ದಟ್ಸನ್ ಗೊ ಕಾರಿಗೆ ಬಂತು ನೋಡಿ ಸುರಕ್ಷಾ ವಲಯ
ಇದುವರೆಗೆ ದಟ್ಸನ್ ಕಾರುಗಳ ಭದ್ರತೆಯ ಬಗ್ಗೆ ಪ್ರಶ್ನೆ ಮಾಡಲಾಗುತ್ತಿತ್ತು. ಇದಕ್ಕೆ ತಕ್ಕ ಉತ್ತರದೊಂದಿಗೆ ಮುಂದೆ ಬಂದಿರುವ ಈ ಬಜೆಟ್ ಬ್ರಾಂಡ್ ನೂತನ ಗೊ ಕಾರಿಗೆ ಸುರಕ್ಷಾ ವಲಯವನ್ನು ಏರ್ಪಡಿಸಿದೆ.
ಹೌದು, ಮುಂಬರುವ ದಟ್ಸನ್ ಗೊ ಕಾರು ಎಬಿಎಸ್ ಹಾಗೂ ಏರ್ ಬ್ಯಾಗ್ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ. ಪ್ರಸ್ತುತ ಸೇವೆಯು ಗೊ ಪ್ಲಸ್ ಎಂಪಿವಿ ಕಾರಿಗೂ ಲಭ್ಯವಾಗಲಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕೆಲವು ತಿಂಗಳುಗಳ ಹಿಂದೆ ಯುರೋಪ್ ನಲ್ಲಿ ನಡೆಸಲಾದ ಅಪಘಾತ ಪರೀಕ್ಷೆಯಲ್ಲಿ (ಯುರೋ ಎನ್ ಸಿಪಿಎ) ದಟ್ಸನ್ ಗೊ ಹ್ಯಾಚ್ ಬ್ಯಾಕ್ ಶೂನ್ಯ ಅಂಕ ಸಂಪಾದಿಸಿತ್ತು. ತದಾ ಬೆನ್ನಲ್ಲೇ ನಿಸ್ಸಾನ್ ಗೆ ಪತ್ರ ಬರೆದಿದ್ದ ತಂಡವು ದಟ್ಸನ್ ಗೊ ಕಾರಿನ ನಿರ್ಮಾಣವನ್ನು ಸ್ಧಗಿತಗೊಳಿಸುವಂತೆ ವಿನಂತಿಸಿತ್ತು.
ಈಗ ದಟ್ಸನ್ ಕಾರುಗಳಿಗೆ ಎಬಿಎಸ್ ಹಾಗೂ ಏರ್ ಬ್ಯಾಗ್ ಸುರಕ್ಷತೆಗಳ ಆಗಮನದೊಂದಿಗೆ, ಕಾರಿನ ಗುಣಮಟ್ಟತೆಯೊಂದಿಗೆ ಮಾರಾಟವು ವೃದ್ಧಿಸುವ ನಿರೀಕ್ಷೆಯಿದೆ. ಇದು ಗ್ರಾಹಕರ ಪಾಲಿಗೆ ಅತಿ ಹೆಚ್ಚು ನಿರಾಳತೆಯನ್ನುಂಟು ಮಾಡಿದೆ.


Click it and Unblock the Notifications