ಸದ್ದು ಮಾಡಿತೇ ದಟ್ಸನ್ ಗೊ ಕ್ರಾಸೋವರ್ ?
ಜಪಾನ್‌ನಲ್ಲಿ ನಡೆಯುತ್ತಿರುವ 2015 ಟೋಕಿಯೋ ಮೋಟಾರು ಶೋದಲ್ಲಿ ಅತಿ ನೂತನ ದಟ್ಸನ್ ಗೊ ಕ್ರಾಸ್ ಕಾನ್ಸೆಪ್ಟ್ ಭರ್ಜರಿ ಅನಾವರಣ ಕಂಡಿದೆ. ಇದು ಭವಿಷ್ಯದಲ್ಲಿ ಮಾತೃಸಂಸ್ಥೆ ನಿಸ್ಸಾನ್ ಮುಂದಾಳತ್ವದಲ್ಲಿ ಭಾರತಕ್ಕೂ ಆಮಮನವಾಗುವ ಸಾಧ್ಯತೆಗಳಿವೆ.
ನೂತನ ದಟ್ಸನ್ ಗೊ ಕ್ರಾಸ್ ಕಾನ್ಸೆಪ್ಟ್ ಕಾರು ಶೈಲಿ, ಸಾಹಸ ಹಾಗೂ ಮೋಜಿನ ಚಾಲನೆಗಾಗಿ ಹೆಚ್ಚು ಸೂಕ್ತವೆನಿಸಲಿದೆ. ಪ್ರಮುಖವಾಗಿಯೂ ಯುವ ಉತ್ಸಾಹಿ ಚಾಲಕರನ್ನು ಗುರಿಯಾಗಿರಿಸಿಕೊಂಡು ಇದನ್ನು ರಚಿಸಲಾಗಿದೆ.

ವಾರಂತ್ಯದ ಪಯಣ ಇಷ್ಟಪಡುವವರಿಗೆ ದಟ್ಸನ್ ನೂತನ ಕ್ರಾಸೋವರ್ ಕಾರು ನೆಚ್ಚಿನ ಆಯ್ಕೆಯಾಗಿರಲಿದೆ. ಈ ಮೂಲಕ ದಟ್ಸನ್ ಶ್ರೇಣಿಯ ವಾಹನಗಳಿಗೆ ಮಗದೊಂದು ಕಾರಿನ ಸೇರ್ಪಡೆಯಾಗಲಿದೆ.

ಗೊ ಹ್ಯಾಚ್ ಬ್ಯಾಕ್, ಗೊ ಪ್ಲಸ್ ಮೂರು ಸಾಲಿನ ಕಾಂಪಾಕ್ಟ್ ಎಂಪಿವಿ ಮಾದರಿಗಳನ್ನು ಪರಿಚಯಿಸಿರುವ ದಟ್ಸನ್ ಸಂಸ್ಥೆಯು ಪ್ರಮುಖವಾಗಿಯೂ ಬೆಳೆದು ಬರುತ್ತಿರುವ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಳ್ಳುತ್ತಿದೆ.

ಆಕರ್ಷಕ ಹೂರಮೈ, ಫ್ರಂಟ್ ಗ್ರಿಲ್, ಎಲ್ ಇಡಿ ಹೆಡ್ ಲೈಟ್ , ಎಲ್ ಇಡಿ ಟೈಲ್ ಲೈಟ್ ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ದಿಟ್ಟ ನೋಟವನ್ನು ಪ್ರದಾನ ಮಾಡುತ್ತಿದೆ.

ದಟ್ಸನ್ ಗೊ ಪ್ಲಸ್ ಗಿಂತಲೂ ಹೆಚ್ಚಿನ ಗ್ರೌಂಡ್ ಕ್ಲಿಯರನ್ಸ್ ಹೊಂದಿರಲಿರುವ ದಟ್ಸನ್ ಗೊ ಕ್ರಾಸ್ ಕಾನ್ಸೆಪ್ಟ್ ಫೋರ್ ವೀಲ್ ಡ್ರೈವಿಂಗ್ ವ್ಯವಸ್ಥೆಯಲ್ಲೂ ಬರಲಿದ್ದು, ಗ್ರಾಹಕರಿಗೆ ಪರಿಪೂರ್ಣ ಚಾಲನಾ ಅನುಭವ ನೀಡಲಿದೆ.

ಅಂತಿಮವಾಗಿ 1.2 ಲೀಟರ್ ಇನ್ ಲೈನ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ದಟ್ಸನ್ ಗೊ ಕ್ರಾಸ್ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆಯಲಿದೆ.


Click it and Unblock the Notifications








