ಲಂಡನ್ ರಸ್ತೆಯಲ್ಲಿ 'ಮೇಡ್ ಇನ್ ಇಂಡಿಯಾ' ಸ್ಪೋರ್ಟ್ಸ್ ಕಾರಿನ ಕರಾಮತ್ತು!
ಆಟೋಮೊಬೈಲ್ ಕ್ಷೇತ್ರ ಬದಲಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಕೂಡಾ ತನ್ನ ಸಾನಿಧ್ಯವನ್ನು ವ್ಯಕ್ತಪಡಿಸುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ 'ಮೇಡ್ ಇನ್ ಇಂಡಿಯಾ' ಸ್ಪೋರ್ಟ್ಸ್ ಕಾರೊಂದು ಲಂಡನ್ ಬೀದಿಗಳಲ್ಲಿ ರಾಜಾರೋಷವಾಗಿ ಸಂಚರಿಸಿದೆ.
Also Read: ದೇಶದ ಚೊಚ್ಚಲ ಕ್ರೀಡಾ ಕಾರು ಬಿಡುಗಡೆ
ಆ ಕಾರು ಯಾವುದೇ ಗೊತ್ತೇ? ಸಂಶಯವೇ ಬೇಡ. ದೇಶದ ಪ್ರಖ್ಯಾತ ವಿನ್ಯಾಸ ಮಾರ್ಪಾಡು ಸಂಸ್ಥೆಯಾಗಿರುವ ಡಿಸಿ ಡಿಸೈನ್ ನಿರ್ಮಿತ ದೇಶದ ಚೊಚ್ಚಲ ಕ್ರೀಡಾ ಕಾರು 'ಡಿಸಿ ಅವಂತಿ'.

ದಿಲೀಪ್ ಚಾಬ್ರಿಯಾ ಒಡೆತನದ ಡಿಸಿ ಡಿಸೈನ್ ಇತ್ತೀಚೆಗಷ್ಟೇ ಅವಂತಿ ಸ್ಪೋರ್ಟ್ಸ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದು 35 ಲಕ್ಷ ರು.ಗಳ (ಎಕ್ಸ್ ಶೋರೂಂ) ಬೆಲೆ ಪರಿಧಿಯನ್ನು ಹೊಂದಿದೆ.

ಬಿಡುಗಡೆಗೂ ಮುನ್ನವೇ ಡಿಸಿ ಅವಂತಿ ಕ್ರೀಡಾ ಕಾರಿಗೆ ಅನೇಕ ಮುಂಗಡ ಬುಕ್ಕಿಂಗ್ಸ್ ಗಳು ಲಭಿಸತೊಡಗಿದ್ದವು. ಪ್ರಸ್ತುತ ಮಹಾರಾಷ್ಟ್ರ ಲೈಸನ್ಸ್ ಪ್ಲೇಟ್ ಹೊಂದಿರುವ ಈ ಕಾರು ಲಂಡನ್ ನಲ್ಲಿ ಪ್ರತ್ಯಕ್ಷವಾಗಿದೆ.

2.0 ಲೀಟರ್ ಟರ್ಬೊಚಾರ್ಜ್ಡ್ ಯುರೋ 5 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಡಿಸಿ ಅವತಿ 365 ಎನ್‌ಎಂ ತಿರುಗುಬಲದಲ್ಲಿ 250 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಗಂಟೆಗೆ ಗರಿಷ್ಠ 200 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಡಿಸಿ ಅವಂತಿ ವಿದೇಶದಲ್ಲೂ ಹೆಚ್ಚಿನ ಜನಪ್ರಿಯತೆ ಪಡೆಯಲಿದೆಯೇ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಫೆರಾರಿ, ಲಂಬೋರ್ಗಿನಿ ಅಥವಾ ಪೋರ್ಷೆ ಸೂಪರ್ ಕಾರುಗಳನ್ನು ಹೋಲಿಸಿದಾಗ ಡಿಸಿ ಅವಂತಿ ಕಡಿಮೆ ಬಜೆಟ್ ನಲ್ಲಿ ಬಿಡುಗಡೆಯಾಗಿರುವ ಕ್ರೀಡಾ ಕಾರಾಗಿದೆ.
ವಿಡಿಯೋ ವೀಕ್ಷಿಸಿ


Click it and Unblock the Notifications








