ಖರೀದಿಯಲ್ಲಿ 4 ಲಕ್ಷ ರು.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ.

ವೋಲ್ವೋ ಎಸ್60
ಪ್ರೀಮಿಯಂ ಸೆಡಾನ್ ಕಾರಿನ ಸಾಲಿನಲ್ಲಿ ಗುರುತಿಸಿಕೊಂಡಿರುವ ವೋಲ್ವೋ ಎಸ್60 ಖರೀದಿ ವೇಳೆಯಲ್ಲಿ ಐದು ಲಕ್ಷ ರು.ಗಳ ವರೆಗಿನ ನಗದು ರಿಯಾಯಿತಿ ಪಡೆಯಬಹುದಾಗಿದೆ.

ಹ್ಯುಂಡೈ ವೆರ್ನಾ
ಹೋಂಡಾ ಸಿಟಿ ಹಾಗೂ ಮಾರುತಿ ಸಿಯಾಝ್ ಗಳಂತಹ ಕಾರುಗಳ ಆಗಮನದೊಂದಿಗೆ ಸ್ವಲ್ಪ ಕಳೆಗುಂದಿರುವ ಹ್ಯುಂಡೈ ವೆರ್ನಾ ಖರೀದಿ ವೇಳೆಯಲ್ಲಿ 25,000 ರು.ಗಳ ವರೆಗೆ ಪ್ರಯೋಜನ ನೀಡಲಾಗುತ್ತಿದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್
ಬಿಎಂಡಬ್ಲ್ಯು 3 ಸಿರೀಸ್ ಹಾಗೂ ಆಡಿ ಎ4 ಪ್ರತಿಸ್ಪರ್ಧಿಯಾಗಿರುವ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಖರೀದಿಯಲ್ಲಿ 3 ಲಕ್ಷ ರು.ಗಳ ವರೆಗಿನ ನಗದು ರಿಯಾಯಿತಿ ನಿಮ್ಮದಾಗಿಸಬಹುದಾಗಿದೆ.

ನಿಸ್ಸಾನ್ ಸನ್ನಿ
ನಿಸ್ಸಾನ್ ಸನ್ನಿ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿ ಖರೀದಿ ವೇಳೆಯಲ್ಲಿ ಅನುಕ್ರಮವಾಗಿ 75,000 ಹಾಗೂ 45,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ.

ಆಫರ್ ಗಳ ಬಗೆಗಿನ ಸಮಗ್ರ ಮಾಹಿತಿಗಾಗಿ ನಿಮ್ಮ ಹತ್ತಿರದ ನಿರ್ದಿಷ್ಟ ವಾಹನ ಸಂಸ್ಥೆಗಳ ಅಧಿಕೃತ ಡೀಲರ್ ಗಳ ಬಳಿ ವಿಚಾರಿಸಿಕೊಳ್ಳಿರಿ.


Click it and Unblock the Notifications








