ಗೊ, ಗೊ ಪ್ಲಸ್ ಕಾರುಗಳಿಗೆ ದಟ್ಸನ್ ದೀಪಾವಳಿ ಆಫರ್
ನಿಸ್ಸಾನ್ ಮಾಲಿಕತ್ವದಲ್ಲಿರುವ ದಟ್ಸನ್ ಈ ದೀಪಾವಳಿ ಹಬ್ಬದ ವೇಳೆಯಲ್ಲಿ ತನ್ನ ಜನಪ್ರಿಯ ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಕಾಂಪಾಕ್ಟ್ ಬಹು ಬಳಕೆಯ ವಾಹನಗಳಿಗೆ (ಎಂಪಿವಿ) ವಿಶೇಷ ಆಫರುಗಳನ್ನು ಮುಂದಿಡುತ್ತಿದೆ. ಹಾಗೊಂದು ವೇಳೆ ದಟ್ಸನ್ ಕಾರುಗಳನ್ನು ಖರೀದಿಸಲು ಬಯಸಿದ್ದಲ್ಲಿ ಇದುವೇ ಸೂಕ್ತವಾದ ಸಮಯವಾಗಿರಲಿದೆ.
ದಟ್ಸನ್ ಗೊ ಹ್ಯಾಚ್ ಬ್ಯಾಕ್ ಆಫರ್
- 1.17 ಕೋಟಿ ರು.ಗಳ ವರೆಗೆ ಉಡುಗೊರೆ
- ಪ್ರತಿ ಟೆಸ್ಟ್ ಡ್ರೈವ್ ನಲ್ಲೂ ಕೊಡುಗೆ
- ಕಡಿಮೆ ಬಡಿದರ (ಶೇಕಡಾ 8.99)
- ನಗದು ಉಳಿತಾಯ
- ವಿಶೇಷ ಹಬ್ಬದ ಆವೃತ್ತಿಯ ಬೆಲೆ

ಅಂದ ಹಾಗೆ ದಟ್ಸನ್ ಗೊ ಹಾಗೂ ಗೊ ಪ್ಲಸ್ ಎಂಪಿವಿ ಮಾದರಿಗಳು 1198 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಯಿಂತ್ರಿಸಲ್ಪಡಲಿದ್ದು 104 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಫೈವ್ ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ. ಪ್ರಸ್ತುತ ಕಾರು ಪ್ರತಿ ಲೀಟರ್‌ಗೆ 20.61 ಕೀ.ಮೀ. ಮೈಲೇಜ್ ನೀಡಲಿದೆ.


Click it and Unblock the Notifications








