ಭಾರತದ ಚೊಚ್ಚಲ ಕ್ರೀಡಾ ಕಾರು ಬಿಡುಗಡೆ; ಬೆಲೆ ಎಷ್ಟು ಗೊತ್ತಾ?
ಭಾರತದ ಚೊಚ್ಚಲ ಕ್ರೀಡಾ ಕಾರೆಂಬ ಗೌರವಕ್ಕೆ ಪಾತ್ರವಾಗಿರುವ ಖ್ಯಾತ ವಿನ್ಯಾಸ ಮಾರ್ಪಾಡು ಸಂಸ್ಥೆ ಡಿಸಿ ಡಿಸೈನ್ ನಿರ್ಮಿಸಿರುವ ಅತಿ ನೂತನ ಅವಂತಿ ಕ್ರೀಡಾ ಕಾರು ದೇಶದಲ್ಲಿ ಭರ್ಜರಿ ಬಿಡುಗಡೆ ಕಂಡಿದೆ.
ಬೆಲೆ ಮಾಹಿತಿ: 35.93 ಲಕ್ಷ ರು. (ಎಕ್ಸ್ ಶೋ ರೂಂ ಪುಣೆ)
ನೀವೆಲ್ಲ ಇದುವರೆಗೆ ಇಟಲಿ ಮೂಲದ ಸೂಪರ್ ಕಾರುಗಳನ್ನು ನೋಡಿರಬಹುದು. ಈಗ ಈ ಸಾಲಿನಲ್ಲಿ ಮೇಡ್ ಇನ್ ಇಂಡಿಯಾ ಹೆಮ್ಮೆಯಿಂದಲೇ ಹೇಳಬಹುದಾದ ಡಿಸಿ ಡಿಸೈನ್ ನಿರ್ಮಿತ ಅವಂತಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಡಿಸಿ ಡಿಸೈನ್ ಮಾಲಿಕ ಹಾಗೂ ಖ್ಯಾತ ವಿನ್ಯಾಸಗಾರ ದಿಲೀಪ್ ಛಾಬ್ರಿಯಾ, "ದೇಶದ ಯುವ ಮನಸ್ಕರನ್ನು ಗುರಿಯಾಗಿರಿಸಿಕೊಂಡು ಅವಂತಿ ಕ್ರೀಡಾ ಕಾರನ್ನು ತಯಾರಿಸಲಾಗಿದೆ. ಸಂಪೂರ್ಣ ದೇಶಿಯವಾಗಿ ಕಾರನ್ನುಅಭಿವೃದ್ಧಿಪಡಿಸಲು ಸಾಧ್ಯವಾಗಿರುವುದರಲ್ಲಿ ಹೆಮ್ಮೆಯಿದೆ" ಎಂದಿದ್ದಾರೆ.

ಮಾತು ಮುಂದುವರಿಸಿದ ಸಾಮಾನ್ಯವಾಗಿ ಯುವ ಜನಾಂಗ ಕ್ರೀಡಾ ಕಾರನ್ನು ಖರೀದಿ ಮಾಡುವುದು ತುಂಬಾನೇ ಕಷ್ಟ. ಯಾಕೆಂದರೆ ಇವುಗಳು ಕೋಟಿಗಟ್ಟಲೆ ದುಬಾರಿಯೆನಿಸುತ್ತದೆ. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಡಿಸಿ ಅವಂತಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಆಯ್ಕೆಯಾಗಿರಲಿದೆ ಎಂದಿದ್ದಾರೆ.

ಡಿಸಿ ಅವಂತಿಯಲ್ಲಿ ರೆನೊದಿಂದ ಆಮದು ಮಾಡಲಾಗಿರುವ 2.0 ಲೀಟರ್ ಟರ್ಬೊ ಯುರೋ 5 ಮಾನ್ಯತೆಯ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದ್ದು, ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ. ಅಲ್ಲದೆ 340 ತಿರುಗುಬಲದಲ್ಲಿ 250 ಅಶ್ವಶಕ್ತಿ ಉತ್ಪಾದಿಸಲಿದೆ.

ಡಿಸಿ ಅವಂತಿ 6 ಸಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗರಿಷ್ಠ 200 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ವಿಶಿಷ್ಟತೆ
- ಪ್ರೀಮಿಯಂ ಎಕ್ಸ್ ಟೀರಿಯರ್ ಕಲರ್,
- 20 ಇಂಚುಗಳ ಅಲಾಯ್ ವೀಲ್,
- ಗರಿಷ್ಠ ಸ್ಥಳಾವಕಾಶ,
- ಗ್ರಾಹಕರ ಬಯಕೆಗೆ ತಕ್ಕಂತೆ ಕಸ್ಟಮೈಸ್ಡ್ ಮಾಡುವ ಅವಕಾಶ,
- ರೋಲ್ ಕೇಜ್ ಡಿಸೈನ್ ಬಾಡಿ,
- ಉನ್ನತ ಗುಣಮಟ್ಟದ ಇಟಲಿಯನ್ ರಬ್ಬರ್,
- ಎಲ್ಲ ಚಕ್ರಗಳಿಗೂ ಎಬಿಎಸ್,
- ಸುರಕ್ಷತೆ ಹಾಗೂ ನಿರ್ವಹಣೆಯ ಸರಿಯಾದ ಹೊಂದಾಣಿಕೆ
- ಹಗುರ ಹಾಗೂ ಐಷಾರಾಮಿ ರಿವರ್ಸ್ ಕ್ಯಾಮೆರಾ,
- ಬೈ ಹ್ಯಾಲಗನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
- ದೂರವ್ಯಾಪ್ತಿಯ ವರೆಗೂ ಗೋಚರತೆ,
- ಅದ್ಭುತ ಗ್ರೌಂಡ್ ಕ್ಲಿಯರನ್ಸ್,
- 4550 ಎಂಎಂ ಉದ್ದ,
- 1965 ಎಂಎಂ ಅಗಲ,
- 1200 ಎಂಎಂ ಎತ್ತರ
- ಚಂಕ್ರಾಂತರ - 2,700 ಎಂಎಂ

ವಿಶಿಷ್ಟತೆ

ಆಯಾಮ
ಬಣ್ಣಗಳು: ಕೆಂಪು, ಬಿಳಿ, ಬೆಳ್ಳಿ


Click it and Unblock the Notifications








