ಟಾಟಾ ಬೋಲ್ಟ್ ಆಯ್ತು; ಈಗ ಷೆವರ್ಲೆ ಬೋಲ್ಟ್ ಸರದಿ
ಅದ್ಯಾಕೋ ವಾಹನ ಸಂಸ್ಥೆಗಳು ಹಾಗೂ ಬೋಲ್ಟ್ ಹೆಸರಿಗೂ ಎಲ್ಲಿಲ್ಲದ ನಂಟಿದೆ ಅನ್ನಿಸುತ್ತಿದೆ. ಕಳೆದ ವರ್ಷವಷ್ಟೇ ತನ್ನ ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್ ಮಾದರಿ ಬೋಲ್ಟ್ ಮಾದರಿಯನ್ನು ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಅನಾವರಣಗೊಳಿಸಿತ್ತು.
ಪ್ರಸ್ತುತ ಕಾರು ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಹಾಗಿರಬೇಕೆಂದರೆ ಅತ್ತ ದೂರದ ಅಮೆರಿಕದಲ್ಲಿ ಬೋಲ್ಟ್ ಸದ್ದು ಮತ್ತೆ ಕೇಳಿಸಲಾರಂಭಿಸಿದೆ. ಆದರೆ ಈ ಬಾರಿ ಟಾಟಾದ್ದಲ್ಲ. ಬದಲಾಗಿ ಜನರಲ್ ಮೋಟಾರ್ಸ್‌ನ ಪ್ರಖ್ಯಾತ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಸರದಿ.

ಹೌದು, ಷೆವರ್ಲೆ ಸಂಸ್ಥೆಯು ಬೋಲ್ಟ್ ಎಂಬ ಹೊಸತಾದ ವಿದ್ಯುತ್ ಚಾಲಿತ ಕಾರಿನ ಕಾನ್ಸೆಪ್ಟ್ ಅನ್ನು 2015 ಉತ್ತರ ಅಮೆರಿಕ ಅಂತರಾಷ್ಟ್ರೀಯ ವಾಹನ ಪ್ರದರ್ಶನ ಮೇಳದಲ್ಲಿ ಪ್ರದರ್ಶಕ್ಕಿರಿಸಿದೆ.

ಭವಿಷ್ಯದ ವಾಹನವೆಂದೇ ಈ ಐದು ಬಾಗಿಲುಗಳ ಬೋಲ್ಟ್ ಕಾರನ್ನು ಷೆವಿ ಬಿಂಬಿಸಿದ್ದು, ಪ್ರತಿ ಚಾರ್ಜ್‌ಲನ್ಲೂ 200 ಮೈಲ್ ದೂರವನ್ನು ಗುರಿಯಿರಿಸಿಕೊಳ್ಳಲಾಗಿದೆ.

ಇನ್ನು ಆಧುನಿಕತೆಗೆ ತಕ್ಕಂತೆ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ. ಅಲ್ಲದೆ ನಿಜಕ್ಕೂ ಗೇಮ್ ಚೇಂಜರ್ ಎನಿಸಿಕೊಳ್ಳಲಿದೆ ಎಂದು ಸಂಸ್ಥೆಯು ವಿಶ್ವಾಸ ವ್ಯಕ್ತಪಡಿಸಿದೆ.

ಇತರ ಎಲೆಕ್ಟ್ರಿಕ್ ವಾಹನಗಿಂತಲೂ ಭಿನ್ನವಾಗಿ ಕಾರಿನ ಹೊರಮೈಯಲ್ಲಿ ಹೆಚ್ಚು ಆಕ್ರಮಣಕಾರಿ ಡಿಸೈನ್ ಕಾರು ಒಳಮೈಯಲ್ಲಿ ಹೆಚ್ಚಿನ ಲೆಗ್ ಹಾಗೂ ಹೆಡ್ ರೂಂಗೆ ಅವಕಾಶ ಕೊಡಲಾಗಿದೆ.

ಒಟ್ಟಿನಲ್ಲಿ ಷೆವರ್ಲೆ ಹೊಸ ಕಾನ್ಸೆಪ್ಟ್ ಕಾರು ಯಾವಾಗ ನಿರ್ಮಾಣ ಹಂತಕ್ಕೆ ತಲುಪಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಆದರೆ ಪರಿಸರ ಸ್ನೇಹಿ ಭವಿಷ್ಯದತ್ತ ತನ್ನ ಕೊಡುಗೆಯನ್ನು ಸಲ್ಲಿಸುವುದರಿಂದ ಮಾತ್ರ ಹಿಂದೆ ಸರಿದಿಲ್ಲ.


Click it and Unblock the Notifications








