ಬ್ಲಾ ಬ್ಲಾ ಕಾರ್ ಭಾರತಕ್ಕೆ ಎಂಟ್ರಿ

By Nagaraja

ಕೆಸರು ಹೇಳಿದಾಕ್ಷಣ ಇದೇನಿದು ಹೊಸ ಕಾರು ಅಂಥ ಗಾಬರಿಯಾಗಬೇಡಿರಿ. ವಿಷಯ ಏನೆಂದರೆ ಫ್ರಾನ್ಸ್‌ನ ಹೆಸರಾಂತ ಕಾರು ಹಂಚಿಕೆ 'ಬ್ಲಾ ಬ್ಲಾ ಕಾರ್' ಭಾರತದಲ್ಲೂ ತನ್ನ ಸೇವೆಯನ್ನು ಆರಂಭಿಸಿದೆ.

ವಿಶ್ವದ ಅತಿ ದೊಡ್ಡ ದೂರ ಪ್ರಯಾಣದ ಕಾರು ಹಂಚಿಕೆ ಫ್ಲ್ಯಾಟ್ ಫಾರ್ಮ್ ಆಗಿರುವ ಬ್ಲಾ ಬ್ಲಾ ಕಾರು 'ಸಿಟಿ-ಟು-ಸಿಟಿ' ಸಿದ್ಧಾಂತದಲ್ಲಿ ಕಾರ್ಯಾಚರಿಸುತ್ತದೆ. ಇದರೊಂದಿಗೆ ಯುರೋಪ್ ಹಾಗೂ ಅಮೆರಿಕದಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಿರುವ ಬ್ಲಾ ಬ್ಲಾ ಕಾರ್ ಭಾರತಕ್ಕೂ ಕಾಲಿಟ್ಟಿದೆ.

ಬ್ಲಾ ಬ್ಲಾ ಕಾರ್ ಸೇವೆ ಭಾರತಕ್ಕೆ ಎಂಟ್ರಿ

ದೇಶದಲ್ಲಿ ಅನೇಕ ಮಂದಿ ತಮ್ಮ ಜೀವಾನೋಪಾಯಕ್ಕಾಗಿ ಇನ್ನೊಂದು ನಗರಗಳನ್ನು ಆಶ್ರಯಿಸಿಕೊಂಡಿರುತ್ತಾರೆ. ಅಂತವರು ವಾರಂತ್ಯದಲ್ಲಿ ನಗರದಿಂದ ನಗರಕ್ಕೆ ಪಯಣಿಸುತ್ತಾರೆ. ಈಗ ಬ್ಲಾ ಬ್ಲಾ ಕಾರ್ ಅಂಥವರನ್ನು ಗುರುತಿಸಿಕೊಂಡು ಜೊತೆಯಾಗಿ ಪಯಣಿಸಲು ವೇದಿಕೆ ಸೃಷ್ಟಿಸಲಿದೆ. ಇದು ಹೆಚ್ಚು ಅನುಕೂಲದ ಜೊತೆಗೆ ಖರ್ಚು ಕಡಿಮೆ ಮಾಡಲು ಸಹಕಾರಿಯಾಗಲಿದೆ.

ಬ್ಲಾ ಬ್ಲಾ ಕಾರ್ ಸೇವೆ ಭಾರತಕ್ಕೆ ಎಂಟ್ರಿ

ಸಂಸ್ಥೆಯ ಪ್ರಕಾರ ಹೆಚ್ಚು ನಂಬಿಕೆಗ್ರಸ್ತ ಸೇವೆಯನ್ನು ಬ್ಲಾಬ್ಲಾ‌ಕಾರ್ ಒದಗಿಸುತ್ತಿದ್ದು, ಪ್ರಯಾಣಿಕರ ಸುರಕ್ಷತೆಗೂ ಆದ್ಯತೆ ಕೊಡಲಾಗುತ್ತದೆ. ಇದು ಮೂಲತ: ಕಾರು ಹಂಚಿಕೆ ಅಥವಾ ಪೂಲಿಂಗ್ ರೂಪದಲ್ಲಿ ಕೆಲಸ ಮಾಡಲಿದೆ.

