ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

By Nagaraja

ಡಿಸಿ ಅವಂತಿ - ಭಾರತದ ಮೊತ್ತ ಮೊದಲ ಕ್ರೀಡಾ ಕಾರು. ದೆಹಲಿ ತಳಹದಿಯ ಖ್ಯಾತ ವಿನ್ಯಾಸಗಾರ ದಿಲೀಪ್ ಚಾಬ್ರಿಯಾ ಒಡೆತನದ ಡಿಸಿ ಡಿಸೈನ್ ಕಸ್ಟಮೈಸ್ಡ್ ಸಂಸ್ಥೆಯು ಇದನ್ನು ನಿರ್ಮಿಸಿದೆ.

ಅತಿ ಶೀಘ್ರದಲ್ಲೇ ಮಾರುಕಟ್ಟೆ ತಲುಪಲಿರುವ ಡಿಸಿ ಅವಂತಿ ಸೂಪರ್ ಕಾರಿನ ಆಕರ್ಷಕ ಒಳಭಾಗದ ಎಕ್ಸ್ ಕ್ಲೂಸಿವ್ ಚಿತ್ರಗಳು ಈಗಷ್ಟೇ ಬಿಡುಗಡೆಯಾಗಿದೆ. ಈ ಇವೆಲ್ಲದರ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ.

ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

ಡಿಸಿ ಅವಂತಿ ಸೂಪರ್ ಕಾರಿನ ಒಳಭಾಗದಲ್ಲಿ ಹಳದಿ/ಕಪ್ಪು ವರ್ಣದ ಡ್ಯುಯಲ್ ಟೋನ್ ಥೀಮ್ ಆಳವಡಿಸಲಾಗಿದೆ. ಇದು ಕಾರಿಗೆ ಮತ್ತಷ್ಟು ಆಕರ್ಷಣೆ ತುಂಬಲಿದೆ.

ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

ಇನ್ನು ಸ್ಟಾಪ್ ಸ್ಟ್ಯಾರ್ಟ್ ತಂತ್ರಜ್ಞಾನ, ಕೀಲೆಸ್ ಎಂಟ್ರಿ ಮತ್ತು ಸ್ಟ್ಯಾರ್ಟ್ ಹಾಗೂ ಎಲ್ಲ ಹೊಸತನದ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಪ್ಯಾನೆಲ್ ಸೌಲಭ್ಯಗಳನ್ನು ಪಡೆಯಲಿದೆ.

ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

ಒಂದು ಕ್ರೀಡಾ ಕಾರಿಗೆ ಬೇಕಾದ ಸಕಲ ರೀತಿಯ ಸೌಲಭ್ಯಗಳನ್ನು ಮಿತ ದರಗಳಲ್ಲಿ ಒದಗಿಸುವ ಪ್ರಯತ್ನವನ್ನು ಡಿಸಿ ಅವಂತಿ ಮಾಡಿದೆ.

ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

ಸದಾ ವಿದೇಶಿ ನಿರ್ಮಿತ ಸೂಪರ್ ಅಥವಾ ಕ್ರೀಡಾ ಕಾರು ನೋಡಿ ಬೆಳೆದು ಬಂದಿರುವ ಭಾರತೀಯ ವಾಹನ ಪ್ರೇಮಿಗಳಿಗೆ ಡಿಸಿ ಅವಂತಿ ಸಂಪೂರ್ಣ ಹೊಸ ಅನುಭವ ನೀಡಲಿದೆ.

ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

ಹಾಗಿದ್ದರೂ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ 30ರಿಂದ 40 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರಿನಡಿಯಲ್ಲಿ ರೆನೊದಿಂದ ಆಮದು ಮಾಡಲಾದ 2.0 ಲೀಟರ್ ಫೋರ್ ಸಿಲಿಂಡರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ. ಇದು 340 ತಿರುಗುಬಲದಲ್ಲಿ 250 ಅಶ್ವಶಕ್ತಿ ಉತ್ಪಾದಿಸಲಿದೆ.

ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

ಇನ್ನು ಭವಿಷ್ಯದಲ್ಲಿ ಹೋಂಡಾದ ಹೆಚ್ಚು ಶಕ್ತಿಶಾಲಿ ವಿ6 ಎಂಜಿನ್ (394 ಅಶ್ವಶಕ್ತಿ) ಆಮದು ಮಾಡುವ ಯೋಜನಯಿದೆ. ಅಂತೆಯೇ ಆರು ಸ್ಪಿಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

ಕ್ರೀಡಾ ಕಾರಿಗೆ ತಕ್ಕಂತೆ ಡಿಸಿ ಅವಂತಿ 6 ಸಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

ಆಯಾಮ

ಆಯಾಮ

ಚಕ್ರಾಂತರ - 2,700 ಎಂಎಂ

ಉದ್ದ - 4,623 ಎಂಎಂ

ಅಗಲ - 1,967 ಎಂಎಂ

ಎತ್ತರ - 1,213 ಎಂಎಂ

ಕರ್ಬ್ ಭಾರ - 1,562 ಕೆ.ಜಿ

ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

ಏತನ್ಮಧ್ಯೆ ಗ್ರಾಹಕರಿಗೆ ತಮ ಅಭಿಲಾಷೆಗೆ ತಕ್ಕಂತೆ ಕಾರನ್ನು ವಿಶೇಷವಾಗಿ ಮಾರ್ಪಾಡುಗೊಳಿಸುವ ಅವಕಾಶವನ್ನು ಡಿಸಿ ಅವಂತಿ ಒದಗಿಸುತ್ತಿದೆ.

ಭಾರತದ ಮೊದಲ ಕ್ರೀಡಾ ಕಾರಿನ ಒಳಭಾಗ ಸ್ಕ್ಯಾನಿಂಗ್ !

ಹೊರಭಾಗದಲ್ಲಿ ಪ್ರೀಮಿಯಂ ಬಣ್ಣದೊಂದಿಗೆ 20 ಇಂಚುಗಳ ಅಲಾಯ್ ವೀಲ್ ಸಹ ಕಂಡುಬರಲಿದೆ.

ಸ್ಪೆಷಾಲಿಟಿ

ಸ್ಪೆಷಾಲಿಟಿ

  • ರೋಲ್ ಕೇಜ್ ಡಿಸೈನ್ ಬಾಡಿ,
  • ಉನ್ನತ ಗುಣಮಟ್ಟದ ಇಟಲಿಯನ್ ರಬ್ಬರ್,
  • ಎಲ್ಲ ಚಕ್ರಗಳಿಗೂ ಎಬಿಎಸ್,
  • ಸುರಕ್ಷತೆ ಹಾಗೂ ನಿರ್ವಹಣೆಯ ಸರಿಯಾದ ಹೊಂದಾಣಿಕೆ
  • ಹಗುರ ಹಾಗೂ ಐಷಾರಾಮಿ
  • ರಿವರ್ಸ್ ಕ್ಯಾಮೆರಾ ಬೈ ಹ್ಯಾಲಗನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
  • ದೂರವ್ಯಾಪ್ತಿಯ ವರೆಗೂ ಗೋಚರತೆ,
  • ಅದ್ಭುತ ಗ್ರೌಂಡ್ ಕ್ಲಿಯರನ್ಸ್,

More from DriveSpark

Article Published On: Thursday, August 6, 2015, 10:55 [IST]
English summary
The Avanti Interior in a yellow/black theme featuring Stop Start Technology , Keyless Entry and Start, and the the centrepiece - the all new TFT instrument panel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+