ಮಹೀಂದ್ರ ರೇವಾ ಸಿಇಒ ಸ್ಥಾನಕ್ಕೆ ಸಂಸ್ಥಾಪಕ ಮೈನಿ ರಾಜೀನಾಮೆ

By Nagaraja

ಸರಿ ಸುಮಾರು ಎರಡು ವರ್ಷಗಳ ಹಿಂದೆ ತಾವೇ ಹುಟ್ಟು ಹಾಕಿದ್ದ ವಿದ್ಯುತ್ ಚಾಲಿತ ಸಂಸ್ಥೆಯಾಗಿರುವ ರೇವಾ ಎಲೆಕ್ಟ್ರಿಕ್ ಕಾರು ಸಂಸ್ಥೆಯ ಸಿಇಒ ಸ್ಥಾನಕ್ಕೆ ಚೇತನ್ ಮೈನಿ ರಾಜೀನಾಮೆ ನೀಡಿದ್ದಾರೆ.

1994ರಲ್ಲಿ ಚೇತನ್ ಮೈನಿ ಮುಂದಾಳತ್ವದಲ್ಲಿ ರೂಪುಗೊಂಡಿದ್ದ ರೇವಾ ಎಲೆಕ್ಟ್ರಿಕ್ ಕಾರು ಸಂಸ್ಥೆಯನ್ನು ಬಳಿಕ 2010ರಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

chetan maini

ತದಾ ಬಳಿಕವೂ ಸಿಇಒ ಆಗಿ ಮುಂದುವರಿದಿದ್ದ ಚೇತನ್ ಮೈನಿ ಈಗ ದಿಢೀರ್ ಆಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಿದ್ದರೂ ರೇವಾ ಎಲೆಕ್ಟ್ರಿಕ್ ಕಾರಿನಲ್ಲಿರುವ ತಮ್ಮ ಶೇರನ್ನು ವಾಪಾಸ್ ಪಡೆಯಲಿದ್ದಾರೆಯೇ ಎಂಬುದು ಕುತೂಹಲವೆನಿಸಿದೆ.

ಕಳೆದ 20 ವರ್ಷಗಳಿಂದ ಮಹೀಂದ್ರ ರೇವಾ ಸಿಇಒ ಜವಾಬ್ದಾರಿ ವಹಿಸಿಕೊಂಡಿದ್ದ ಚೇತನ್ ಮೈನಿ ಸ್ಥಾನವನ್ನೀಗ ಫೋರ್ಡ್ ಇಂಡಿಯಾ ಮಾಜಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರವಿಂದ್ ಮ್ಯಾಥ್ಯೂ ತುಂಬಲಿದ್ದಾರೆ. ಇವರು 2015 ಮೇ 1ರಂದು ಹೊಸ ಸ್ಥಾನವನ್ನು ಆಲಂಕರಿಸಲಿದ್ದಾರೆ.

ಮಹೀಂದ್ರ ಸ್ವಾಧೀನಕ್ಕೆ ಬಂದ ಬಳಿಕ ಬಳಿಕ 5.5ರಷ್ಟಿದ್ದ ಮೈನಿ ಶೇರು 2014ರ ಆರ್ಥಿಕ ಸಾಲಿನ ಅಂತ್ಯದ ವೇಳೆಗೆ ಶೇಕಡಾ 3.57ಕ್ಕೆ ಇಳಿಕೆಯಾಗಿತ್ತು. ಈ ಎಲ್ಲದರ ನಡುವೆ ಚೇತನ್ ಮುಂದಿನ ನಡೆ ಏನಾಗಿರಬಹುದು ಎಂಬುದಕ್ಕೆ ಮುಂಬರುವ ದಿನಗಳಲ್ಲಿ ಉತ್ತರ ಲಭಿಸಲಿದೆ.

ಬೆಂಗಳೂರು ತಳಹದಿಯ ರೇವಾ ಎಲೆಕ್ಟ್ರಿಕ್ ಕಾರೀಗ ವಿದ್ಯದ್ಯಾಂತ 26ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಅಲ್ಲದೆ 2013ರಲ್ಲಿ ಫಾಸ್ಟ್ ಸಂಸ್ಥೆಯಿಂದ ಜಗತ್ತಿನ 50 ಅತಿ ನಾವೀನ್ಯತೆಯ ಸಂಸ್ಥೆಗಳ ಪಟ್ಟಿಯಲ್ಲೂ ಗುರುತಿಸಿಕೊಂಡಿತ್ತು.

More from DriveSpark

Article Published On: Wednesday, February 4, 2015, 14:23 [IST]
English summary
Chetan Maini, the founder of the Reva electric cars has resigned as the CEO of the electric car company which is now owned by Mahindra.
Read in English: Chetan Maini Quits Reva!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+