ಬ್ಲಾ ಬ್ಲಾ ಕಾರ್ ಸೇವೆ ಭಾರತಕ್ಕೆ ಎಂಟ್ರಿ

ಉದಾಹರಣೆಗೆ ಬೆಂಗಳೂರಿನಿಂದ ಚೆನ್ನೈಗೆ ಯಾರಾದರೂ ತಮ್ಮ ಕಾರಿನಲ್ಲಿ ಒಬ್ಬನೇ ಪ್ರಯಾಣಿಸುತ್ತಿದ್ದರೆ ಬ್ಲಾ ಬ್ಲಾ ಕಾರ್‌ನಲ್ಲಿ ತಮ್ಮನ್ನು ನೊಂದಾಯಿಸಿಕೊಂಡರೆ ಇದೇ ಸಂದರ್ಭದಲ್ಲಿ ಪಯಣಿಸುವ ಇತರ ಪ್ರಯಾಣಿಕರು ನಿಮ್ಮ ಜೊತೆ ಸೇರಿಕೊಳ್ಳಲಿದ್ದಾರೆ.

ಬ್ಲಾ ಬ್ಲಾ ಕಾರ್ ಸೇವೆ ಭಾರತಕ್ಕೆ ಎಂಟ್ರಿ

ಜಗತ್ತಿನಾದ್ಯಂತ ಎರಡು ಮಿಲಿಯನ್ ಸದಸ್ಯರ ಜಾಲವನ್ನು ಹೊಂದಿರುವ ಬ್ಲಾಬ್ಲಾಕಾರ್, ಏಷ್ಯಾದಲ್ಲಿ ಮೊದಲ ಹಾಗೂ ಒಟ್ಟಾರೆಯಾಗಿ 14ನೇ ರಾಷ್ಟ್ರದ ರೂಪದಲ್ಲಿ ಭಾರತದಲ್ಲಿ ರಾರ್ಯಾಚರಣೆ ಆರಂಭಿಸಿದೆ.

ಹೇಗೆ ಕೆಲಸ ಮಾಡುತ್ತದೆ?

ಹೇಗೆ ಕೆಲಸ ಮಾಡುತ್ತದೆ?

ಬ್ಲಾಬ್ಲಾಕಾರ್ ಸೇವೆಗಾಗಿ ಆಂಡ್ರಾಯ್ಡ್ ಆಪ್ಲಿಕೇಷನ್ ಸಹ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ನಿಮ್ಮ ಪ್ರೊಫೈಲ್ ನೊಂದಾಯಿಸುವ ಮೂಲಕ ನಿಮಗೆ ತೆರಳಬೇಕಾಗಿರುವ ಸ್ಥಳವನ್ನು (ಎಲ್ಲಿಂದ-ಎಲ್ಲಿಗೆ) ಹುಡುಕುಬಹುದಾಗಿದೆ. ಅದೇ ರೀತಿ ನೀವು ಒಬ್ಬಂಟಿಯಾಗಿ ತೆರಳುವುದಾದ್ದಲ್ಲಿ ಪ್ರಯಾಣ ಸಮಯ ಮುಂತಾದ ವಿವರಗಳೊಂದಿಗೆ ಇತರರು ನಿಮ್ಮ ಜೊತೆ ಪಯಣ ಹಂಚಿಕೊಳ್ಳಲು ವಿನಂತಿಸಿಕೊಳ್ಳಬಹುದಾಗಿದೆ.

More from DriveSpark

Article Published On: Friday, January 16, 2015, 7:10 [IST]
English summary
BlaBlaCar will allow users to search for car owners in the same city and post their desired travel schedule online, like departure and arrival times, intended dates of the journey, and the like. Car owners can post their details as well, along with price per co-traveller.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+