ಫೆರಾರಿ ಕಾರುಗಳು ಭಾರತದಲ್ಲಿ ಎಷ್ಟು ದುಬಾರಿಯಾಗಿದೆ ಗೊತ್ತಿದೆಯೇ?
ಇಟಲಿಯ ಐಕಾನಿಕ್ ಫೆರಾರಿ ಸೂಪರ್ ಕಾರುಗಳು ಕೋಟಿಗಟ್ಟಲೆ ಬೆಲೆ ಬಾಳುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಶ್ರೀಮಂತ ಗ್ರಾಹಕರನ್ನು ಹೊರತುಪಡಿಸಿ ಇತರೆ ಯಾರು ಈ ಕಾರನ್ನು ಖರೀದಿಸುವ ಗೋಜಿಗೆ ಹೋಗುವುದಿಲ್ಲ. ಅಷ್ಟಕ್ಕೂ ಫೆರಾರಿ ಕಾರುಗಳು ದೇಶದಲ್ಲಿ ಎಷ್ಟು ದುಬಾರಿಯಾಗಿದೆ ಎಂಬುದು ನಿಮಗೆ ಗೊತ್ತಿದೆಯೇ?
ಇವನ್ನೂ ಓದಿ: ಫೆರಾರಿ ಫ್ಯಾಕ್ಟರಿ ಸುತ್ತ ಜಾಲಿ ರೈಡಿಂಗ್
ಈಗ ಇಂದಿನ ಈ ಲೇಖನದಲ್ಲಿ ದೇಶದಲ್ಲಿ ಮಾರಾಟದಲ್ಲಿರುವ ಫೆರಾರಿ ಶ್ರೇಣಿಯ ಸೂಪರ್ ಕಾರುಗಳು ಹಾಗೂ ಅವುಗಳ ಸಂಪೂರ್ಣ ಬೆಲೆ ಮಾಹಿತಿಯನ್ನು ಕೊಡಲಿದ್ದೇವೆ. ಇದಕ್ಕೂ ಮೊದಲು ಭಾರತದಲ್ಲಿ ಫೆರಾರಿ ಸಂಸ್ಥೆ ಮಾರಾಟ ಮಾಡುವ ಮಾದರಿಗಳ ಬಗ್ಗೆ ತಿಳಿಯಿರಿ.

ಭಾರತದಲ್ಲಿ ಮಾರಾಟದಲ್ಲಿರುವ ಫೆರಾರಿ ಸೂಪರ್ ಕಾರುಗಳು:
- ಕ್ಯಾಲಿಫೋರ್ನಿಯಾ ಟಿ ಕನ್ವರ್ಟಿಬಲ್
- 488 ಜಿಟಿಬಿ ಕೂಪೆ
- 458 ಸ್ಪೈಡರ್
- 458 ಸ್ಪೆಷಲ್
- ಎಫ್12 ಬರ್ಲಿನೆಟ್ಟಾ

ಕ್ಯಾಲಿಫೋರ್ನಿಯಾ ಟಿ ಕನ್ವರ್ಟಿಬಲ್
ಬೆಲೆ ಮಾಹಿತಿ (ಮುಂಬೈ ಎಕ್ಸ್ ಶೋ ರೂಂ)
ಎಂಟ್ರಿ ಲೆವೆಲ್ ಫೆರಾರಿ ಕ್ಯಾಲಿಫೋರ್ನಿಯಾ ಟಿ ಕನ್ವರ್ಟಿಬಲ್ ಸೂಪರ್ ಕಾರು ಭಾರತದಲ್ಲಿ 3.30 ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ. ಭಾರತದಲ್ಲಿ ಸೂಪರ್ ಕಾರು ಮಾರುಕಟ್ಟೆ ಏರುಗತ್ತಿಯತ್ತ ಸಾಗುತ್ತಿದೆ. ಇದರಂತೆ ಇಟಲಿ ಸೇರಿದಂತೆ ಜರ್ಮನಿಯ ದುಬಾರಿ ವಾಹನ ತಯಾರಿಕ ಸಂಸ್ಥೆಗಳು ಇತ್ತ ಮುಖ ಮಾಡಿದೆ.

488 ಜಿಟಿಬಿ ಕೂಪೆ
ಬೆಲೆ ಮಾಹಿತಿ (ಮುಂಬೈ ಎಕ್ಸ್ ಶೋ ರೂಂ): 3.84 ಕೋಟಿ ರು.
ಇಟಲಿಯ ಬಹುರಾಷ್ಟ್ರೀಯ ಸ್ಪೋರ್ಟ್ಸ್ ಕಾರು ತಯಾರಕ ಸಂಸ್ಥೆಯಾಗಿರುವ ಫೆರಾರಿಯನ್ನು 1929ನೇ ಇಸವಿಯಲ್ಲಿ ಎನ್ಜೊ ಫೆರಾರಿ (Enzo Ferrari) ಎಂಬವರು ಸ್ಥಾಪಿಸಿದ್ದರು. ಫಾರ್ಮುಲಾ ಒನ್ ಸೇರಿದಂತೆ ಅನೇಕ ರೇಸಿಂಗ್ ಕಾರುಗಳಿಗೆ ಮ್ಯಾರನೆಲೊ (Maranello) ತಲಹದಿಯ ಈ ಕಾರು ಕಂಪನಿ ಪ್ರಖ್ಯಾತವಾಗಿದೆ.

458 ಸ್ಪೈಡರ್
ಬೆಲೆ ಮಾಹಿತಿ (ಮುಂಬೈ ಎಕ್ಸ್ ಶೋ ರೂಂ): 4.07 ಕೋಟಿ ರು.
ಮೊದಲ ಫೆರಾರಿ ರೋಡ್ ಕಾರು 1947ನೇ ಇಸವಿಯಲ್ಲಿ ಬಿಡುಗಡೆಯಾಗಿತ್ತು. 125 ಎಸ್ ಕಾರು 1.5 ಲೀಟರ್ ವಿ12 ಲೀಟರ್‌ನಿಂದ ನಿಯಂತ್ರಿಸಲ್ಪಟ್ಟಿತ್ತು.

458 ಸ್ಪೆಷಲ್
ಬೆಲೆ ಮಾಹಿತಿ (ಮುಂಬೈ ಎಕ್ಸ್ ಶೋ ರೂಂ): 4.25 ಕೋಟಿ ರು.
ಫೆರಾರಿ ಸ್ಥಾಪಕ ಎನ್ಜೊ ಫೆರಾರಿ ರೇಸಿಂಗ್ ಪ್ರಿಯನಾಗಿದ್ದು, 1919ನೇ ಇಸವಿಯಲ್ಲಿ ತಮ್ಮ ರೇಸಿಂಗ್ ಕೆರಿಯರ್ ಆರಂಭಿಸಿದ್ದರು. ಆ ಬಳಿಕ ಅನೇಕ ರೇಸಿಂಗ್‌ಗಳಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು

ಎಫ್12 ಬರ್ಲಿನೆಟ್ಟಾ
ಬೆಲೆ ಮಾಹಿತಿ (ಮುಂಬೈ ಎಕ್ಸ್ ಶೋ ರೂಂ): 4.72 ಕೋಟಿ ರು.
ಪ್ರಸ್ತುತ ಜಗತ್ತಿನ ಅತಿ ದುಬಾರಿ ಹಾಗೂ ಬೆಲೆ ಬಾಳುವ ಸೂಪರ್ ಕಾರುಗಳ ಸ್ಥಾನಗಳಲ್ಲಿ ಫೆರಾರಿ ಒಂದಾಗಿದೆ.


Click it and Unblock the Notifications








