ಡೀಸೆಲ್ ಬೆಲೆ 95 ಪೈಸೆ ಏರಿಕೆ; ಪೆಟ್ರೋಲ್ ಸ್ಥಿರ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವನ್ನು ನಿರ್ಧರಿಸಿ ತೈಲೋತ್ಪನ್ನ ಸಂಸ್ಥೆಗಳು ಪ್ರತಿ 15 ದಿನಗಳಿಗೊಮ್ಮೆ (ಪಾಕ್ಷಿಕ) ತೈಲ ದರಗಳನ್ನು ಪರಿಷ್ಕೃತಗೊಳಿಸುತ್ತಿವೆ. ಇದರಂತೆ ಕಳೆದ 2015 ಅಕ್ಟೋಬರ್ 15ರಂದು ಡೀಸಲ್ ಬೆಲೆಯಲ್ಲಿ 95 ಪೈಸೆ ಏರಿಕೆ ಕಂಡಿದೆ. ಆದರೆ ಪೆಟ್ರೋಲ್ ಬೆಲೆ ಸ್ಥಿರವಾಗಿದೆ.
ಇದರೊಂದಿಗೆ ರಾಷ್ಟ್ರ ರಾಜಧಾನಿ ನವದಹೆಲಿಯಲ್ಲಿ 44.95 ರು.ಗಳಿಷ್ಟಿದ್ದ ಡೀಸೆಲ್ ಬೆಲೆಯು 45.90 ರು.ಗಳಿಗೆ ಏರಿಕೆ ಕಂಡಿದೆ. ಈ ಮೂಲಕ ಪ್ರಸಕ್ತ ತಿಂಗಳಲ್ಲಿ ಎರಡನೇ ಬಾರಿಗೆ ಡೀಸೆಲ್ ದರಗಳಲ್ಲಿ ಏರಿಕೆ ಕಂಡಿದೆ. ಇದಕ್ಕೂ ಮೊದಲು ಅಕ್ಟೋಬರ್ 01ರಂದು 50 ಪೈಸೆ ಏರಿಕೆಯಾಗಿತ್ತು.

ನೂತನ ಬೆಲೆಗಳು ಅಕ್ಟೋಬರ್ 16ರಿಂದಲೇ ಜಾರಿಗೆ ಬಂದಿದೆ. ಹಾಗಿದ್ದರೂ ಪೆಟ್ರೋಲ್ ಬೆಲೆ ಸ್ಥಿರವಾಗಿದ್ದು, ದೆಹಲಿಯಲ್ಲಿ ಲೀಟರ್ ಗೆ 61.20 ರು.ಗಳಾಗಿರಲಿದೆ.
ಇಂಡಿಯನ್ ಒಯಿಲ್ ಕಾರ್ಪ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ (ಎಚ್‌ಪಿಸಿಎಲ್) ಪ್ರತಿ 15 ದಿನಗಳಿಗೊಮ್ಮೆ ಇಂಧನ ಬೆಲೆಯನ್ನು ಪರಿಷ್ಕೃತಗೊಳಿಸುತ್ತಿದೆ.


Click it and Unblock the Notifications








