ಇದು ವರ್ಷದ ಅತಿದೊಡ್ಡ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ಎಸ್‌ಯುವಿ ವಿಭಾಗದಲ್ಲಿ ಭಾರೀ ನೀರಿಕ್ಷೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ರೆನಾಲ್ಟ್ ಕ್ಯಾಪ್ಚರ್ ಕ್ರಾಸ್ ಓವರ್ ಎಸ್‌ಯುವಿ ಕಾರು ಹೇಳಿಕೊಳ್ಳುವಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಸುಳ್ಳಲ್ಲ. ಹೀಗಾಗಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕ್ಯಾಪ್ಚರ್ ಕಾರು ಖರೀದಿ ಮೇಲೆ ಮೇಲೆ ಹೊಸ ಆಫರ್‌ಗಳನ್ನು ಘೋಷಣೆ ಮಾಡಲಾಗಿದೆ.

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ಕ್ಯಾಪ್ಚರ್ ಕಾರುಗಳು ಸದ್ಯ ವಿವಿಧ 7 ವೆರಿಯಂಟ್‌ ಜೊತೆಗೆ 5 ಪ್ರಮುಖ ಬಣ್ಣಗಳ ಆಯ್ಕೆಯೊಂದಿಗೆ ಗ್ರಾಹಕರನ್ನು ಸಳೆಯುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ. ಹೀಗಿದ್ದರೂ ನೀದಿಷ್ಟ ಮಟ್ಟದ ಬೇಡಿಕೆ ಪಡೆಯುವಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದು, ಈ ಕಾರಣಕ್ಕೆ ಹೊಸ ಕ್ಯಾಪ್ಚರ್ ಖರೀದಿ ಮೇಲೆ ಬರೋಬ್ಬರಿ ರೂ.2.58 ಲಕ್ಷ ಡಿಸ್ಕೌಂಟ್ ನೀಡಲಾಗುತ್ತಿದೆ.

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ಡಿಸ್ಕೌಂಟ್ ದರಗಳು ವೆರಿಯೆಂಟ್‌ಗಳ ಮೇಲೆ ನಿರ್ಧಾರವಾಗಲಿದ್ದು, ಇದು ಒಂದು ನಗರದಿಂದ ಮತ್ತೊಂದು ನಗರಕ್ಕೂ ಸಹ ಬೇರೆ ಬೇರೆ ದರ ಅನ್ವಯವಾಗುತ್ತವೆ. ಇದರಲ್ಲಿ ಹೈ ಎಂಡ್ ಮಾದರಿಯ ಪ್ಲ್ಯಾಟೆನಿ ಡೀಸೆಲ್ ಮಾದರಿಯ ಮೇಲೆ ರೂ.2.58 ಲಕ್ಷ ಡಿಸ್ಕೌಂಟ್ ದೊರೆತಲ್ಲಿ ಆರಂಭಿಕ ಮಾದರಿಯಾದ ಆರ್‌ಎಕ್ಸ್‌ಇ ಪೆಟ್ರೋಲ್ ವರ್ಷನ್ ಮೇಲೆ ರೂ.1.37 ಲಕ್ಷ ಡಿಸ್ಕೌಂಟ್ ಅನ್ವಯವಾಗುತ್ತೆ.

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ಕಡಿಮೆ ಬೆಲೆಗಳಲ್ಲೇ ಕ್ಯಾಪ್ಚರ್ ಎಸ್‌ಯುವಿ ಕಾರುಗಳಲ್ಲಿ ಆಲ್ ವಿಲ್ಹ್ ಡ್ರೈವ್ ಟೆಕ್ನಾಲಜಿ ಸೌಲಭ್ಯವನ್ನು ಒದಗಿಸುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಶುರು ಮಾಡಿರುವ ರೆನಾಲ್ಟ್ ಸಂಸ್ಥೆಯು, ಕ್ಯಾಪ್ಚರ್ ಕಾರಿನ ಆರಂಭಿಕ ಬೆಲೆಯನ್ನು ಮುಂಬೈ ಆನ್‌ರೋಡ್ ಪ್ರಕಾರ ಆರಂಭಿಕವಾಗಿ ರೂ.10.86 ಲಕ್ಷಕ್ಕೆ ಹಾಗೂ ಟಾಪ್ ವೆರಿಯಂಟ್‌ ಅನ್ನು ರೂ.14.58 ಲಕ್ಷಕ್ಕೆ ನಿಗದಿಗೊಳಿಸಿದೆ.

