ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

By Rahul Ts

ದೇವರ ನಾಡು ಎಂದೇ ಪ್ರಖ್ಯಾತಿಯಾಗಿರುವ ಕೇರಾಳದಲ್ಲಿ ಕಳೆದ ಹಲವು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಾರೀ ಮೊತ್ತದಲ್ಲಿ ಪ್ರವಾಹ ಸಂಭವಿಸಿರುವ ವಿಷಯ ತಿಳಿದಿರುವ ವಿಷಯ. ಸುಮಾರು 100 ವರ್ಷಗಳ ನಂತರ ಕಂಡ ಇಂತಹ ಮಳೆ ಹಲವಾರು ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ.

ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ಕೇರಳದಲ್ಲಿನ ಎಲ್ಲಾ ವಾಣಿಜ್ಯ ಕೈಗಾರಿಕೆಗಳು ನಷ್ಟಗೊಂಡಿದ್ದು, ಜೊತೆಗೆ ವಾಹನ ಕೈಗಾರಿಕೆ ಕೂಡಾ ನಷ್ಟಗೊಂಡಿದೆ. ಓಣಂ ಹಬ್ಬದ ಪ್ರಯುಕ್ತ ಮಾರಾಟಕ್ಕೆಂದು ಅಲ್ಲಿನ ಹಲವಾರು ಡೀಲರ್‍‍ಗಳ ಯಾರ್ಡ್‍ನಲ್ಲಿದ್ದ ಸುಮಾರು 1,000 ಕೋಟಿಗು ಹೆಚ್ಚು ಬೆಲೆಬಾಳುವ ಕಾರುಗಳು ನಾಶಗೊಂಡಿದೆ.

ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ಮೇಲೆ ಹೇಳಿರುವ ಹಾಗೆ ಕೇರಳದಲ್ಲಿ ಸುಮಾರು 100 ವರ್ಷಗಳಿಂದ ಕಂಡಿರದ ಈ ರೀತಿಯ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, 373ಕ್ಕು ಹೆಚ್ಚು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಹಲವರು ತಮ್ಮ ಮನೆಯನ್ನು ಕೂಡಾ ಕಳೆದುಕೊಂಡಿದ್ದು, ಅಲ್ಲದೇ ಪ್ರವಾಹದಿಂದ ರೂ. 20 ಸಾವಿರ ಕೋಟಿಯ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರವು ಹೇಳಿಕೊಂಡಿದೆ.

ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ದೇಶದ ದಕ್ಷಿಣ ಭಾಗದಲ್ಲಿರುವ ಆರು ರಾಜ್ಯಗಳಲ್ಲಿ ಕೇರಳ ಅತಿ ದೊಡ್ಡ ಕಾರು ಮಾರುಕಟ್ಟೆಯಾಗಿದ್ದು, ದಕ್ಷಿಣದಲ್ಲಿ ಮಾರಾಟವಾಗುವ ನಾಲ್ಕನೇ ಒಂದಕ್ಕಿಂತಲೂ ಹೆಚ್ಚಿನ ಮಾರಾಟವನ್ನು ಹೊಂದಿದೆ. ರಾಜ್ಯದ ಸುಮಾರು 350 ಡೀಲರ್‍ ಯಾರ್ಡ್‍‍ಗಳಲ್ಲಿ ಸಂಗ್ರಹವಾಗಿರುವ 17,500 ಕಾರುಗಳು ಪ್ರವಾಹದಿಂದ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ಕೇರಳದಲ್ಲಿ ಮಾರಾಟವಾದ ಕಾರಿನ ಸರಾಸರಿ ಬೆಲೆ 6 ಲಕ್ಷ ರೂ.ಗಳಾಗಿದ್ದು, ಡೀಲರ್‍‍ಗಳು ವಾಹನ ತಯಾರಕ ಸಂಸ್ಥೆಗಳಿಗೆ ಭಾರೀ ಮೊತ್ತದಲ್ಲಿ ಬಿಲ್ ನೀಡಬೇಕಿದೆ. ಏಕೆಂದರೆ ಧೀರ್ಘ ಕಾಲದ ವರೆಗೆ ಕಾರುಗಳು ನೀರಿನಿಂದ ತುಂಬಿಕೊಂಡಿರುವ ಕಾರಣ ಅವುಗಳ ರೀಸೇಲ್ ಮೌಲ್ಯವು ಅತಿ ಕಡಿಮೆ ಬೆಲೆಗೆ ತೂಗುತ್ತದೆ. ಆದಾಗ್ಯೂ, ವಾಹನ ತಯಾರಕ ಸಂಸ್ಥೆಗಳು ಡೀಲರ್‍‍ಗಳನ್ನು ತಮ್ಮ ನಷ್ಟಗಳಿಗೆ ಸರಿದೂಗಿಸುವ ಮೂಲಕ ಸಹಾಯ ಮಾಡಬಲ್ಲರು ಎಂಬ ಭರವಸೆ ಇದೆ.

ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ಕೇವಲ ಕಾರ್ ಡೀಲರ್‍‍ಗಳು ಮಾತ್ರವಲ್ಲದೇ ಅಲ್ಲಿನ ಟ್ರಕ್, ಬಸ್ಸ್, ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನಗಳನ್ನು ವಿಕ್ರಯಿಸುವ ಸುಮಾರು 700ಕ್ಕು ಹೆಚ್ಚು ಡೀಲರ್‍‍ಗಳ ಯಾರ್ಡ್‍‍ನಲ್ಲಿ ಇಂತಹ ಅನಾಹುತಗಳನ್ನು ಕಾಣಬಹುದಾಗಿದೆ.

ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ಪ್ರವಾಹದಿಂದಾಗಿ ಮುಂದಿನ ಮೂರು ತಿಂಗಳು ವಾಹನ ಮಾರಾಟದಲ್ಲಿ ಕಳಪೆ ಪ್ರದರ್ಶನವನ್ನು ಕೇರಳ ಕಾಣುವ ಸಾಧ್ಯತೆಗಳಿವೆ. ಏಕೆಂದರೆ ಬಹುಷಃ ಅಲ್ಲಿನ ಜನರಿಗೆ ತಮ್ಮ ಜೀವನವನ್ನೆ ಮತ್ತೆ ಕಟ್ಟಿಕೊಳ್ಳಲು ಸಮಯ ಬೇಕು. ಪ್ರವಾಹದ ದುರಂತಕ್ಕು ಮುನ್ನ ಕೇರಳ ರಾಜ್ಯದಲ್ಲಿ ವಾಹನಗಳ ಮಾರಟವು ಅಧಿಕವಾಗಿತ್ತು.

ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ಕೇರಳದ ಜನರು ಈಗೀಗ ಪ್ರವಾಹದಿಂದ ಸುಧಾರಿಸಿಕೊಳ್ಳುತ್ತಿದ್ದಾರೆ, ಆದರೆ ರಾಜ್ಯವು ಸಮೃದ್ಧಿಗೆ ಹಿಂದಿರುಗುವ ಮೊದಲು ಬಹಳಷ್ಟು ಕಾರ್ಯಗಳನ್ನು ಮಾಡಬೇಕಾಗಿದೆ. ಪ್ರವಾಹದಿಂದ ಉಂಟಾದ ನಷ್ಟಗಳಲ್ಲಿ ಕೆಲವನ್ನು ಹಿಂಪಡೆಯಲು ವಿಮೆಗಾರರಿಗೆ ನೋಡುವಾಗ ಕಾರು ಡೀಲರ್‍‍ಗಳಂತಹ ವ್ಯವಹಾರಗಳು ದೀರ್ಘಾವಧಿಯ ಮಾರ್ಗವನ್ನು ಹೊಂದಿವೆ.

ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಪ್ರಸ್ತುತ ವಿತರಕರು ಫೈಲ್ ಕ್ಲೈಮ್‍‍ಗಳಿಗೆ ಸಹಾಯ ಮಾಡುತ್ತಿದೆ. ಮತ್ತು ವಿಮಾ ಮೊತ್ತದ ಕನಿಷ್ಠ 75% ರಷ್ಟನ್ನು ಬಿಡುಗಡೆ ಮಾಡಲು ವಿಮೆದಾರರನ್ನು ಕೇಳಿಕೊಳ್ಳುತಿದೆ, ಫೆಡರೇಶನ್ನ ಕಾರ್ಯನಿರ್ವಾಹಕ ಮನಿ ಕಂಟ್ರೋಲ್‍ಗೆ ತಿಳಿಸಿದ್ದಾರೆ.

Most Read Articles

Kannada
Read more on auto news cars rain
English summary
Kerala floods have wiped out brand new cars worth Rs. 1,000 Crore.
Story first published: Tuesday, August 28, 2018, 9:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more