ಡಿಸಿ ಅವಂತಿ 310 ವಿಶೇಷ ಆವೃತ್ತಿ ರಸ್ತೆಗಿಳಿಯಲು ಸಜ್ಜು
ಸ್ವದೇಶಿ ನಿರ್ಮಿತ ಕ್ರೀಡಾ ಕಾರು 'ಡಿಸಿ ಅವಂತಿ' ಈಗ ಹೊಸ ಮೈಬಣ್ಣದಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗುತ್ತಿದೆ. ವಾಹನ ಮೂಲಗಳಿಂದ ಬಂದಿರುವ ವರದಿಗಳ ಪ್ರಕಾರ ಮುಂದಿನ ವರ್ಷ ಎಪ್ರಿಲ್ ವೇಳೆಯಾಗುವಾಗ 'ಡಿಸಿ ಅವಂತಿ 310' ವಿಶೇಷ ಆವೃತ್ತಿಯು ಬಿಡುಗಡೆಯಾಗಲಿದೆ. ಈ ಸಂಬಂಧ ಆಕರ್ಷಕ ಚಿತ್ರಗಳನ್ನು ದೇಶದ ಅತಿ ದೊಡ್ಡ ವಾಹನ ಮಾರ್ಪಾಡು ಸಂಸ್ಥೆಯಾಗಿರುವ ದಿಲೀಪ್ ಚಾಬ್ರಿಯಾ ನೇತೃತ್ವದ ಡಿಸಿ ಡಿಸೈನ್ ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 44 ಲಕ್ಷ ರು.(ದೆಹಲಿ ಎಕ್ಸ್ ಶೋ ರೂಂ)
ಸರಾಸರಿ ಭಾರತೀಯನ ಆರ್ಥಿಕ ಸ್ಥಿತಿಯನ್ನು ಕೂಲಂಕುಷವಾಗಿ ತುಲನೆ ಮಾಡಿ ನೋಡಿದಾಗ ಕೋಟಿ ಗಟ್ಟಲೆ ಬೆಲೆ ಬಾಳುವ ಕ್ರೀಡಾ ಕಾರು ಖರೀದಿಸುವುದು ಅಸಾಧ್ಯದ ಮಾತು. ಹಾಗಿರಬೇಕಾದರೆ ಹೊಸ ನಿರೀಕ್ಷೆಯನ್ನು ಹುಟ್ಟಿಸಿರುವ ಡಿಸಿ ಡಿಸೈನ್, ಭಾರತೀಯರಿಂದಲೂ ಕ್ರೀಡಾ ಕಾರು ಖರೀದಿ ಸಾಧ್ಯ ಎಂಬ ದಿಟ್ಟ ನಿಲುವಿನೊಂದಿಗೆ ಸ್ವದೇಶ ಬಟೆಜ್ ಕ್ರೀಡಾ ಕಾರು ನಿರ್ಮಾಣಕ್ಕೆ ಮುಂದಾಗಿತ್ತು. ಇವೆಲ್ಲದರ ಭವಿಷ್ಯತ್ ಪರಿಣಾಮವೇ ಆಕರ್ಷಕ ಡಿಸಿ ಅವಂತಿ ರಸ್ತೆಗೆ ಬಂದು ನಿಂತಿದೆ.

ಡಿಸಿ ಅವಂತಿ ಕ್ರೀಡಾ ಕಾರು 35 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತಿದೆ. ಈಗ ಎಂಟ್ರಿ ಕೊಡಲಿರುವ ಅವಂತಿ ವಿಶೇಷ ಆವೃತ್ತಿಯೂ ಇದಕ್ಕಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ. ಇದಕ್ಕೆ ತಕ್ಕುದಾಗಿ ಅನೇಕ ವೈಶಿಷ್ಟ್ಯಗಳನ್ನು ಪಡೆಯಲಿದೆ.

