ರೆಡೊ ಕ್ವಿಡ್ ತಳಹದಿಯಲ್ಲಿ ಮಗದೊಂದು ಸಣ್ಣ ಕಾರು ಅಭಿವೃದ್ಧಿ

By Nagaraja

ಇದೀಗಷ್ಟೇ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ತನ್ನ ಬಹುನಿರೀಕ್ಷಿತ ಕ್ವಿಡ್ ಸಣ್ಣ ಕಾರನ್ನು ಅನಾವರಣಗೊಳಿಸಿದೆ. ಇದಾದ ಬೆನ್ನಲ್ಲೇ ಮಗದೊಂದು ಖುಷಿ ಸುದ್ದಿ ಬಂದಿದ್ದು, ರೆನೊ ಕ್ವಿಡ್ ತಳಹದಿಯಲ್ಲೇ ಮಗದೊಂದು ಸಣ್ಣ ಕಾರು ಅಭಿವೃದ್ಧಿಗೊಳ್ಳಲಿದೆ.

ಅದುವೇ ದಟ್ಸನ್. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಜಪಾನ್‌ನ ನಿಸ್ಸಾನ್ ಸಂಸ್ಥೆಯ ಬಜೆಟ್ ಬ್ರಾಂಡ್ ದಟ್ಸನ್ ಆಗಿದೆ. ಈಗ ರೆನೊ-ನಿಸ್ಸಾನ್ ಸಿಎಂಎಫ್-ಎ ತಳಹದಿಯಲ್ಲಿ ಹೊಸ ಮಾದರಿಗಳನ್ನು ಅಭಿವೃದ್ಧಿಗೊಳಿಸುತ್ತಿದೆ.

datsun redi go

ನಿಮ್ಮ ಮಾಹಿತಿಗಾಗಿ ದಟ್ಸನ್ ರೆಡಿ ಗೊ ಕಾನ್ಸೆಪ್ಟ್ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿತ್ತು. ಮಗದೊಂದು ವರದಿಗಳ ಪ್ರಕಾರ ಇದು ರೆನೊ ಕ್ವಿಡ್ ಗಿಂತಲೂ ಅಗ್ಗವೆನಿಸಲಿದೆ.

ಈ ಬಾರಿ ಯಾವುದೇ ಲಾಂಛನ ಹಂಚಿಕೆ ಪ್ರಕ್ರಿಯೆಗೆ ಈ ಜಪಾನ್ ಹಾಗೂ ಫ್ರಾನ್ಸ್ ಮೂಲದ ಸಂಸ್ಥೆಗಳು ಮುಂದಾಗುತ್ತಿಲ್ಲ. ಬದಲಾಗಿ ಸಮಾನವಾದ ತಳಹದಿಯಲ್ಲಿ ಎರಡು ವಿಭಿನ್ನ ಬ್ರಾಂಡ್ ಗಳನ್ನು ನಿರ್ಮಿಸಲಿದೆ. ಈ ಎರಡು ಮಾದರಿಗಳು ಚೆನ್ನೈ ಘಟಕದಲ್ಲಿ ನಿರ್ಮಾಣವಾಗಲಿದ್ದು, ಇದರಿಂದ ಸ್ಪರ್ಧಾತ್ಮಕ ಬೆಲೆ ಕಾಪಾಡಲು ನೆರವಾಗಲಿದೆ."

renault kwid

ವಿನ್ಯಾಸದ ವಿಚಾರದಲ್ಲಿ ಎರಡು ಮಾದರಿಗಳು ವಿಭಿನ್ನತೆಯನ್ನು ಕಾಪಾಡಿಕೊಳ್ಳಲಿದೆ. ಇದು ಗ್ರಾಹಕರ ಪಾಲಿಗೆ ಸಮಾಧಾನಕರ ಸಂಗತಿಯಾಗಿದೆ. ಹಾಗಿದ್ದರೂ ಸಮಾನ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ. ಇವೆರಡು ಮಾದರಿಗಳಲ್ಲಿ 800 ಸಿಸಿ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ. ಇನ್ನು ತಮ್ಮ ರೇಂಜ್ ಗೆ ತಕ್ಕಂತೆ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

More from DriveSpark

Article Published On: Friday, May 22, 2015, 7:14 [IST]
English summary
Datsun Redi-Go To Be Based On CMF-A Platform Post Renault KWID
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+