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ರೆನಾಲ್ಟ್ ನಿರ್ಮಾಣದ ಮೊದಲ ಕ್ರಾಸ್ ಓವರ್ ಎಸ್‌ಯುವಿ ಆವೃತ್ತಿಯಾಗಿರುವ ಕ್ಯಾಪ್ಚರ್ ಕಾರುಗಳು ಉಳಿದೆಲ್ಲಾ ಮಧ್ಯಮ ಗಾತ್ರದ ಎಸ್‌ಯುವಿಯಲ್ಲೇ ಉತ್ತಮ ಚಾರ್ಸಿ ವ್ಯವಸ್ಥೆಯನ್ನು ಹೊಂದಿರುವ ಕಾರು ಮಾದರಿಯಾಗಿದ್ದು, ಆರಂಭದಲ್ಲಿ ಹ್ಯುಂಡೈ ಕ್ರೇಟಾ ಹಾಗೂ ಟಾಟಾ ಹೆಕ್ಸಾ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಿತ್ತು. ಆದ್ರೆ ಇತ್ತೀಚೆಗೆ ಕ್ಯಾಪ್ಚರ್ ಕಾರಿನ ಬೇಡಿಕೆಯಲ್ಲಿ ಇಳಿಕೆಯಾಗುತ್ತಿದ್ದು, ಹೀಗಾಗಿ ಕಾರು ಖರೀದಿಗಾಗಿ ಅತ್ಯುತ್ತಮ ಆಫರ್ ಘೋಷಣೆ ಮಾಡಲಾಗಿದೆ.

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ಈ ಮೂಲಕ ಎಸ್‌ಯುವಿ ಪ್ರಿಯರನ್ನು ಸೆಳೆಯಲು ಸಜ್ಜುಗೊಂಡಿರುವ ರೆನಾಲ್ಟ್ ಕ್ಯಾಪ್ಚರ್ ಕಾರು ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಯಂತೆ ವಿವಿಧ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ಎಂಜಿನ್ ಸಾಮರ್ಥ್ಯ

ಡಸ್ಟರ್ ಕಾರು ಮಾದರಿಯಲ್ಲೇ ಕ್ಯಾಪ್ಚರ್ ಕಾರುಗಳು 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಪೆಟ್ರೋಲ್ ಕಾರುಗಳು 105-ಬಿಎಚ್‌ಪಿ, 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡೀಸೆಲ್ ಕಾರುಗಳು 119-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ಜೊತೆಗೆ ಪೆಟ್ರೋಲ್ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 17-ಇಂಚಿನ ಅಲಾಯ್ ಚಕ್ರಗಳನ್ನು ಅಳವಡಿಕೆ ಮಾಡಲಾಗಿದೆ.

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ಇನ್ನು ಒಳ ಮತ್ತು ಹೊರ ವಿನ್ಯಾಸದಲ್ಲಿ ಗುರುತರ ಬದಲಾವಣೆ ತಂದಿರುವ ರೆನಾಲ್ಟ್ ಸಂಸ್ಥೆಯು, 310-ಲೀಟರ್ ಬೂಟ್ ಸ್ಪೆಸ್, 50 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ವೈಶಿಷ್ಟ್ಯತೆಗಳು

ಡ್ಯುಯಲ್ ಟೋನ್ ಬಣ್ಣದೊಂದಿಗೆ ಹೊಸ ಲುಕ್ ಪಡೆದುಕೊಂಡಿರುವ ಕ್ಯಾಪ್ಚರ್ ಕಾರುಗಳು ಬ್ಲ್ಯಾಕ್ ಆ್ಯಂಡ್ ವೈಟ್ ಥೀಮ್ ಪಡೆದಿವೆ. ಜೊತೆಗೆ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲರ್, ಬ್ಲ್ಯೂಟಥ್ ಕನೆಕ್ವಿಟಿ, ಧ್ವನಿ ನಿಯಂತ್ರಣ ಘಟಕ ಪಡೆದುಕೊಂಡಿದೆ.

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ಲಭ್ಯವಿರುವ ಕಾರಿನ ಬಣ್ಣಗಳು- ಮೂನ್ ಲೈಟ್ ಸಿಲ್ವರ್, ಪ್ಲ್ಯಾನೆಟ್ ಗ್ರೇ, ಕೆಯೆನಿ ಆರೆೇಂಜ್, ಮೊಹೊಗೆನಿ ಬ್ರೌನ್ ಮತ್ತು ಪರ್ಲ ವೈಟ್

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಇದು ವರ್ಷದ ಅತಿದೊಡ್ಡದ ಆಫರ್- ರೆನಾಲ್ಟ್ ಕ್ಯಾಪ್ಚರ್ ಮೇಲೆ ಭರ್ಜರಿ ಡಿಸ್ಕೌಂಟ್..!

ಒಟ್ಟಿನಲ್ಲಿ ರೆನಾಲ್ಟ್ ಸಂಸ್ಥೆಯು ಎಸ್‌ಯುವಿ ಪ್ರಿಯರನ್ನು ಸೆಳೆಯುವ ಉದ್ದೇಶದೊಂದಿಗೆ ಕ್ಯಾಪ್ಚರ್ ಕಾರುಗಳ ಖರೀದಿ ಮೇಲೆ ವಿಶೇಷ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಕ್ಯಾಪ್ಚರ್ ಕಾರು ಯಾವ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳಲಿವೆ ಎಂಬುವುದನ್ನು ಕಾಯ್ದುನೋಡಬೇಕಿದೆ.

Most Read Articles

Kannada
English summary
Renault Captur Offered With Dealer-Level Discounts Worth More Than Rs 2.58 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X