ನಿಸ್ಸಂಶವಾಗಿಯೂ ಈ ಸೀಮಿತ ಆವೃತ್ತಿಯು ಕೇವಲ 31 ಯುನಿಟ್ ಗಳಷ್ಟು ಮಾತ್ರ ನಿರ್ಮಾಣವಾಗಲಿದೆ. ಅಲ್ಲದೆ ಹೆಚ್ಚು ಕಾರ್ಬರ್ ಫೈಬರ್ ಪರಿಕರಗಳನ್ನು ಬಳಕೆ ಮಾಡಲಾಗಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದರಲ್ಲಿ ರೆನೊದಿಂದ ಆಮದು ಮಾಡಲಾದ 2.0 ಲೀಟರ್ ಪೆಟ್ರೋಲ್ ಎಂಜಿನ್ ಬಳಕೆ ಮಾಡಲಾಗಿದೆ.

ಇದು ಹೆಚ್ಚು ಶಕ್ತಿಶಾಲಿ 2.0 ಲೀಟರ್ ಎಂಜಿನ್ ಪಡೆದುಕೊಂಡಿದ್ದು, 310 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಿಂದಿನ ಮಾದರಿಯು 250 ಅಶ್ವಶಕ್ತಿ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿತ್ತು. ಇದೇ ಕಾರಣಕ್ಕಾಗಿ '310' ಹೆಸರನ್ನು ಕಾರಿಗಿಡಲಾಗಿದೆ.

ಹಾಗೆಯೇ ಆರು ಸ್ಪೀಡ್ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ ಕಂಡುಬರಲಿದೆ. ಇದನ್ನು ಡಿಸಿ ಡಿಸೈನ್ ಗರಡಿಯಲ್ಲೇ ಅಭಿವೃದ್ಧಿಪಡಿಸಲಾಗಿದೆ.

ಉಳಿದಂತೆ ಎಲ್‌ಇಡಿ ಹೆಡ್ ಮತ್ತು ಟೈಲ್ ಲೈಟ್ ಗಳು, ಹೆಚ್ಚು ಏರೋಡೈನಾಮಿಕ್ ವಿನ್ಯಾಸ, ಕಾರಿನೊಳಗೆ ಅಲ್ಕಂಟರಾ ಲೆಥರ್ ಸ್ಪೋರ್ಟ್ ಸೀಟು, ಟಿಎಫ್‌ಟಿ ಇನ್ಸ್ಟ್ರುಮೆಂಟ್ ಡಿಸ್‌ಪ್ಲೇ ಮುಂತಾದ ವೈಶಿಷ್ಟ್ಯಗಳು ಕಂಡುಬರಲಿದೆ.

ಹೊಸ ಡಿಸಿ ಅವಂತಿ 310 ಮೂರು ವಿಶೇಷ ಬಣ್ಣಗಳಲ್ಲಿ ದೊರಕಲಿದೆ. ಅವುಗಳೆಂದರೆ, ಗ್ರೇ ಜೊತೆ ಗ್ರೀನ್, ವೈಟ್ ಜೊತೆ ಬ್ಲೂ, ಮ್ಯಾಟ್ ಗ್ರೇ ಜೊತೆ ಆರೆಂಜ್.

ಒಟ್ಟಿನಲ್ಲಿ ದೆಹಲಿ ಎಕ್ಸ್ ಶೋ ರೂಂ 44 ಲಕ್ಷ ರು.ಗಳಷ್ಟು ಬೆಲೆ ಬಾಳುವ ಸ್ವದೇಶಿ ನಿರ್ಮಿತ ಈ ಕಾರು 2016ನೇ ಸಾಲಿನಲ್ಲಿ ಮಾರುಕಟ್ಟೆ ಪ್ರವೇಶವಾಗಲಿದೆ.

ಲಂಡನ್ ರಸ್ತೆಯಲ್ಲಿ 'ಮೇಡ್ ಇನ್ ಇಂಡಿಯಾ' ಸ್ಪೋರ್ಟ್ಸ್ ಕಾರಿನ ಕರಾಮತ್ತು! ಮುಂದಕ್ಕೆ ಓದಿ


Click it and Unblock the Notifications








