ರೆಡಿ ಗೊ ಮುಂಚಿತವಾಗಿ ದಟ್ಸನ್ ಗೊ ಕ್ರಾಸ್ ಭಾರತಕ್ಕೆ
ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆ ದಟ್ಸನ್, ಅತಿ ನೂತನ ರೆಡಿ ಗೊ ಸಣ್ಣ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಆದರೆ ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ಇದಕ್ಕೂ ಮೊದಲು ಗೊ ಕ್ರಾಸ್ ಕ್ರಾಸೋವರ್ ದೇಶದಲ್ಲಿ ಬಿಡುಗಡೆಯಾಗುವ ಸಂಭವವಿದೆ.
Also Read: ದಟ್ಸನ್ ರೆಡಿ ಗೊ ಸಣ್ಣ ಕಾರು ಆಗಮನಕ್ಕೆ ಸಿದ್ಧ; ನೀವು ರೆಡಿನಾ?
ನಿಮಗೆಲ್ಲರಿಗೂ ತಿಳಿದಿರುವಂತೆಯೇ 2015 ಟೋಕಿಯೋ ಮೋಟಾರು ಶೋದಲ್ಲಿ ದಟ್ಸನ್ ಗೊ ಕ್ರಾಸ್ ಕಾನ್ಸೆಪ್ಟ್ ಕಾರು ಭರ್ಜರಿ ಪ್ರದರ್ಶನ ಕಂಡಿತ್ತು. ಇವೆಲ್ಲವೂ ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳ ಆಗಮನಕ್ಕೆ ಸಹಕಾರಿಯಾಗಲಿದೆ.

ನಿಮ್ಮ ಮಾಹಿತಿಗಾಗಿ ಗೊ ಹ್ಯಾಚ್ ಬ್ಯಾಕ್ ತಳಹದಿಯ್ಲಲೇ ಗೊ ಕ್ರಾಸ್ ನಿರ್ಮಾಣವಾಗಲಿದೆ. ಇದೇ ತಳಹದಿಯಲ್ಲಿ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ ನಿರ್ಮಾಣವಾಗಿರುವುದು ನೀವಿಲ್ಲಿ ಗಮನಿಸಬಹುದಾಗಿದೆ.

ಇನ್ನೊಂದೆಡೆ ದಟ್ಸನ್ ರೆಡಿ ಗೊ ನಿಸ್ಸಾನ್-ರೆನೊ ಸಂಸ್ಥೆಯ ಸಿಎಂಎಫ್-ಎ ತಳಹದಿಯಲ್ಲಿ ನಿರ್ಮಾಣವಾಗಲಿದೆ. ಇದೇ ತಳಹದಿಯಲ್ಲಿ ಬಿಡುಗಡೆಯಾಗಿದ್ದ ರೆನೊ ಕ್ವಿಡ್ ಭಾರಿ ಯಶಸ್ಸನ್ನು ಕಂಡಿತ್ತಲ್ಲದೆ ಮಾರುತಿ ಆಲ್ಟೊಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಮೂಡಿಬಂದಿದೆ.

ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲೂ ರೆಡಿ ಗೊ ಕ್ರಾಸ್ ಕ್ರಾಸೋವರ್ ಕಾರು ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ. ಭಾರತದಲ್ಲಿ ಉಪಯುಕ್ತ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿಂದ್ದು, ಈ ನಿಟ್ಟಿನಲ್ಲಿ ಗೊ ಕ್ರಾಸ್ ನಿರ್ಣಾಯಕವೆನಿಸಲಿದೆ.

ಆಕರ್ಷಕ ಹೂರಮೈ, ಫ್ರಂಟ್ ಗ್ರಿಲ್, ಎಲ್ ಇಡಿ ಹೆಡ್ ಲೈಟ್ , ಎಲ್ ಇಡಿ ಟೈಲ್ ಲೈಟ್ ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ದಿಟ್ಟ ನೋಟವನ್ನು ಪ್ರದಾನ ಮಾಡುತ್ತಿದೆ.

ಅಂತಿಮವಾಗಿ 1.2 ಲೀಟರ್ ಇನ್ ಲೈನ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ದಟ್ಸನ್ ಗೊ ಕ್ರಾಸ್ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆಯಲಿದೆ.


Click it and Unblock the Notifications








