ನನಸಾಗಲಿದೆ ಸೊನಾಟಾ ಹೈಬ್ರಿಡ್ ಕನಸು
ಈಗಷ್ಟೇ ಪ್ರಖ್ಯಾತ ಡೆಟ್ರಾಯ್ಟ್ ಆಟೋ ಶೋದಲ್ಲಿ ನೂತನ ಪಿಕಕ್ ಕಾನ್ಸೆಪ್ಟ್ ಮಾದರಿಯನ್ನು ಹ್ಯುಂಡೈ ಪರಿಚಯಿಸಿರುವುದರ ಬಗ್ಗೆ ವರದಿ ಮಾಡಿರುತ್ತೇವೆ. ಈಗ ಇನ್ನು ಹೆಜ್ಜೆ ಮುಂದೆ ಇಟ್ಟಿರುವ ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆಯು ಉತ್ತರ ಅಮೆರಿಕದ ಅಂತರಾಷ್ಟ್ರೀಯ ವಾಹನ ಪ್ರದರ್ಶನ ಮೇಳದಲ್ಲಿ ಮಗದೊಂದು ಅಚ್ಚರಿಯ ಕೊಡುಗೆಯನ್ನು ನೀಡಿದೆ.
ಹೌದು, ಹ್ಯುಂಡೈ ಸಂಸ್ಥೆಯು ವಿಶ್ವದ ಹೆಸರಾಂತ ಆಟೋ ಶೋದಲ್ಲಿ ಹೊಸ ಸೊನಾಟಾ ಪ್ಲನ್ ಇನ್ ಹೈಬ್ರಿಡ್ ಮಾದರಿಯನ್ನು ಪ್ರದರ್ಶಿಸಿದೆ. ಇದು ಸಂಸ್ಧೆಯ ಮೊದಲ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ (ಪಿಎಚ್‌ಇವಿ) ಆಗಿರಲಿದೆ.
ತವರೂರಾದ ದಕ್ಷಿಣ ಕೊರಿಯಾದಲ್ಲೇ ನಿರ್ಮಾಣ ಹಂತ ತಲುಪಲಿರುವ ಹೊಸ ಹೈಬ್ರಿಡ್ ಕಾರು ಪ್ರಾರಂಭದಲ್ಲ ಆಯ್ದ ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟವಾಗಲಿದೆ.

ವೈಶಿಷ್ಟ್ಯಗಳು
2.0 ಲೀಟರ್ ನು ಫೋರ್ ಸಿಲಿಂಡರ್ ಜಿಡಿಐ ಎಂಜಿನ್,
50 ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರು,
202 ಅಶ್ವಶಕ್ತಿ (6000 ಆವರ್ತನಕ್ಕೆ),
ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್,
ಎಲೆಕ್ಟ್ರಿಕ್ ವ್ಯಾಪ್ತಿ 22 ಮೈಲ್,
ನಗರದಲ್ಲಿ 30 ಮೈಲ್/ಗ್ಯಾಲನ್,
ಹೈವೇಯಲ್ಲಿ 43 ಮೈಲ್/ಗ್ಯಾಲನ್,
ಎರಡು ಸೇರಿ 93 ಮೈಲ್/ಗ್ಯಾಲನ್
ಎರಡು ವರೆ ತಾಸಿನಲ್ಲೇ ರಿಜಾರ್ಜ್


Click it and Unblock the Notifications









